ಕರ್ನಾಟಕ

karnataka

ETV Bharat / sports

IPL 2023: ಡಿ.23ಕ್ಕೆ ಹರಾಜು ಪ್ರಕ್ರಿಯೆ.. 405 ಆಟಗಾರರ ಪಟ್ಟಿ ಅಂತಿಮ - ಆಟಗಾರರ ಪಟ್ಟಿ ಅಂತಿಮ

ಕೇರಳದ ಕೊಚ್ಚಿಯಲ್ಲಿ ಡಿ.23ರಂದು ಐಪಿಎಲ್​ ಹರಾಜು ಜರುಗಲಿದೆ. ಒಟ್ಟಾರೆ 405 ಜನ ಆಟಗಾರರನ್ನು ಹರಾಜು ಪ್ರಕ್ರಿಯೆಗೆ ಅಂತಿಮಗೊಳಿಸಲಾಗಿದೆ.

ipl-2023-player-auction-405-cricketers-to-go-under-the-hammer-on-dec-23
IPL 2023: ಡಿ.23ಕ್ಕೆ ಹರಾಜು ಪ್ರಕ್ರಿಯೆ.. 405 ಆಟಗಾರರ ಪಟ್ಟಿ ಅಂತಿಮ

By

Published : Dec 13, 2022, 7:07 PM IST

ನವದೆಹಲಿ: 2023ರ ಐಪಿಎಲ್​ಗೆ ಆಟಗಾರರ ಹರಾಜು ದಿನಾಂಕ ನಿಗದಿಯಾಗಿದ್ದು, ಒಟ್ಟಾರೆ 405 ಜನ ಕ್ರಿಕೆಟಿಗರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 273 ಭಾರತೀಯ ಆಟಗಾರರು ಮತ್ತು 132 ವಿದೇಶಿ ಆಟಗಾರರ ಬಿಕರಿ ನಡೆಯಲಿದೆ.

ಕೇರಳದ ಕೊಚ್ಚಿಯಲ್ಲಿ ಡಿ.23ರಂದು ಐಪಿಎಲ್​ ಹರಾಜು ಜರುಗಲಿದೆ. ಈ ಐಪಿಎಲ್​ ಆವೃತ್ತಿಗೆ ಆರಂಭಿಕ ಪಟ್ಟಿಯಲ್ಲಿ ಒಟ್ಟು 991 ಆಟಗಾರರು ಇದ್ದರು. ಇದರಲ್ಲಿ 369 ಆಟಗಾರರನ್ನು ಹತ್ತು ತಂಡಗಳು ಶಾರ್ಟ್‌ಲಿಸ್ಟ್ ಮಾಡಿವೆ. ಜೊತೆಗೆ 36 ಜನ ಹೆಚ್ಚುವರಿ ಕ್ರಿಕೆಟಿಗರಿಗಾಗಿ ತಂಡಗಳು ಮನವಿ ಮಾಡಿದೆ. ಆದ್ದರಿಂದ ಒಟ್ಟಾರೆ 405 ಜನರನ್ನು ಹರಾಜು ಪ್ರಕ್ರಿಯೆಗೆ ಅಂತಿಮಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈಗ ಗರಿಷ್ಠ 87 ಸ್ಲಾಟ್‌ಗಳು ಲಭ್ಯವಿದ್ದು, ವಿದೇಶಿ ಆಟಗಾರರಿಗೆ 30 ಸ್ಲಾಟ್‌ಗಳನ್ನು ನೀಡಲಾಗಿದೆ. ಹರಾಜಿನ ಗರಿಷ್ಠ 2 ಕೋಟಿಗೂ ಮಿಗಿಲಾದ ಆಟಗಾರರ ಪಟ್ಟಿಯಲ್ಲಿ ವಿದೇಶಿ 19 ಆಟಗಾರರು ಸೇರಿದ್ದಾರೆ.

ಇಂಗ್ಲೆಂಡ್ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್, ಆಲ್ ರೌಂಡರ್ ಸ್ಯಾಮ್ ಕರ್ರಾನ್, ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಗರಿಷ್ಠ ಮೀಸಲು ಬೆಲೆ ಪಟ್ಟಿಯಲ್ಲಿದ್ದಾರೆ. ಅದೇ ರೀತಿಯಾಗಿ 1.5 ಕೋಟಿ ಹರಾಜು ಪಟ್ಟಿಯಲ್ಲಿ 11 ಆಟಗಾರರು ಮತ್ತು 1 ಕೋಟಿ ಪಟ್ಟಿಯಲ್ಲಿ ಮನೀಶ್ ಪಾಂಡೆ ಮತ್ತು ಮಯಾಂಕ್​ ಅಗರ್ವಾಲ್ ಸೇರಿ 20 ಕ್ರಿಕೆಟಿಗರನ್ನು ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿ:ಗೋಜಲಾದ ಭಾರತ ಕ್ರಿಕೆಟ್​ ತಂಡದ ಆಯ್ಕೆ.. ಅಸಮಾಧಾನಕ್ಕೆ ಕಾರಣವಾಗುತ್ತಿವೆಯಾ ಬಿಸಿಸಿಐ ನಿರ್ಧಾರಗಳು?

ABOUT THE AUTHOR

...view details