ಅಬುದಾಭಿ:ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಕಾರ್ತಿಕ್ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
ಅಬುದಾಭಿಯ ಮೈದಾನದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಸೋತು ಸುಣ್ಣವಾಗಿರುವ ಕನ್ನಡಿಗ ಕೆ.ಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡಕ್ಕೆ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಇನ್ನು ಈ ಹಿಂದಿನ ಪಂದ್ಯದಲ್ಲಿ ಬಲಿಷ್ಠ ಸಿಎಸ್ಕೆ ವಿರುದ್ಧ ಗೆದ್ದು ಕಮ್ಬ್ಯಾಕ್ ಮಾಡಿರುವ ಕೆಕೆಆರ್ ತನ್ನ ಗೆಲುವಿನ ಟ್ರ್ಯಾಕ್ ಮುಂದುವರೆಸುವ ಇರಾದೆಯಲ್ಲಿದೆ.