ಶಾರ್ಜಾ: ಅಂಡರ್ 19 ಏಷ್ಯಾಕಪ್ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ಅಂಡರ್ 19 ತಂಡ 103 ರನ್ಗಳ ಅಂತರದಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ಶ್ರೀಲಂಕಾ ಅಂಡರ್ 19 ತಂಡವನ್ನು ಎದುರಿಸಲಿದೆ.
ಗುರುವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಉಪನಾಯಕ ಶೇಕ್ ರಶೀದ್ ಅವರ 90 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್ಗಳಿಸಿತ್ತು. ನಾಯಕ ಯಶ್ ಧುಲ್ 26, ವಿಕಿ ಒಸ್ತ್ವಲ್ 28 ಮತ್ತು ರಾಜ್ ಬಾವಾ 23 ರನ್ಗಳಿಸಿ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
244 ರನ್ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಭಾರತೀಯ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 140 ರನ್ಗಳಿಸಿ ಸರ್ವಪತನ ಕಂಡಿತು. ಆರಿಫುಲ್ ಇಸ್ಲಾಮ್ 42 ಮತ್ತು ಮಹ್ಜಿಫುಲ್ ಇಸ್ಲಾಮ್ 26 ರನ್ಗಳಿಸಿ ತಂಡ 100ರೊಳಗೆ ಆಲೌಟ್ ಆಗದಂತೆ ತಡೆದು ಹೀನಾಯ ಸೋಲು ತಪ್ಪಿಸಿದರು.