ಅಹಮದಾಬಾದ್ (ಗುಜರಾತ್):ಡೇವಿಡ್ ಮಿಲ್ಲರ್ ಮತ್ತು ಶುಭಮನ್ ಗಿಲ್ ಅವರ 40 ಪ್ಲಸ್ ರನ್‌ಗಳ ಕೊಡುಗೆಯಿಂದ ಗುಜರಾತ್ ಟೈಟಾನ್ಸ್ ನಿಗದಿತ ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ರಾಜಸ್ಥಾನ ರಾಯಲ್ಸ್ ವಿಕೆಟ್ಗಳನ್ನು ಉರುಳಿಸಿದರೂ ರನ್ ರಭಸಕ್ಕೆ ನಿಯಂತ್ರಣ ಹೇರಲಾಗದೇ ಗೆಲುವಿಗಾಗಿ 178 ರನ್ ಗಳಿಸಬೇಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಆಗಮಿಸಿದ ಟೈಟಾನ್ಸ್ ತಂಡವು ವೃದ್ಧಿಮಾನ್ ಸಹಾರನ್ನು ಬೇಗ ಕಳೆದುಕೊಂಡಿತು. ಮೊದಲ ಓವರ್ನ ಮೂರನೇ ಎಸೆತದಲ್ಲಿ 4 ರನ್ ಗಳಿಸಿದ್ದ ಸಹಾ ಬೋಲ್ಟ್ಗೆ ವಿಕೆಟ್ ಕೊಟ್ಟರು. ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಾಯಿ ಸುದರ್ಶನ್ 20 ರನ್ ಗಳಿಸಿ ಜೊತೆಯಾಟ ಉತ್ತಮಗೊಳಿಸುತ್ತಿರುವಾಗ ರನೌಟ್ಗೆ ಬಲಿಯಾದರು.
ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ ಮತ್ತೋರ್ವ ಆರಂಭಿಕ ಶುಭಮನ್ ಗಿಲ್ ಜೊತೆ ಸೇರಿ ರನ್ ಕಲೆ ಹಾಕಿದರು. ಈ ಜೋಡಿ 50 ರನ್‌ಗಳ ಜೊತೆಯಾಟ ಮಾಡಿತು. 19 ಬಾಲ್ನಲ್ಲಿ 1 ಸಿಕ್ಸ್, ಮೂರು ಬೌಂಡರಿಯಿಂದ 28 ರನ್ ಗಳಿಸಿ ಆಡುತ್ತಿದ್ದ ಹಾರ್ದಿಕ್ ಚಹಾಲ್ ಔಟಾದರು. ಗಿಲ್ (45) ತಮ್ಮ ಫಾರ್ಮ್ ಮುಂದುವರೆಸಿದರು. ಆದರೆ ಅರ್ಧಶತಕಕ್ಕೆ 5 ರನ್ ಬಾಕಿ ಇರುವಂತೆ ವಿಕೆಟ್ ಕೊಟ್ಟರು.