ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2023ರ 40ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇಂದು ರಾತ್ರಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯವು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಸೋತ ತಂಡವು ಪಾಯಿಂಟ್ ಪಟ್ಟಿಯಲ್ಲಿ ಕೆಳಕ್ಕೆ ಹೋಗುತ್ತದೆ. ಡೆಲ್ಲಿ ತಂಡ ಕಳೆದ 2 ಪಂದ್ಯಗಳಿಂದ ಸತತ ಪಂದ್ಯಗಳನ್ನು ಗೆದ್ದು ಸಂಭ್ರಮದಲ್ಲಿದೆ, ಹೈದರಾಬಾದ್ ತಂಡವು ಎರಡು ಗೆಲುವಿನ ನಂತರ ಸತತ ಮೂರು ಪಂದ್ಯಗಳನ್ನು ಕಳೆದುಕೊಂಡಿದೆ. ಈ ಎರಡೂ ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೆ ತಲಾ ಏಳು ಪಂದ್ಯಗಳನ್ನು ಆಡಿದ್ದು 2-2 ಪಂದ್ಯಗಳನ್ನು ಮಾತ್ರ ಗೆದ್ದಿವೆ. ಎರಡೂ ತಂಡಗಳು ಕೇವಲ 4-4 ಅಂಕಗಳನ್ನು ಹೊಂದಿವೆ. ಇಂದು ಉಭಯ ತಂಡಗಳು ಎಂಟನೇ ಪಂದ್ಯವನ್ನು ಆಡಲಿವೆ. ಈ ಪಂದ್ಯವನ್ನು ಗೆಲ್ಲುವ ತಂಡವು ಪಾಯಿಂಟ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಸುಧಾರಿಸಲು ಸಾಧ್ಯವಾಗುತ್ತದೆ ಮತ್ತು ಸೋತ ತಂಡ ಕೊನೆಯ ಸ್ಥಾನಕ್ಕೆ ಹೋಗುತ್ತದೆ.
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇದುವರೆಗೆ ಒಟ್ಟು 22 ಪಂದ್ಯಗಳು ನಡೆದಿದೆ. ಉಭಯ ತಂಡಗಳು 11 ರಲ್ಲಿ ಗೆದ್ದಿದ್ದು, ಸಮಾನ ಬಲ ಹೊಂದಿದೆ. ಇದೇ ಆವೃತ್ತಿಯಲ್ಲಿ ಏಪ್ರೀಲ್ 24 ರಂದು ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಡೆಲ್ಲಿ ಕೊಟ್ಟ ಸಂಕ್ಷಿಪ್ತ ಸ್ಕೋರ್ ಬೆನ್ನತ್ತುವಲ್ಲಿ ಎಸ್ಆರ್ಹೆಚ್ ವಿಫವಾಗಿತ್ತು.
ಕಳೆದೆರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೈದರಾಬಾದ್ ಮೇಲೆ ಭಾರೀ ಪೈಪೋಟಿ ನಡೆಸಿದೆ. ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಹೈದರಾಬಾದ್ ಮೈದಾನಕ್ಕೆ ತೆರಳಿ ಡೆಲ್ಲಿ ಸೋಲಿಸಿತ್ತು. ಇದೀಗ ದೆಹಲಿಯ ತವರು ನೆಲದಲ್ಲಿ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳಲು ಸನ್ ರೈಸರ್ಸ್ ಹೈದರಾಬಾದ್ಗೆ ಉತ್ತಮ ಅವಕಾಶ ಸಿಕ್ಕಿದೆ.