ಮುಂಬೈ:ಆ್ಯಂಡ್ರೆ ರಸೆಲ್ ಆಲ್ರೌಂಡರ್ ಆಟದ ಹೊರತಾಗಿಯೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 8 ರನ್ಗಳ ಸೋಲು ಅನುಭವಿಸಿತು. ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. 15ನೇ ಆವೃತ್ತಿಯಲ್ಲಿ ಹಿಂದಿನ 34 ಪಂದ್ಯಗಳಲ್ಲಿ ಟಾಸ್ ಗೆದ್ದ ಯಾವುದೇ ತಂಡ ಬ್ಯಾಟಿಂಗ್ ಮಾಡಲು ಮುಂದಾಗಿಲ್ಲ. ಆದರೆ ಹಾರ್ದಿಕ್ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು, 157 ರನ್ಗಳ ಸಾಧಾರಣ ಗುರಿ ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.
ಟೈಟನ್ಸ್ ನೀಡಿದ್ದ 157 ರನ್ ಬೆನ್ನಟ್ಟಿದ ಕೆಕೆಆರ್ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 34 ರನ್ಗಳಾಗುವಷ್ಟರಲ್ಲಿ ಸ್ಯಾಮ್ ಬಿಲ್ಲಿಂಗ್ಸ್(4), ಸುನಿಲ್ ನರೈನ್(5), ನಿತೀಶ್ ರಾಣಾ(2) ಮತ್ತು ಶ್ರೇಯಸ್ ಅಯ್ಯರ್(2) ವಿಕೆಟ್ ಕಳೆದುಕೊಂಡಿತು.
ಆದರೆ ಇಂದೇ ಆವೃತ್ತಿಯಲ್ಲಿ ಮೊದಲ ಅವಕಾಶ ಪಡೆದಿದ್ದ ರಿಂಕು (ಸಿಂಗ್ 35), ವೆಂಕಟೇಶ್ ಅಯ್ಯರ್ ಜೊತೆಗೂಡಿ 45 ರನ್ಗಳ ಜೊತೆಯಾಟ ನೀಡಿದರು. ಈ ಜೋಡಿ ಬೇರ್ಪಡುತ್ತಿದ್ದಂತೆ ಕೆಕೆಆರ್ ಹೊಸ ಬ್ಯಾಟರ್ಗಳು ಗುಜರಾತ್ ಬೌಲಿಂಗ್ ದಾಳಿಗೆ ಉತ್ತರಿಸುವಲ್ಲಿ ವಿಫಲರಾದರು. ಶಿವಂ ಮಾವಿ 2 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಅಬ್ಬರಿಸಿದ ರಸೆಲ್ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 6 ಸಿಕ್ಸರ್ಗಳ ಸಹಿತ 48 ರನ್ಗಳಿಸಿ ಕೊನೆಯ ಓವರ್ನಲ್ಲಿ ಗೆಲ್ಲಲು 5 ಎಸೆತಗಳಲ್ಲಿ 12 ರನ್ ಬೇಕಿದ್ದ ವೇಳೆ ಔಟಾದರು. ಉಮೇಶ್ ಯಾದವ್ ಅಜೇಯ 15 ರನ್ಗಳಿಸಿದರೆ ಔಟಾಗದೇ ಉಳಿದರು.