ಕರ್ನಾಟಕ

karnataka

ETV Bharat / sports

ಟಾಟಾ ಐಪಿಎಲ್​ ಮೆಗಾ ಹರಾಜು: ಶ್ರೇಯಸ್​, ಇಶಾನ್​, ಹರ್ಷಲ್ ಪಟೇಲ್​ಗೆ ಜಾಕ್​ಪಾಟ್​!? - ಶ್ರೇಯಸ್​ ಅಯ್ಯರ್​

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಟೀಂ ಇಂಡಿಯಾ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್​ ಹಾಗೂ ಹರ್ಷಲ್ ಪಟೇಲ್ ಹೆಚ್ಚಿನ ಮೊತ್ತಕ್ಕೆ ಸೇಲ್​ ಆಗುವ ಸಾಧ್ಯತೆ ದಟ್ಟವಾಗಿದೆ.

IPL Auction 2022
IPL Auction 2022

By

Published : Feb 12, 2022, 4:24 AM IST

ಬೆಂಗಳೂರು:ಇಂಡಿಯನ್​ ಪ್ರೀಮಿಯರ್ ಲೀಗ್​ನ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನಡೆಯಲಿದ್ದು, ಒಟ್ಟು 590 ಕ್ರಿಕೆಟ್ ಪ್ಲೇಯರ್ಸ್​ ಭವಿಷ್ಯ ನಿರ್ಧಾರವಾಗಲಿದೆ. ವಿವಿಧ ಫ್ರಾಂಚೈಸಿಗಳು ತಮ್ಮಿಷ್ಟದ ಪ್ಲೇಯರ್ಸ್​ಗೆ ಮಣೆ ಹಾಕಿ ಖರೀದಿ ಮಾಡಲಿದೆ.

ಈ ಸಲದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 228 ಕ್ಯಾಪ್ಡ್​, 355 ಅನ್​ಕ್ಯಾಪ್ಡ್ ಪ್ಲೇಯರ್ಸ್​ ಇದ್ದು, 10 ಫ್ರಾಂಚೈಸಿಗಳು ಗರಿಷ್ಠ 25 ಹಾಗೂ ಕನಿಷ್ಠ 18 ಪ್ಲೇಯರ್ಸ್ ಖರೀದಿ ಮಾಡಲಿವೆ.

ವಿದೇಶಿ ಆಟಗಾರರ ಜೊತೆ ಭಾರತೀಯ ಪ್ಲೇಯರ್ಸ್ ಕೂಡ ಪೈಪೋಟಿಯಲ್ಲಿದ್ದು, ಪ್ರಮುಖವಾಗಿ ಶ್ರೇಯಸ್​ ಅಯ್ಯರ್​, ಇಶಾನ್​ ಕಿಶನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಹಲ್​​ ದೊಡ್ಡ ಮೊತ್ತಕ್ಕೆ ಸೇಲ್​ ಆಗುವ ಸಾಧ್ಯತೆ ದಟ್ಟವಾಗಿದೆ. ರಾಯಲ್​ ಚಾಲೆಂಜರ್ಸ್​​ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್ ತಂಡಗಳಿಗೆ ನಾಯಕನ ಅಗತ್ಯವಿರುವ ಕಾರಣ ಶ್ರೇಯಸ್​ ಅಯ್ಯರ್​ಗೆ ಮಣೆ ಹಾಕುವ ಸಾಧ್ಯತೆ ಇದೆ.

ಇದನ್ನೂ ಓದಿರಿ:IPL ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗ್ತಿಲ್ಲ ಪಂಜಾಬ್ ಒಡತಿ ಪ್ರೀತಿ ಜಿಂಟಾ.. ಕಾರಣ?

ಯುವ ವಿಕೆಟ್ ಕೀಪರ್ ಬ್ಯಾಟರ್​ ಇಶಾನ್ ಕಿಶನ್ ಕೂಡ ಈ ಸಲದ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ. ಕಳೆದ ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಕೂಡ ಈ ಸಲದ ಬಿಡ್ಡಿಂಗ್​ನಲ್ಲಿ ಗಮನ ಸೆಳೆಯುವುದು ಬಹುತೇಕ ಖಚಿತವಾಗಿದೆ.

ಹರಾಜು ಪ್ರಕ್ರಿಯೆಯಲ್ಲಿ ಹರ್ಷಲ್ ಪಟೇಲ್​ಗೆ ಜಾಕ್​ಪಾಟ್​

ಕಳೆದ ಐಪಿಎಲ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಶಾರ್ದೂಲ್ ಠಾಕೂರ್, ದೀಪಕ್​ ಚಹರ್​, ಯಜುವೇಂದ್ರ ಚಹಲ್​ ಕೂಡ ಹರಾಜು ಪ್ರಕ್ರಿಯೆಯಲ್ಲಿ ಗಮನ ಸೆಳೆಯಲಿದ್ದು, ದೊಡ್ಡ ಮೊತ್ತಕ್ಕೆ ಬಿಕರಿಯಾಗಬಹುದು. ಇದರ ಜೊತೆಗೆ ವಿದೇಶಿ ಪ್ಲೇಯರ್ಸ್​ಗಳಾದ ಕ್ವಿಂಟನ್ ಡಿಕಾಕ್, ಕಗಿಸೊ ರಬಾಡ, ಟ್ರೆಂಟ್​ ಬೌಲ್ಟ್​, ಡೇವಿಡ್ ವಾರ್ನರ್​, ಪ್ಯಾಟ್ ಕಮ್ಮಿನ್ಸ್​ ಹೆಚ್ಚಿನ ಬಿಡ್​​ಗೆ ಸೇಲ್​ ಆಗುವ ಸಾಧ್ಯತೆ ಇದೆ.

ABOUT THE AUTHOR

...view details