ವೆಸ್ಟ್ ಇಂಡೀಸ್: 500 ಟಿ-20 ಪಂದ್ಯ ಆಡುವ ಮೂಲಕ ವಿಶ್ವದ 2ನೇ ಆಟಗಾರ ಎಂಬ ವಿಶ್ವ ದಾಖಲೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಆಟಗಾರ ಡ್ವೇನ್ ಬ್ರಾವೋ ಭಾಜನರಾಗಿದ್ದಾರೆ. ಸಹ ಆಟಗಾರ ಕೀರನ್ ಪೊಲ್ಲಾರ್ಡ್ ನಂತರ 500 ಟಿ - 20 ಪಂದ್ಯಗಳನ್ನು ಆಡಿದ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
500 ಟಿ -20 ಪಂದ್ಯ ಆಡುವ ಮೂಲಕ ವಿಶ್ವ ದಾಖಲೆ ಬರೆದ ಬ್ರಾವೋ - 500 ಟಿ 20 ಪಂದ್ಯ ಆಡಿದ ಬ್ರಾವೋ
ಮೈದಾನದಲ್ಲಿ ಆಗಾಗ ವಿಶಿಷ್ಟ ಡ್ಯಾನ್ಸ್ ಮಾಡುವ ಮೂಲಕ ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕರನ್ನುರಂಜಿಸುವ ವೆಸ್ಟ್ ಇಂಡೀಸ್ನ ದೈತ್ಯ ಆಟಗಾರ ಡ್ವೇನ್ ಬ್ರಾವೋ ಪ್ರಸ್ತುತ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿದ್ದಾರೆ. ಐಪಿಎಲ್ ಪಂದ್ಯ ಆರಂಭಕ್ಕೂ ಮುನ್ನ ಈ ಅನುಭವಿ ಆಟಗಾರ ವಿಶಿಷ್ಟ ದಾಖಲೆಯೊಂದನ್ನು ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಡ್ವೇನ್ ಬ್ರಾವೋ
ಇಂದು ಕೆರಿಬಿಯನ್ ಪ್ರೀಮಿಯರ್ ಲೀಗ್ (CPL)ನ ಫೈನಲ್ ಪಂದ್ಯ ಆಡಿದ 37 ವರ್ಷದ ಬ್ರಾವೋ ಈ ಮೈಲಿಗಲ್ಲು ತಲುಪಿದ್ದಾರೆ. ಸಿಪಿಎಲ್‌ನಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್‌ನ ಕ್ಯಾಪ್ಟನ್ ಸಹ ಆಗಿದ್ದಾರೆ.
ಇದೇ ಸೆ. 19 ರಿಂದ ಆರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2ನೇ ಹಂತದ ಪಂದ್ಯಕ್ಕಾಗಿ ಬ್ರಾವೋ ದುಬೈಗೆ ಹಾರಲಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಪರ ಆಡುತ್ತಿರುವ ಈ ಅನುಭವಿ ಆಟಗಾರನ ಮೇಲೆ ತಂಡವು ಭಾರಿ ನಿರೀಕ್ಷೆ ಹೊಂದಿದೆ. ಸೆ. 19 ರಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್ಕೆ ಸೆಣಸಲಿದೆ.