ಜೈಪುರ (ರಾಜಸ್ಥಾನ): ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (ಆರ್ಸಿಬಿ) ಅಭಿಮಾನಿಗಳ ಸಂಖ್ಯೆ ಹೆಚ್ಚು ಇದಕ್ಕೆ ಮೊದಲ ಕಾರಣ ವಿರಾಟ್ ಕೊಹ್ಲಿ, ನಂತರ ತಂಡದಲ್ಲಿದ್ದ ಇತರೆ ವಿದೇಶಿ ಬ್ಯಾಟರ್ಗಳಾದ ಗ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಎಂದರೆ ತಪ್ಪಾಗದು. 2008 ರಿಂದ ವಿರಾಟ್ ಕೊಹ್ಲಿ ಆರ್ಸಿಬಿ ಒಂದನ್ನೇ ಪ್ರತಿನಿಧಿಸುತ್ತಿದ್ದಾರೆ. ಆರ್ಸಿಬಿ ವರ್ಷದಿಂದ ವರ್ಷಕ್ಕೆ ಬ್ರ್ಯಾಂಡ್ ಆಗಿ ಬೆಳೆದಂತೆ ವಿರಾಟ್ ತಮ್ಮ ಆಟದಿಂದ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಮುದ್ರಯನ್ನು ನಿರೂಪಿಸುತ್ತಾ ಬಂದಿದ್ದಾರೆ.
ವಿರಾಟ್ ಕೊಹ್ಲಿ ಯಾವಾಗಲೂ ಬೆಂಗಳೂರನ್ನು ಎರಡನೇ ತವರು ಎಂದು ಕರೆಯುತ್ತಾರೆ ಅದಕ್ಕೆ, ಅವರು ತವರಿನ ಅಭಿಮಾನಿಗಳ ಪ್ರೀತಿಯೇ ಕಾರಣ ಎಂದು ಬಹಳಷ್ಟು ಸಾರಿ ಹೇಳಿದ್ದಾರೆ. ವಿರಾಟ್ ಕೊಹ್ಲಿಯ ಕ್ರಿಕೆಟ್ಗೆ ಎಲ್ಲೆಡೆ ಅಭಿಮಾನಿಗಳಿದ್ದಾರೆ. ಆದರೆ ಬೆಂಗಳೂರಿನ ಅಭಿಮಾನಿಗಳೆಂದರೆ ವಿರಾಟ್ಗೆ ಬೇರೆಯೇ ರೀತಿಯ ಅನುಭವ.
"ನಾನು ಮೊದಲ ದಿನದಿಂದ ಒಂದು ಫ್ರಾಂಚೈಸ್‌ಗಾಗಿ ಆಡಿರುವುದು ನಿಜವಾಗಿಯೂ ಅದೃಷ್ಟ ಎಂದು ಭಾವಿಸುತ್ತೇನೆ. ನಾವು ಒಂದೇ ವಿಷಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂಬ ಎರಡೂ ತುದಿಗಳಿಂದ ನಂಬಿಕೆಯ ಆಧಾರದ ಮೇಲೆ ನಿರಂತರ ಸಂಬಂಧವಾಗಿದೆ. ಅಭಿಮಾನಿಗಳು ನನ್ನೊಂದಿಗೆ ನೈಜವಾದ ಅಭಿಮಾನವನ್ನು ವ್ಯಕ್ತಪಡಿಸುವುದನ್ನು ನಾನು ನೋಡಿದ್ದೇನೆ. ನಾವು ಸರಿಯಾದ ಕಾರಣಗಳಿಗಾಗಿ ಆಟವನ್ನು ಆಡುತ್ತೇವೆ" ಎಂದು ವಿರಾಟ್ ಕೊಹ್ಲಿ ಆರ್ಸಿಬಿ ನಡೆಸಿದ ಚಿಟ್ಚ್ಯಾಟ್ನಲ್ಲಿ ಹೇಳಿದ್ದಾರೆ.
ಪ್ರತಿ ವರ್ಷ ಆರ್‌ಸಿಬಿಯೊಂದಿಗೆ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಲು ಎದುರು ನೋಡುತ್ತಿದ್ದೇನೆ. ಇದು ಅವರ ಜೀವನದ ನಿಜವಾಗಿಯೂ ರೋಮಾಂಚನಕಾರಿ ಭಾಗವಾಗಿದೆ ಎಂದು ವಿರಾಟ್ ಹೇಳಿಕೊಂಡಿದ್ದಾರೆ. "ನಾನು ಇಷ್ಟು ದಿನ ಇಲ್ಲಿಗೆ ಬಂದಿರುವುದಕ್ಕೆ ನಾನು ನಿಜವಾಗಿಯೂ ಗೌರವ ಮತ್ತು ಅದೃಷ್ಟಶಾಲಿಯಾಗಿದ್ದೇನೆ, ನಾನು ಪ್ರತಿ ವರ್ಷವೂ ಬರಲು ಇಷ್ಟಪಡುತ್ತೇನೆ ಮತ್ತು ಮತ್ತೆ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸುತ್ತೇನೆ. ಹಾಗಾಗಿ ಇದು ಯಾವಾಗಲೂ ತುಂಬಾ ರೋಮಾಂಚನಕಾರಿಯಾಗಿದೆ." ಎಂದರು.
ವಿರಾಟ್ ಕೊಹ್ಲಿ ಈ ವರೆಗೆ ಆರ್ಸಿಬಿಯಲ್ಲಿ 234 ಪಂದ್ಯಗಳನ್ನು ಆಡಿದ್ದಾರೆ ಮತ್ತು ಫ್ರಾಂಚೈಸಿಗಾಗಿ 7000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ವಿರಾಟ್ ಆಗಿದ್ದು, ಒಂದು ತಂಡಕ್ಕಾಗಿ ಹೆಚ್ಚು ರನ್ಗಳಿಸಿದ ದಾಖಲೆಯೂ ಅವರ ಹೆಸರಿನಲ್ಲಿದೆ. ವಿರಾಟ್ ನಾಯಕರಾಗಿಯೂ ಆರ್ಸಿಬಿಯನ್ನು ಮುನ್ನಡೆಸಿದ್ದಾರೆ. ಅವರು ತಂಡದ ಪ್ರಮುಖ ಬ್ಯಾಟಿಂಗ್ ಬಲದಲ್ಲಿ ಒಬ್ಬರಾಗಿದ್ದಾರೆ. ಈ ವರ್ಷವಂತೂ ವಿರಾಟ್ ಗೋಲ್ಡನ್ ಫಾರ್ಮ್ನಲ್ಲಿದ್ದಾರೆ. ಅವರ ಬ್ಯಾಟ್ನಿಂದ ಈಗಾಗಲೇ 6 ಅರ್ಧಶತಕಗಳು ಬಂದಿದೆ.
ಈ ಆವೃತ್ತಿಯಲ್ಲಿ ವಿರಾಟ್:16ನೇ ಆವೃತ್ತಿಯಲ್ಲಿ ವಿರಾಟ್ 11 ಪಂದ್ಯದಲ್ಲಿ 42 ರನ್ನ ಸರಾಸರಿಯಲ್ಲಿ 133.76 ರ ಸ್ಟ್ರೈಕ್ ರೇಟ್ನಲ್ಲಿ 420 ರನ್ ಗಳಿಸಿದ್ದಾರೆ. ಇದರಲ್ಲಿ 5 ಅರ್ಧಶತಕ ಸೇರಿದೆ. ಅವರ ಈ ವರ್ಷದ ಬೆಸ್ಟ್ ಸ್ಕೋರ್ ಅಜೇಯ 82 ಆಗಿದೆ.
ಇದನ್ನೂ ಓದಿ:ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಚೇತರಿಸಿಕೊಳ್ಳಲಿದ್ದಾರೆ ಉನಾದ್ಕತ್: ವರದಿ