ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಪ್ರತಿ ಬಾರಿ ಡಿಆರ್ಎಸ್ ನಿರ್ಣಯ ಚರ್ಚೆಯಾಗಿ ಮಾರ್ಪಾಡಾಗುತ್ತಿದೆ. ಚಹಾಲ್ ಬೌಲಿಂಗ್ನಲ್ಲಿ ಆಸೀಸ್ ಆಟಗಾರ ಟರ್ನರ್ ಬ್ಯಾಟ್ಗೆ ಬಾಲ್ ತಗುಲಿರುವುದು ರಿಪ್ಲೆಯಲ್ಲಿ ಕಾಣಿಸುತ್ತಿತ್ತು. ಆದ್ರೂ ಥರ್ಡ್ ಅಂಪೈರ್ ಇದನ್ನು ನಾಟೌಟ್ ಎಂದು ತೀರ್ಪು ನೀಡಿದ್ದರು. ಇದರಿಂದ ಬೇಸರವಾಯಿತು. ಬಾಲ್ ಬ್ಯಾಟಿಗೆ ಬಡಿದಿದ್ದರೂ ಅಂಪೈರ್ ನಟೌಟ್ ಎಂದು ತೀರ್ಮಾನಿಸಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ ಎಂದಿದ್ದಾರೆ ಕೊಹ್ಲಿ.
ಡಿಆರ್ಎಸ್ ಪದ್ಧತಿಯೇ ಸರಿಯಿಲ್ಲ ಎಂದ್ರು ಅಗ್ರೆಸ್ಸಿವ್ ಕ್ಯಾಪ್ಟನ್ ಕೊಹ್ಲಿ!
ಮೊಹಾಲಿ: ನಾಯಕ ವಿರಾಟ್ ಕೊಹ್ಲಿ ಡಿಆರ್ಎಸ್ ಪದ್ಧತಿಯ ನಿರ್ಣಯದಿಂದ ಬೇಸರಗೊಂಡಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಡಿಆರ್ಎಸ್ ನಿರ್ಣಯ ಕುರಿತು ಕೊಹ್ಲಿ ಮಾತನಾಡಿದ್ದಾರೆ.
ಕ್ಯಾಪ್ಟನ್ ಕೊಹ್ಲಿ ಬೇಸರ...
ನಿನ್ನೆ ನಡೆದ ಪಂದ್ಯದಲ್ಲಿ ಆಸೀಸ್ ವಿರುದ್ಧ ಭಾರತ ತಂಡ ಪಂದ್ಯವನ್ನು ಕೈ ಚೆಲ್ಲಿತ್ತು. ಐದು ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 2-2 ರಿಂದ ಸಮಬಲ ಸಾಧಿಸಿವೆ. ಅಂತಿಮ ಪಂದ್ಯ ತೀವ್ರ ಕುತೂಹಲ ಕೆರಳಿಸಿದ್ದು, ಸರಣಿಯಲ್ಲಿ ಮುಡಿಗೇರಿಸಿಕೊಳ್ಳಬೇಕಾದರೆ ನಾಳಿನ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿ ಎರಡೂ ತಂಡಗಳಿವೆ.