ಇಂದೋರ್(ಮಧ್ಯಪ್ರದೇಶ):ಡೆವೊನ್ ಕಾನ್ವೇಯ ಶತಕದ ನಡುವೆಯೂ ಭಾರತೀಯ ಬೌಲರ್ಗಳ ಕರಾರುವಕ್ಕು ದಾಳಿಯಿಂದ90ರನ್ಗಳ ಜಯ ಭಾರತದ್ದಾಗಿದೆ. ಕಿವೀಸ್ ಎದುರಿನ ಏಕದಿನ ಸರಣಿಯನ್ನು ವೈಟ್ವಾಶ್ ಮಾಡಿರುವ ಬ್ಲೂ ಬಾಯ್ಸ್ ಐಸಿಸಿ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದೆ. ಭಾರತದ ಪರ ಇಬ್ಬರು ಆರಂಭಿಕರು ಶತಕ ಗಳಿಸಿ, ದ್ವಿಶತಕದ ಜೊತೆಯಾಟ ನೀಡಿದ್ದರು. ಅಲ್ಲದೇ ಉಪನಾಯಕ ಹಾರ್ದಿಕ್ ಪಾಂಡ್ಯರ ಅರ್ಧಶತಕದ ನೆರವಿನಿಂದ ಭಾರತ 385 ರನ್ ಗಳಿಸಿತ್ತು.
ಭಾರತ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನುಹತ್ತಿದ್ದ ಬ್ಲಾಕ್ಕ್ಯಾಪ್ಸ 41.2 ಓವರ್ಗೆ ತನ್ನೆಲ್ಲಾ ವಿಕೇಟ್ಗಳನ್ನು ಕೆಳೆದುಕೊಂಡು 295 ರನ್ ಗಳಿಸಿತ್ತು. ಭಾರತ 90 ರನ್ಗಳ ಅಂತರದ ಗೆಲುವು ಸಾಧಿಸಿತು. ಭಾರತದ ಪರ ಸ್ವಿನ್ನಲ್ಲಿ ಕುಲ್ಚಾ ಜೋಡಿ 5 ವಿಕೆಟ್ ತೆಗೆದು ಮೋಡಿ ಮಾಡಿದರು. ವೇಗದಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿ ಪಾರಮ್ಯ ಮೆರೆದರು.
ಬ್ಯಾಟಿಂಗ್ನಲ್ಲಿ ಅರ್ಧ ಶತಕ ಗಳಿಸಿ ಮಿಂಚಿದ್ದ ಉಪನಾಯಕ ಹಾರ್ದಿಕ್ ಇಂದು ಮೊದಲ ಓವರ್ ಮಾಡಿದರು. ಪ್ರಥಮ ಓವರ್ನ ಎರಡನೇ ಎಸೆತದಲ್ಲೇ ಫಿನ್ ಅಲೆನ್ ಅವರನ್ನು ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ದಾರಿ ಹಿಡಿದರು. ನಂತರ ಬಂದ ಹೆನ್ರಿ ನಿಕೋಲ್ಸ್ ಆರಂಭಿಕ ಡೆವೊನ್ ಕಾನ್ವೇಯೊಂದಿಗೆ ಉತ್ತಮ ಜೊತೆಯಾಟ ಮಾಡಿದರು. 42 ರನ್ ಗಳಿಸಿ ಆಡುತ್ತಿದ್ದ ಹೆನ್ರಿ ನಿಕೋಲ್ಸ್ ಕುಲ್ದೀಪ್ಗೆ ಎಲ್ಬಿಡ್ಬ್ಯೂಗೆ ಬಲಿಯಾದರು.
ಮೂರನೇ ವಿಕೆಟ್ ಆಗಿ ಬಂದ ಡೇರಿಲ್ ಮಿಚೆಲ್ 24 ರನ್ಗೆ ಠಾಕೂರ್ಗೆ ವಿಕೆಟ್ ಒಪ್ಪಿಸಿರು. ನಂತರ ಬಂದ ಬ್ಲಾಕ್ಕ್ಯಾಪ್ಸ್ ನಾಯಕ ಟಾಮ್ ಲ್ಯಾಥಮ್ ಶಾರ್ದೂಲ್ ಠಾಕೂರ್ಗೆ ಗೋಲ್ಡನ್ ಡಕ್ ಆದರು. ಎರಡನೇ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಗ್ಲೆನ್ ಫಿಲಿಪ್ಸ್ 5ರನ್ಗೆ ಪೆವಿಲಿಯನ್ ಹಾದಿ ಹಿಡಿದರು. ಮೊದಲ ಪಂದ್ಯದಲ್ಲಿ ಶತಕ ಗಳಿಸಿ ತಂಡವನ್ನು ಗೆಲುವಿನ ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೈಕೆಲ್ ಬ್ರೇಸ್‌ವೆಲ್ ಇಂದು ಹೆಚ್ಚಿನ ಪ್ರದರ್ಶನ ನೀಡುವಲ್ಲಿ ವಿಫಲವಾಗಿ 26 ರನ್ಗೆ ಔಟ್ ಆದರು.