ಕರ್ನಾಟಕ

karnataka

ETV Bharat / sports

ಸೂಪರ್ ಓವರ್‌ನಲ್ಲಿ 3 ಡಾಟ್ ಎಸೆತಗಳು ಮಹತ್ವದ ತಿರುವು ಕೊಟ್ಟವು: ಮುಂಬೈ ಕೋಚ್ - ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರು ಇಶಾನ್ ಕಿಶನ್ ಅವರ ಆಟದ ಪರಿಪೂರ್ಣತೆಯನ್ನು ಶ್ಲಾಘಿಸಿದರು.

jayavardhane
jayavardhane

By

Published : Sep 29, 2020, 11:15 AM IST

ದುಬೈ: ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್-2020ರ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು.

ಎಂ​ಐ ವರ್ಸಸ್​​ ಆರ್​ಸಿಬಿ

ಪಂದ್ಯದ ನಂತರದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಮಹೇಲಾ ಜಯವರ್ಧನೆ, ಇಶಾನ್ ಕಿಶನ್ ಅವರ ಆಟದ ಪರಿಪೂರ್ಣತೆಯನ್ನು ಶ್ಲಾಘಿಸಿದರು.

ಇಶಾನ್ ಕಿಶನ್

"ಚೆಂಡನ್ನು ಸ್ವಲ್ಪಮಟ್ಟಿಗೆ ಹಿಡಿಯುವಂತಹ ಪರಿಸ್ಥಿತಿಯನ್ನು ಎರಡೂ ಕಡೆಯವರು ಎದುರಿಸಬೇಕಾಗಿತ್ತು. ನಾವು ಸರಿಯಾಗಿಯೇ ಚೇಸಿಂಗ್ ಮಾಡಿದ್ದೇವೆ. ನಾವು ಬಹುಶಃ ಕೆಲ ರನ್​ಗಳನ್ನು ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಚೆಂಡಿನೊಂದಿಗೆ ನಾವು ಸಾಕಷ್ಟು ಶಿಸ್ತುಬದ್ಧವಾಗಿರಲಿಲ್ಲ" ಎಂದು ಅವರು ಹೇಳಿದರು.

ಕೀರನ್ ಪೊಲಾರ್ಡ್
ಇಶಾನ್ ಕಿಶನ್

"ಸೂಪರ್ ಓವರ್​ನಲ್ಲಿ ನಾವು ಅಕ್ಷರಶಃ ಮೂರು ಡಾಟ್ ಬಾಲ್ ಹೊಂದಿದ್ದೆವು ಎಂದು ನಾನು ಭಾವಿಸುತ್ತೇನೆ. ಅದರಲ್ಲಿ ನಾವು ವಿಕೆಟ್ ಕೂಡ ಕಳೆದುಕೊಂಡೆವು" ಎಂದು ಹೇಳಿದರು.

ಇಶಾನ್ ಕಿಶನ್

ಈ ಗೆಲುವಿನ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಏರಿದರೆ ಎಂಐ ಐದನೇ ಸ್ಥಾನಕ್ಕೆ ಕುಸಿದಿದೆ.

ಬುಮ್ರಾ - ಕೊಹ್ಲಿ

ABOUT THE AUTHOR

...view details