ಅಬುಧಾಬಿ:2020ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಡಿದ ಮೊದಲ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಲೂಕಿ ಫರ್ಗ್ಯುಸನ್, ಹೈದರಾಬಾದ್ ವಿರುದ್ಧ ಕೆಕೆಆರ್ ಗೆಲುವು ಸಾಧಿಸಲು ಪ್ರಮುಖ ಕಾರಣರಾಗಿದ್ದಾರೆ.
ನಾಲ್ಕು ಓವರ್ ಬೌಲಿಂಗ್ ಮಾಡಿದ ಫರ್ಗ್ಯುಸನ್ ಕೇವಲ 15 ರನ್ ಬಿಟ್ಟುಕೊಟ್ಟು ಪ್ರಮುಖ ಮೂರು ವಿಕೆಟ್ ಕಬಳಿಸಿದ್ರು. ಅಲ್ಲದೆ ಸೂಪರ್ ಓವರ್ನ ಮೊದಲ ಎಸೆತದಲ್ಲೇ ಹೈದರಾಬಾದ್ ತಂಡದ ನಾಯಕ ಡೆವಿಡ್ ವಾರ್ನರ್ ವಿಕೆಟ್ ಪಡೆದು ಕೆಕೆಆರ್ ಗೆಲುವನ್ನು ಸುಲಭಗೊಳಿಸಿದ್ರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ಸೂಪರ್ ಓವರ್ನ ಮೊದಲ ಎಸೆತದಲ್ಲೇ ವಾರ್ನರ್ ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು ಎಂದಿದ್ದಾರೆ.
ಮಾರ್ಗಾನ್ ಶಾಂತತೆಯಿಂದ ನಮ್ಮೆಲ್ಲರನ್ನು ಮುನ್ನಡೆಸುತ್ತಿರುವ ರೀತಿ ಅದ್ಭುತವಾಗಿದೆ. ಖಂಡಿತವಾಗಿಯೂ ನನ್ನ ಯೋಜನೆ ಆಟದ ಉದ್ದಕ್ಕೂ ಕೆಲಸ ಮಾಡುತ್ತಿತ್ತು. ನಾವು ಈ ಗೆಲುವನ್ನು ಆನಂದಿಸುತ್ತೇವೆ ಎಂದಿದ್ದಾರೆ.
164 ರನ್ಗಳ ಗುರಿ ಪಡೆದಿದ್ದ ಸನ್ ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 163 ರನ್ ಗಳಿಸುವ ಮೂಲಕ ಟೈ ಸಾಧಿಸಿತು. ಆದರೆ ಹೈದರಾಬಾದ್ ತಂಡ ಫರ್ಗ್ಯುಸನ್ ಎಸೆದ ಸೂಪರ್ ಓವರ್ನಲ್ಲಿ ಕೇವಲ 3 ಎಸೆತಗಳಲ್ಲಿ 2 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡಿತು. 3 ರನ್ಗಳ ಗುರಿಯನ್ನು ಕೆಕೆಆರ್ 4 ಎಸೆತಗಳಲ್ಲಿ ತಲುಪಿ ಜಯ ಸಾಧಿಸಿತು.