ಪೋರ್ಟ್ ಆಫ್ ಸ್ಪೇನ್ (ವೆಸ್ಟ್ ಇಂಡೀಸ್): ಭಾರತ ಕ್ರಿಕೆಟ್ ತಂಡದ ಇತಿಹಾಸವನ್ನು ಅವಲೋಕಿಸಿದರೆ ಈ ಮೈದಾನದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ 200ರ ಗಡಿ ದಾಟಲು ಸಾಧ್ಯವಾಗಿಲ್ಲ ಮತ್ತು ಈ ಪಿಚ್‌ನಲ್ಲಿ ಭಾರತದ ಬ್ಯಾಟರ್ಗಳು ಯಾವಾಗಲೂ ಪರದಾಡುತ್ತಲೇ ಇದ್ದಾರೆ. ಮೊದಲ ಏಕದಿನ ಪಂದ್ಯದಲ್ಲೂ ಇದೇ ದೃಶ್ಯ ಕಂಡು ಬಂದಿತ್ತು. ತವರು ನೆಲದಲ್ಲಿ ಸ್ವತಃ ಕೆರಿಬಿಯನ್ನರೂ ಸಹ ಈ ಪಿಚ್‌ನಲ್ಲಿ ಸಂಕಷ್ಟಕ್ಕೆ ಒಳಗಾದರು. ಮೊದಲ ಪಂದ್ಯದಲ್ಲಿ ಈ ಸ್ಕೋರ್ 200ರ ಆಸುಪಾಸಿನಲ್ಲಿ ಅಥವಾ 200 ಗಡಿ ದಾಟಿದ್ದರೆ ಪಂದ್ಯದ ಕಥೆಯೇ ಬದಲಾಗಬಹುದಿತ್ತು.
ಭಾರತ ತಂಡವು ಈ ಪಿಚ್‌ನಲ್ಲಿ ಒಟ್ಟು 4 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವು ಮೇ 3, 1997 ರಂದು ನಡೆದ ಪಂದ್ಯದಲ್ಲಿ ಕಂಡುಬಂದಿತ್ತು. ಅಂದು ಭಾರತ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 199 ರನ್ ಗಳಸಿತ್ತು. ಆದರೆ ಈ ಪಂದ್ಯವನ್ನು ಭಾರತ ತಂಡ ಹೀನಾಯವಾಗಿ ಸೋತಿತ್ತು.
ಭಾರತ ತಂಡವು ಮಾರ್ಚ್ 7, 1989 ರಂದು ಬ್ರಿಡ್ಜ್‌ಟೌನ್ ಮೈದಾನದಲ್ಲಿ ಮೊದಲ ಪಂದ್ಯವನ್ನು ಆಡಿತ್ತು. ವೆಸ್ಟ್ ಇಂಡೀಸ್ ತಂಡವು ಈ ಪಂದ್ಯದಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು 248 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ 48 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 198 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ವೆಸ್ಟ್ ಇಂಡೀಸ್ ತಂಡ 50 ರನ್‌ಗಳಿಂದ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ 117 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗಾಗಿ ಆರಂಭಿಕ ಆಟಗಾರ ಡೆಸ್ಮಂಡ್ ಹೇನ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.
ಭಾರತ ತಂಡವು ಬ್ರಿಡ್ಜ್‌ಟೌನ್‌ನಲ್ಲಿ 3 ಮೇ 1997 ರಂದು ಎರಡನೇ ಪಂದ್ಯವನ್ನು ಆಡಿದಾಗ ಭಾರತ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 199 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಇದು ಈ ಮೈದಾನದಲ್ಲಿ ತಂಡದ ಗರಿಷ್ಠ ಸ್ಕೋರ್ ಆಗಿದೆ. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಶಿವನಾರಾಯಣ ಚಂದ್ರಪಾಲ್ ಅವರ ಅಮೋಘ ಶತಕದಿಂದ ಮತ್ತೊಮ್ಮೆ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡವು 44.4 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆದ್ದಿತ್ತು. 109 ರನ್‌ಗಳ ಅದ್ಭುತ ಶತಕದ ಇನ್ನಿಂಗ್ಸ್‌ಗಾಗಿ ಶಿವನಾರಾಯಣ್ ಚಂದ್ರಪಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.