ಸೌತಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯಕ್ಕೆ ವರುಣನ ಕಾಟ ಮುಂದುವರಿದಿದ್ದು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಿನ ದಿನದಾಟವೂ ಮಳೆಗಾಹುತಿ ಆಗಿದೆ. ಸೌತಾಂಪ್ಟನ್ನಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಅಂಪೈರ್ಗಳು ಸೋಮವಾರದ ಆಟ ರದ್ದು ಪಡಿಸಿದ್ದಾರೆ.
WTC ಫೈನಲ್ ಪಂದ್ಯದ ಮೊದಲ ದಿನವಾರ ಶುಕ್ರವಾರ ಕೂಡ ಮಳಯಿಂದ ರದ್ದಾಗಿತ್ತು. ಎರಡನೇ ದಿನ ಪಂದ್ಯ ಆರಂಭವಾಗಿತ್ತಾದರು ಮಂದ ಬೆಳಕಿನ ಕಾರಣ ಕೇವಲ 65 ಓವರ್ಗಳ ಆಟ ಮಾತ್ರ ನಡೆದಿತ್ತು. 3ನೇ ದಿನ ಇನ್ನು 19 ಓವರ್ಗಳ ಆಟ ಬಾಕಿಯಿದ್ದಾಗ ಮಳೆ ಮತ್ತು ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ ನಾಲ್ಕನೇ ದಿನದಾಟ ಒಂದೂ ಎಸೆತ ಕಾಣದೆ ರದ್ದಾಗಿದೆ. ನಿನ್ನೆ ರಾತ್ರಿಯಿಂದಲೂ ನಿರಂತರ ಮಳೆಯಾಗಿದೆ. ಇಂದು ಬೆಳಗ್ಗೆ ಸತತ 5ರಿಂದ 6 ಗಂಟೆಗಳ ಕಾಲ ನಿರಂತರ ಮಳೆಯಾಗಿತ್ತು. ಮಧ್ಯ ಬಿಡುವು ನೀಡಿದ್ದರಿಂದ ಒಂದೆರೆಡು ಸೆಷನ್ ಆರಂಭವಾಗಬಹುದು ಎಂಬ ನಿರೀಕ್ಷಿಸಲಾಗಿತ್ತು. ಆದರೆ, ಮಳೆ ಮತ್ತೆ ಆಗಮಿಸಿದ್ದರಿಂದ ಕೊನೆಗೆ ದಾರಿಯಿಲ್ಲದೇ ನಾಲ್ಕನೇ ದಿನದಾಟವನ್ನು ರದ್ದುಗೊಳಿಸಲಾಯಿತು.