ಇಂದೋರ್(ಮಧ್ಯಪ್ರದೇಶ): ಹೋಳ್ಕರ್ ಮೈದಾನದಲ್ಲಿ ಭಾರತದ ಬ್ಯಾಟರ್ಗಳು ರನ್ ಮಳೆ ಹರಿಸಿ 400 ಗುರಿ ಕೊಟ್ಟಿದ್ದಾರೆ. ಈ ಗುರಿಯನ್ನು ಬೆನ್ನ ಹತ್ತಿದ್ದ ಆಸ್ಟ್ರೇಲಿಯಾಕ್ಕೆ ಮಳೆ ಅಡ್ಡಿ ಪಡಿಸಿದ್ದು ಪಂದ್ಯವನ್ನು ಸ್ಥಗಿತ ಮಾಡಲಾಗಿದೆ. ಸದ್ಯ 9 ಓವರ್ ನಂತರ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿದೆ. ಆರಂಭಿಕ ಆಟಗಾರ ಮ್ಯಾಥ್ಯೂ ಶಾರ್ಟ್ ಮತ್ತು ನಾಯಕ ಸ್ಟೀವನ್ ಸ್ಮಿತ್ ವಿಕೆಟ್ ಪತನವಾಗಿದ್ದು, ಕ್ರೀಸನ್ನಲ್ಲಿ ಅನುಭವಿ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಬುಶೇನ್ ಇದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಬೃಹತ್ ಗುರಿಯನ್ನು ನೀಡಿದೆ. ಟೀಮ್ ಇಂಡಿಯಾದ ಆರಂಭಿ ಆಟಗಾರ ಶುಭಮನ್ ಗಿಲ್, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಶ್ರೇಯಸ್ ಅಯ್ಯರ್ ಅಬ್ಬರದ ಶತಕ ಗಳಿಸಿದ್ದರು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕ ಗಳಿಸಿದ ಪರಿಣಾಮ 5 ವಿಕೆಟ್ ಕಳೆದುಕೊಂಡ ಭಾರತ 50 ಓವರ್ಗೆ 399 ರನ್ ಕಲೆಹಾಕಿತ್ತು.
ಈ ಗುರಿಯನ್ನು ಬೆನ್ನು ಹತ್ತಲು ಮೈದಾನಕ್ಕಿಳಿದಿದ್ದ ಆಸ್ಟ್ರೇಲಿಯಾಕ್ಕೆ ಪಂದ್ಯದ ಎರಡನೇ ಓವರ್ನಲ್ಲೇ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಾಡಿದರು. ಮೊದಲ ಬಾಲ್ ಡಾಟ್ ಮಾಡಿದ ಮ್ಯಾಥ್ಯೂ ಶಾರ್ಟ್, ಎರಡನೇ ಬಾಲ್ನಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಎಡವಿದರು ಇದರಿಂದ ಕ್ಯಾಚ್ ಕೊಟ್ಟು ಪೆವಿಲಿಯನ್ಗೆ ತೆರಳಿದರು. ನಂತರ ಬಂದ ನಾಯಕ ಸ್ಟೀವನ್ ಸ್ಮಿತ್ ಮೂರನೇ ಬೌನ್ಸ್ ಬಾಲ್ನಲ್ಲಿ ಎರಡನೇ ಸ್ಲಿಪ್ಗೆ ಕ್ಯಾಚ್ ಕೊಟ್ಟು ಡಕ್ ಔಟ್ ಆದರು. ನಂತರ ಬಂದ ಲಬುಶೇನ್ ಹ್ಯಾಟ್ರಿಕ್ ವಿಕೆಟ್ ಕೊಡದೇ ನಾಲ್ಕನೇ ಬಾಲ್ನಲ್ಲಿ ಒಂದು ರನ್ ಪಡೆದರು. ಎರಡು ವಿಕೆಟ್ ಪತನದ ನಂತರ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬಶೇನ್ ಜೊತೆಯಾಟ ಮುಂದುವರೆಸಿದ್ದಾರೆ. ವಾರ್ನರ್ (26) ಮತ್ತು ಮಾರ್ನಸ್ (17) 47 ರನ್ನ ಪಾಲುದಾರಿಕೆ ಮಾಡಿ ಕ್ರೀಸ್ನಲ್ಲಿದ್ದಾರೆ.
ಮುಂದೆ ಆಸಿಸ್ಗೆ ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಸೀನ್ ಅಬಾಟ್, ಆಡಮ್ ಝಂಪಾ, ಜೋಶ್ ಹ್ಯಾಜಲ್ವುಡ್, ಸ್ಪೆನ್ಸರ್ ಜಾನ್ಸನ್ ಅವರ ಬ್ಯಾಟಿಂಗ್ ಬಲ ಇದೆ. ಸಧ್ಯ 4 ಓವರ್ ಮಾಡಿದರುವ ಪ್ರಸಿದ್ಧ್ ಕೃಷ್ಣ 31 ರನ್ ಕೊಟ್ಟು 2 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:IND vs AUS: ಕಾಂಗರೂ ಪಡೆಯ ವಿರುದ್ಧ ಶ್ರೇಯಸ್, ಗಿಲ್ ಅಬ್ಬರದ ಶತಕ.. ವಿಶ್ವಕಪ್ಗೂ ಮುನ್ನ ಭಾರತದ ಭರ್ಜರಿ ಬ್ಯಾಟಿಂಗ್