ಕರ್ನಾಟಕ

karnataka

ETV Bharat / sports

ಭಾರತ, ಆಸ್ಟ್ರೇಲಿಯಾ ಸೇರಿದಂತೆ ಕಾಮನ್​ವೆಲ್ತ್​ ಗೇಮ್ಸ್​ಗೆ ಅರ್ಹತೆ ಪಡೆದ 6 ರಾಷ್ಟ್ರಗಳು - ಕಾಮನ್​ವೆಲ್ತ್​ ಗೇಮ್ಸ್

1998ರ ನಂತರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಕ್ರಿಕೆಟ್​ ಮತ್ತೆ ಅರ್ಹತೆ ಪಡೆದುಕೊಂಡಿದೆ. ಈ ಬಹುಕ್ರೀಡೆಗಳ ಕ್ರೀಡಾಕೂಟಕ್ಕೆ ಅತಿಥೇಯ ಇಂಗ್ಲೆಂಡ್ ಸೇರಿದಂತೆ ಆಸ್ಟ್ರೇಲಿಯಾ, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್​ನಿಂದ ಒಂದು ಮಹಿಳಾ ಕ್ರಿಕೆಟ್ ತಂಡ ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಅರ್ಹತೆ ಗಿಟ್ಟಿಸಿಕೊಂಡಿವೆ.

ಕಾಮನ್​ವೆಲ್ತ್​ ಗೇಮ್ಸ್​ಗೆ ಅರ್ಹತೆ ಪಡೆದ 6 ರಾಷ್ಟ್ರಗಳು
ಕಾಮನ್​ವೆಲ್ತ್​ ಗೇಮ್ಸ್​ಗೆ ಅರ್ಹತೆ ಪಡೆದ 6 ರಾಷ್ಟ್ರಗಳು

By

Published : Apr 27, 2021, 4:38 PM IST

ನವದೆಹಲಿ: 2022ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಭಾರತ ಸೇರಿದಂತೆ 6 ದೇಶಗಳು ನೇರ ಅರ್ಹತೆ ಪಡೆದುಕೊಂಡಿವೆ. ಇನ್ನು ಕಾಮನ್​ವೆಲ್ತ್​ ರಾಷ್ಟ್ರಗಳ ಒಕ್ಕೂಟದಲ್ಲಿ ವೆಸ್ಟ್​ ಇಂಡೀಸ್ ಬದಲಾಗಿ ಒಂದು ಕೆರಿಬಿಯನ್ ರಾಷ್ಟ್ರವು ಅರ್ಹತಾ ಟೂರ್ನಿಯ ಮೂಲಕ ಪ್ರತ್ಯೇಕವಾಗಿ ಭಾಗವಹಿಸಲಿದೆ.

1998ರ ನಂತರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಕ್ರಿಕೆಟ್​ ಮತ್ತೆ ಅರ್ಹತೆ ಪಡೆದುಕೊಂಡಿದೆ. ಈ ಬಹುಕ್ರೀಡೆಗಳ ಕ್ರೀಡಾಕೂಟಕ್ಕೆ ಅತಿಥೇಯ ಇಂಗ್ಲೆಂಡ್ ಸೇರಿದಂತೆ ಆಸ್ಟ್ರೇಲಿಯಾ, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್​ನಿಂದ ಒಂದು ಮಹಿಳಾ ಕ್ರಿಕೆಟ್ ತಂಡ ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಅರ್ಹತೆ ಗಿಟ್ಟಿಸಿಕೊಂಡಿವೆ.

ಏಪ್ರಿಲ್ 1 ರಂದು ಪ್ರಕಟಗೊಂಡಿರುವ ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಈ 7 ತಂಡಗಳು ಅರ್ಹತೆಯನ್ನು ಪಡೆದುಕೊಂಡಿವೆ. ಈ ಬಾರಿ ವೆಸ್ಟ್ ಇಂಡೀಸ್ ಬದಲಾಗಿ ಕೆರಿಬಿಯನ್​ ಪ್ರಾಂತ್ಯದ ಯಾವುದಾದರೂ ಒಂದು ರಾಷ್ಟ್ರ ಪ್ರತ್ಯೇಕವಾಗಿ ಕಣಕ್ಕಿಳಿಯಲಿದೆ ಎಂದು ತಿಳಿದುಬಂದಿದೆ. ಜನವರಿ 20, 2022 ರೊಳಗೆ ಆ ತಂಡವನ್ನು ನಿರ್ಧರಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

ಇನ್ನು ಲೀಗ್​ನ 8ನೇ ತಂಡ ಅರ್ಹತಾ ಸುತ್ತಿನ ಮೂಲಕ ಪ್ರಮುಖ ಸುತ್ತಿಗೆ ಸೇರ್ಪಡೆಯಾಗಲಿದೆ. ಜನವರಿ 31, 2022ರಂದು ಕ್ವಾಲಿಫೈಯಿಂಗ್ ಟೂರ್ನಮೆಂಟ್ ನಡೆಯಲಿದೆ. ಇಲ್ಲಿ ಬಾಂಗ್ಲಾದೇಶ, ಥಾಯ್ಲೆಂಡ್ ಮತ್ತು ಐರ್ಲೆಂಡ್ ಸೇರಿದಂತೆ ಕೆಲವು ತಂಡಗಳು ಭಾಗವಹಿಸಲಿವೆ.

ಇದನ್ನು ಓದಿ:ಐಪಿಎಲ್ ಆಟಗಾರರು ಸ್ವದೇಶಕ್ಕೆ ಮರಳುವ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು; ಆಸ್ಟ್ರೇಲಿಯಾ ಪ್ರಧಾನಿ

ABOUT THE AUTHOR

...view details