ದುಬೈ:ಗಾಯದಿಂದಾಗಿ ಐಪಿಎಲ್‌ನಿಂದ ಹೊರ ಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಸಿಎಸ್‌ಕೆ ತಂಡವನ್ನು ಬೆಂಬಲಿಸುತ್ತಿರಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಡ್ವೇನ್ ಬ್ರಾವೋ ತಂಡದಿಂದ ಹೊರ ಬಿದ್ದಿರುವುದು ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಸಿಎಸ್‌ಕೆ ತಂಡಕ್ಕೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಟೂರ್ನಿಯಿಂದ ಹೊರ ಬಿದ್ದಿರುವ ಡ್ವೇನ್ ಬ್ರಾವೋ ಅಭಿಮಾನಿಗಳಿಗೆ ಮನವಿ ಮಾಡಿರುವ ವಿಡಿಯೋವನ್ನು ಚೆನ್ನೈ ತಂಡ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದೆ. "ಸಿಎಸ್‌ಕೆ ತಂಡ ತೊರೆಯುತ್ತಿರುವುದು ಬೇಸರದ ಸಂಗತಿ. ನೀವೆಲ್ಲರೂ ಸಿಎಸ್‌ಕೆ ತಂಡವನ್ನು ಬೆಂಬಲಿಸಬೇಕೆಂದು ಬಯಸುತ್ತೇನೆ. ನಿಜವಾದ ಸಿಎಸ್‌ಕೆ ಅಭಿಮಾನಿಗಳು ಬೆಬಲಿಸುತ್ತಲೇ ಇರಿ" ಎಂದಿದ್ದಾರೆ.
"ಇದು ನಾವು ನಿರೀಕ್ಷಿಸಿದ ಸೀಸನ್ ಅಲ್ಲ, ನಾವು ನಮ್ಮ ಸಂಪೂರ್ಣ ಶ್ರಮ ಹಾಕಿ ಪ್ರಯತ್ನಿಸಿದ್ದೇವೆ. ಆದರೂ ಕೆಲವೊಮ್ಮೆ ವ್ಯತಿರಿಕ್ತ ಫಲಿತಾಂಶ ಬರುತ್ತದೆ. ನಮ್ಮನ್ನು ಬೆಂಬಲಿಸುತ್ತಲೇ ಇರಿ. ನಾವು ಚಾಂಪಿಯನ್‌ಗಳಂತೆ ಉತ್ತಮವಾಗಿ ಕಂಬ್ಯಾಕ್ ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಸಿಎಸ್‌ಕೆ ತಂಡದ ಸದಸ್ಯರು ಮತ್ತು ಅಭಿಮಾನಿಗಳಾಗಲು ನಾವು ಹೆಮ್ಮೆ ಪಡಬೇಕು ಎಂದು ನಾನು ಭಾವಿಸುತ್ತೇನೆ." ಎಂದಿದ್ದಾರೆ.
ಡೆತ್ ಓವರ್ ಸ್ಪೆಷಲಿಸ್ಟ್ ಡ್ವೇನ್ ಬ್ರಾವೋ ಡೆಲ್ಲಿ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ಕೆಲವೊಂದು ವೈಯಕ್ತಿಕ ಕಾರಣಗಳಿಂದಾಗಿ ಈಗಾಗಲೇ ಸಿಎಸ್‌ಕೆ ತಂಡದಿಂದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ತಂಡದಿಂದ ಹೊರಗುಳಿದಿರುವುದು ಸಿಎಸ್ಕೆಗೆ ಹಿನ್ನಡೆಯಾಗಿದೆ.