ಕರ್ನಾಟಕ

karnataka

ETV Bharat / sports

ಆರ್​ಸಿಬಿಯ ಜೋಡೆತ್ತುಗಳಿಂದ ಐಪಿಎಲ್​ನಲ್ಲಿ ಹೊಸ ದಾಖಲೆ! - ಜೊತೆಯಾಟದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿಡಿ ದಾಖಲೆ

ಜೊತೆಯಾಟದ ಮೂಲಕ ಗಮನ ಸೆಳೆಯುತ್ತಿರುವ ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ಎ.ಬಿ.ಡಿವಿಲಿಯರ್ಸ್ ಹೊಸದೊಂದು ದಾಖಲೆ ಸೃಷ್ಟಿಸಿದ್ದಾರೆ.

virat and abd
ವಿರಾಟ್ ಹಾಗೂ ಎಬಿಡಿ

By

Published : Oct 13, 2020, 8:21 AM IST

ಶಾರ್ಜಾ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎ.ಬಿ.ಡಿವಿಲಿಯರ್ಸ್ ಐಪಿಎಲ್​ ಇತಿಹಾಸದಲ್ಲಿ ಹೊಸದೊಂದು ದಾಖಲೆ ಸೃಷ್ಟಿಸಿದ್ದಾರೆ.

ಸೋಮವಾರ ಶಾರ್ಜಾ ಇಂಟರ್​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 47 ಎಸೆತಗಳಲ್ಲಿ 100 ರನ್​ಗಳ ಜೊತೆಯಾಟ ಆಡಿರುವ ವಿರಾಟ್ ಹಾಗೂ ಎಬಿಡಿ ಈವರೆಗೆ ಒಟ್ಟು 10 ಬಾರಿ ಜೊತೆಯಾಟದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಇದೊಂದು ದಾಖಲೆಯಾಗಿದ್ದು, ಕೊಹ್ಲಿ ಹಾಗೂ ಕ್ರಿಸ್ ಗೇಲ್ ಜೊತೆಯಾಟದಲ್ಲಿ 9 ಬಾರಿ ಶತಕ ಬಾರಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಮುಡಿಗೆ ಇದು ಮತ್ತೊಂದು ಕಿರೀಟವಾಗಿದೆ. ಇದಾದ ನಂತರ ಸನ್ ​ರೈಸರ್ಸ್​ ಹೈದರಾಬಾದ್​ನ ಆಟಗಾರರಾದ ಶಿಖರ್ ಧವನ್ ಹಾಗೂ ಡೇವಿಡ್ ವಾರ್ನರ್ ಜೊತೆಯಾಟದಲ್ಲಿ 6 ಬಾರಿ ಶತಕ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ನ ಗೌತಮ್ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ 5 ಬಾರಿ ಜೊತೆಯಾಟದಲ್ಲಿ ಶತಕ ದಾಖಲಿಸಿದ್ದಾರೆ.

ಕೊಹ್ಲಿ ಹಾಗೂ ಎಬಿಡಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ 3 ಸಾವಿರ ರನ್ ಕಲೆಹಾಕಿದ ಜೋಡಿಯಾಗಿದ್ದು, ಕ್ರಿಸ್ ಗೇಲ್ ಹಾಗೂ ಕೊಹ್ಲಿ ಜೊತೆಯಾಟದಲ್ಲಿ 2,782 ಗಳಿಸಿದ್ದಾರೆ. ಧವನ್ ಹಾಗೂ ವಾರ್ನರ್ ಜೋಡಿ 2,357 ರನ್ ಕಲೆಹಾಕಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಎಬಿಡಿ 33 ಎಸೆತಗಳಿಗೆ 73 ರನ್ ದಾಖಲಿಸಿದ್ದು, ಕೊಹ್ಲಿ 28 ಎಸೆತಗಳಿಗೆ 33 ರನ್ ಗಳಿಸಿದರು. ಇದೇ ವೇಳೆ ಆ್ಯರನ್ ಫಿಂಚ್ 37 ಎಸೆತಗಳಲ್ಲಿ 47 ರನ್ ಗಳಿಸಿ ಆರ್​ಸಿಬಿ ಬೃಹತ್ ಮೊತ್ತ ಕಲೆಹಾಕಲು ಸಹಕರಿಸಿದರು.

ABOUT THE AUTHOR

...view details