ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ 2021ರ ಐಪಿಎಲ್ ಹರಾಜಿಗೂ ಮುನ್ನವೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂಟು ಫ್ರಾಂಚೈಸಿಗಳಿಂದ 57 ಆಟಗಾರರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ತಂಡದಿಂದ ಗೇಟ್ ಪಾಸ್ ಪಡೆದಿರುವ ಆಟಗಾರರು ಯಾವ ಫ್ರಾಂಚೈಸಿಯತ್ತ ಹೋಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮುಂಬೈ ಇಂಡಿಯನ್ಸ್ (ಎಂಐ) ಲಸಿತ್ ಮಾಲಿಂಗ, ರಾಜಸ್ಥಾನ ರಾಯಲ್ಸ್ ಮಾಜಿ ನಾಯಕ ಸ್ಟೀವ್ ಸ್ಮಿತ್, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಕೂಡ ಈ ಬಿಡುಗಡೆ ಪಟ್ಟಿಯಲ್ಲಿ ಸೇರಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೆಚ್ಚು ಆಟಗಾರರನ್ನ (10 ಆಟಗಾರರು) ಬಿಡುಗಡೆ ಮಾಡಿದೆ. ಮಧ್ಯಮ ವೇಗಿ ಉಮೇಶ್ ಯಾದವ್, ಕ್ರಿಸ್ ಮೊರಿಸ್, ಡೇಲ್ ಸ್ಟೇನ್ ಮತ್ತು ಆ್ಯರನ್ ಫಿಂಚ್ ಸೇರಿದಂತೆ 10 ಆಟಗಾರರನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪಾರ್ಥಿವ್ ಪಟೇಲ್ ಕೂಡ ಸೇರಿದ್ದು, ಅವರು ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.
ಆಲ್‌ರೌಂಡರ್ಸ್ ಹರ್ಷಲ್ ಪಟೇಲ್ ಮತ್ತು ಡೇನಿಯಲ್ ಸ್ಯಾಮ್ಸ್ ಅವರನ್ನು ಆರ್‌ಸಿಬಿ ಖರೀದಿಸಿರುವುದಾಗಿ ಡೆಲ್ಲಿ ಕ್ಯಾಪಿಟಲ್ಸ್ ಹೇಳಿಕೆ ಬಿಡುಗಡೆ ಮಾಡಿದೆ. ಆದಾಗ್ಯೂ, ಆರ್‌ಸಿಬಿ ಅವರ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಬಿಸಿಸಿಐ ಇನ್ನೂ ಹರಾಜು ದಿನಾಂಕವನ್ನು ಪ್ರಕಟಿಸಿಲ್ಲ.
8 ಫ್ರಾಂಚೈಸಿಗಳು ಉಳಿಸಿಕೊಂಡ ಮತ್ತು ಕೈಬಿಟ್ಟ ಆಟಗಾರರ ಪಟ್ಟಿ ಈ ಕೆಳಗಿದೆ
- ಕಿಂಗ್ಸ್ ಇಲೆವೆನ್ ಪಂಜಾಬ್
ಫ್ರಾಂಚೈಸಿ ಕೈಬಿಟ್ಟವರು:ಗ್ಲೆನ್ ಮ್ಯಾಕ್ಸ್ವೆಲ್, ಕನ್ನಡಿಗರಾದ ಕರುಣ್ ನಾಯರ್, ಕೃಷ್ಣಪ್ಪ ಗೌತಮ್, ಹಾರ್ಡಸ್ ವಿಲ್ಜೋಯೆನ್, ಜಗದೀಶ್ ಸುಚಿತ್, ಮುಜೀಬ್ ಉರ್ ರೆಹಮಾನ್, ಶೆಲ್ಡನ್ ಕಾಟ್ರೆಲ್, ಜೇಮ್ಸ್ ನೀಶಾಮ್, ತೇಜಂದರ್ ಸಿಂಗ್.
ಉಳಿಸಿಕೊಂಡವರು:ಕೆ.ಎಲ್.ರಾಹುಲ್ (ನಾಯಕ), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಮಂದೀಪ್ ಸಿಂಗ್, ಸರ್ಫರಾಜ್ ಖಾನ್, ದೀಪಕ್ ಹೂಡ, ಸಿಮ್ರಾನ್ ಸಿಂಗ್, ಮೊಹಮ್ಮದ್ ಶಮಿ, ಕ್ರಿಸ್ ಜೋರ್ಡಾನ್, ದರ್ಶನ್ ನಲ್ಕಂಡೆ, ರವಿ ಬಿಷ್ಣೋಯ್, ಮುರುಗನ್ ಅಶ್ವಿನ್, ಹರ್ಷೀಪ್ ಸಿಂಗ್, ಇಶಾನ್ ಪೊರೆಲ್.
- ಸನ್ರೈಸರ್ಸ್ ಹೈದರಾಬಾದ್
ಬಿಡುಗಡೆ ಮಾಡಿದವರು:ಬಿಲ್ಲಿಸ್ಟ್ಯಾನ್‌ಲೇಕ್, ಫ್ಯಾಬಿಯನ್ ಅಲೆನ್, ವೈ.ಪೃಥ್ವಿರಾಜ್, ಸಂಜಯ್ ಯಾದವ್ ಮತ್ತು ಬಿ.ಸಂದೀಪ್
ಉಳಿಸಿಕೊಂಡಿರುವ ತಂಡ:ಡೇವಿಡ್ ವಾರ್ನರ್ (ನಾಯಕ), ಅಭಿಷೇಕ್ ಶರ್ಮಾ, ಬಿಸಿಲ್ ಥಂಪಿ, ಭುವನೇಶ್ವರ್ ಕುಮಾರ್, ಜಾನಿ ಬೇರ್ಸ್ಟೋವ್, ಕೇನ್ ವಿಲಿಯಮ್ಸನ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಶಹಬಾಜ್ ನದೀಮ್, ಶ್ರೀವಾತ್ಸ್ ಗೋಸ್ವಾಮಿ, ಸಿದ್ದಾರ್ಥ್ ಅಹ್ಮದ್, ಟಿ.ನಟರಾಜನ್, ವಿಜಯ್ ಶಂಕರ್, ವೃದ್ಧಿಮಾನ್ ಸಹಾ, ಅಬ್ದುಲ್ ಸಮದ್, ಮಿಚೆಲ್ ಮಾರ್ಷ್, ಜೇಸನ್ ಹೋಲ್ಡರ್, ಪ್ರಿಯಂ ಗರ್ಗ್, ವಿರಾಟ್ ಸಿಂಗ್.
- ಡೆಲ್ಲಿ ಕ್ಯಾಪಿಟಲ್ಸ್
ಹೊರಗಿಟ್ಟ ಆಟಗಾರರು:ಅಲೆಕ್ಸ್ ಕ್ಯಾರಿ, ಕೀಮೋ ಪಾಲ್, ಸಂದೀಪ್ ಲಮಿಚಾನೆ, ತುಷಾರ್ ದೇಶಪಾಂಡೆ, ಮೋಹಿತ್ ಶರ್ಮಾ, ಜೇಸನ್ ರಾಯ್.
ಉಳಿಸಿಕೊಂಡ ತಂಡ:ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯಾ ರಹಾನೆ, ಅಮಿತ್ ಮಿಶ್ರಾ, ಅವೇಶ್ ಖಾನ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಇಶಾಂತ್ ಶರ್ಮಾ, ಕಗಿಸೊ ರಬಡಾ, ಪೃಥ್ವಿ ಶಾ, ಆರ್.ಅಶ್ವಿನ್, ರಿಷಭ್ ಪಂತ್, ಶಿಖರ್ ಧವನ್, ಲಲಿತ್ ಯಾದವ್, ಮಾರ್ಕಸ್ ಸ್ಟೋಯ್ನಿಸ್, ಡೇನಿಯಲ್ಸ್ ಸ್ಯಾಮ್ಸ್ (ಆರ್ಸಿಬಿಗೆ ಟ್ರೇಡ್), ಅನ್ರಿಚ್ ನಾರ್ಟ್ಜೆ, ಪ್ರವೀಣ್ ದುಬೆ, ಕ್ರಿಸ್ ವೋಕ್ಸ್, ಶಿಮ್ರಾನ್ ಹೆಟ್ಮೆಯಾರ್.
- ರಾಯಲ್ ಚಾಲೆಂಜರ್ಸ್ ಬೆಂಗಳೂರು