ಕರ್ನಾಟಕ

karnataka

ETV Bharat / sports

ಸತತ ಐದು ಗೆಲುವು ಆಶಾದಾಯಕ ಬೆಳವಣಿಗೆ: ಕೆ.ಎಲ್​.ರಾಹುಲ್ - K.L rahul latest News

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದ್ದು, ಈ ಜಯ "ಕ್ರಿಕೆಟ್​​ನ ಆಶಾದಾಯಕ ಬೆಳವಣಿಗೆ"ಯ ಫಲಿತಾಂಶವಾಗಿದೆ ಎಂದು ಪಂಜಾಬ್​ ತಂಡದ ನಾಯಕ ಕೆ.ಎಲ್.ರಾಹುಲ್​ ಪಂದ್ಯದ ಬಳಿಕ ಹೇಳಿದ್ದಾರೆ.

ಕಿಂಗ್ಸ್ ಇಲೆವೆನ್ ನಾಯಕ ರಾಹುಲ್ ಹೇಳಿಕೆ
ಕಿಂಗ್ಸ್ ಇಲೆವೆನ್ ನಾಯಕ ರಾಹುಲ್ ಹೇಳಿಕೆ

By

Published : Oct 27, 2020, 9:08 AM IST

Updated : Oct 27, 2020, 3:36 PM IST

ಶಾರ್ಜಾ:ಸೋಮವಾರ ನಡೆದ ಐಪಿಎಲ್​ ಟಿ - 20 ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ಗೆಲುವು ಸಾಧಿಸಿದ್ದು, ಈ ಜಯ "ಆಶಾದಾಯಕ ಬೆಳವಣಿಗೆ"ಯ ಫಲಿತಾಂಶವಾಗಿದೆ ಎಂದು ಪಂಜಾಬ್​ ತಂಡದ ನಾಯಕ ಕೆ.ಎಲ್.ರಾಹುಲ್​ ಹೇಳಿದರು.

"ನಾವೆಲ್ಲರೂ ಒಟ್ಟಾಗಿ ಆಡಿದ್ದೇವೆ. ಎಲ್ಲ ಐದು ಗೆಲುವುಗಳು ಒಬ್ಬ ವ್ಯಕ್ತಿಯಿಂದಲ್ಲ, ಬದಲಾಗಿ ತಂಡದ ಶ್ರಮವಿದೆ. ಪ್ರತಿಯೊಬ್ಬನ ಆಟ, ವಿಭಿನ್ನತೆ ಗೆಲುವಿಗೆ ಕಾರಣ" ಎಂದು ರಾಹುಲ್ ಹೇಳಿದರು.

"ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದೇವೆ. ಪಂದ್ಯಾವಳಿ ಉದ್ದಕ್ಕೂ ನಾವು ಉತ್ತಮವಾಗಿ ಫೀಲ್ಡಿಂಗ್ ಮಾಡಿದ್ದೇವೆ. ಎಲ್ಲರ ಶ್ರಮದಿಂದ ಗೆಲುವು ಸಾಧಿಸಿದ್ದಕ್ಕೆ ಸಂತೋಷವಾಗಿದೆ. ನಾವು ಇನ್ನೂ ಎರಡು ಪಂದ್ಯಗಳನ್ನು ಗೆಲ್ಲಬಹುದು" ಎಂದು ಅವರು ಹೇಳಿದರು.

56 ಎಸೆತಗಳಲ್ಲಿ 66 ರನ್ ಗಳಿಸಿದ ಮಂದೀಪ್ ಸಿಂಗ್ ಬಗ್ಗೆ ರಾಹುಲ್​ ಮಾತನಾಡಿದ್ದು, "ಮಂದೀಪ್​ ತೋರಿಸಿದ ಶ್ರಮ ಇತರರಿಗೆ ಮಾದರಿ. ಆತ ಆಡಿದ ರೀತಿ ಎಲ್ಲರನ್ನೂ ಭಾವುಕರನ್ನಾಗಿ ಮಾಡುತ್ತದೆ. ಅವನ ಆಟ ಆತನ ಕುಟುಂಬದವರಿಗೆ ಹೆಮ್ಮೆ ತರಿಸುತ್ತದೆ" ಎಂದರು.

ಮುರುಗನ್ ಅಶ್ವಿನ್ ಮತ್ತು ರವಿ ಬಿಷ್ಣೋಯ್ ಬಗ್ಗೆ ರಾಹುಲ್ ಮಾತನಾಡಿ, "ಅನಿಲ್ ಕುಂಬ್ಳೆ ಕೋಚ್ ಆಗಿರುವಾಗ, ನಾವು ಇಬ್ಬರು ಲೆಗ್ ಸ್ಪಿನ್ನರ್‌ಗಳೊಂದಿಗೆ ಆಡುತ್ತಿರುವುದು ಆಶ್ಚರ್ಯವೇನಲ್ಲ. ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಗೆಲುವಿಗಾಗಿ ನಿಜವಾಗಿಯೂ ಶ್ರಮಿಸಿದ್ದಾರೆ" ಎಂದರು.

Last Updated : Oct 27, 2020, 3:36 PM IST

ABOUT THE AUTHOR

...view details