ಕರ್ನಾಟಕ

karnataka

ETV Bharat / sports

IND vs RSA 3ನೇ ODI : ಕುಲ್​ದೀಪ್​ ಮಿಂಚು, ಭಾರತದ ಬೌಲಿಂಗ್​ಗೆ ನಲುಗಿದ ಹರಿಣಗಳು - ಈಟಿವಿ ಭಾರತ ಕನ್ನಡ

ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಮಿಲ್ಲರ್​ ಪಡೆ ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿದೆ. 99 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿದೆ.

india vs south africa 3rd odi hundred run target for India
ಕುಲ್​ದೀಪ್​ ಮಿಂಚು, ಭಾರತದ ಬೌಲಿಂಗ್​ಗೆ ನಲುಗಿದ ಹರಿಣಗಳು

By

Published : Oct 11, 2022, 5:13 PM IST

ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಹರಿಣಗಳು ಬ್ಯಾಟಿಂಗ್​ ವೈಫಲ್ಯ ಎದುರಿಸಿದ್ದಾರೆ. ಭಾರತೀಯರ ಕರಾರುವಕ್ಕಾದ ದಾಳಿಗೆ 99 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿದೆ. ಕುಲ್​ದೀಪ್​ ಯಾದವ್ 4 ವಿಕೆಟ್​​​ ಕಬಳಿಸಿ ಹರಿಣಗಳನ್ನು ಕಟ್ಟಿ ಹಾಕಿದರು. ಭಾರತಕ್ಕೆ 100 ರನ್​ಗಳ ಸಾಧಾರಣ ಗುರಿಯನ್ನು ಹರಿಣಗಳು ನೀಡಿದ್ದಾರೆ.

ಟಾಸ್​ ಗೆದ್ದ ಶಿಖರ್​ಧವನ್​ ದಕ್ಷಿಣ ಆಫ್ರಿಕಾಕ್ಕೆ ಬ್ಯಾಟಿಂಗ್​ ಮಾಡುವಂತೆ ಆಹ್ವಾನ ನೀಡಿದರು. ಬ್ಯಾಟಿಂಗ್​ಗೆ ಇಳಿದ ಹರಿಣಗಳಿಗೆ ಭಾರತೀಯ ಬೌಲರ್​ಗಳು ಕಾಡಿದರು. ಆರಂಭಿಕರಾಗಿ ಬಂದ ಜನ್ನೆಮನ್ ಮಲನ್(15) ಮತ್ತು ಕ್ವಿಂಟನ್ ಡಿ ಕಾಕ್(6) ಸಿರಾಜ್​ ಮತ್ತು ವಾಷಿಂಗ್ಟನ್ ಸುಂದರ್​ಗೆ ವಿಕೆಟ್​ ಒಪ್ಪಿಸಿದರು.

ಹೆನ್ರಿಕ್ ಕ್ಲಾಸೆನ್ 34 ರನ್​ ಹೊಡೆದು ಬೌಲರ್​ಗಳನ್ನು ಕಾಡಿದ್ದು ಬಿಟ್ಟರೆ ಮತ್ತೆಲ್ಲರೂ ತರಗೆಲೆಗಳಂತೆ ವಿಕೆಟ್​ ಒಪ್ಪಸಿದರು. ರೀಜಾ ಹೆಂನ್ಸಿಕ್ಸ್(3)​, ಐಡೆನ್ ಮಾರ್ಕ್ರಂ(9), ಡೇವಿಡ್ ಮಿಲ್ಲರ್(7), ಆಂಡಿಲೆ ಫೆಲುಕ್ವಾಯೊ(5), ಮಾರ್ಕೊ ಜಾನ್ಸೆನ್(14), ಜಾರ್ನ್ ಫೋರ್ಚುಯಿನ್(1) ಮತ್ತು ಅನ್ರಿಚ್ ನಾರ್ಟ್ಜೆ(0) ಕ್ರಿಸ್​ನಲ್ಲಿ ನಿಲ್ಲಲೇ ಇಲ್ಲ.

ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್​ ಪಡೆದು ಮಿಂಚಿದರೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಮೊಹಮದ್ ಸಿರಾಜ್ ತಲಾ ಎರಡು ವಿಕೆಟ್​ ಪಡೆದರು.

ಇದನ್ನೂ ಓದಿ :India vs South Africa ODI: ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ.. ಗೆದ್ದವರಿಗೆ ಸರಣಿ ಸಿಹಿ

ABOUT THE AUTHOR

...view details