ಲಂಡನ್:ಟೆಸ್ಟ್ ಕ್ರಿಕೆಟ್ನ ವಿಶ್ವ ಕಪ್ ಎಂದೇ ಪರಿಗಣಿಸಲಾಗುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇಂದಿನಿಂದ ಆರಂಭವಾಲಿದೆ. ಎರಡು ವರ್ಷಗಳ ಕಾಲ ಟೆಸ್ಟ್ ಮಾನ್ಯತೆ ಇರುವ 9 ತಂಡಗಳು ಆಡಿರುವ ಆಟದಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಆಸ್ಟ್ರೇಲಿಯಾ ಮತ್ತು ಭಾರತ ಏಕೈಕ ಟೆಸ್ಟ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಇದರಲ್ಲಿ ಗೆದ್ದವರು ಮುಂದಿನ ಎರಡು ವರ್ಷಗಳ ಕಾಲ ಐಸಿಸಿ ಟೆಸ್ಟ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದ್ದಾರೆ.
ಏಕದಿನ ಮಾದರಿಯಲ್ಲಿ ಐಸಿಸಿ ನಡೆಸುತ್ತಿದ್ದ ಚಾಂಪಿಯನ್ಸ್ ಟ್ರೋಫಿಯನ್ನು ರದ್ದು ಮಾಡಿ ಟೆಸ್ಟ್ ಚಾಂಪಿಯನ್ಶಿಪ್ನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2019 ರಲ್ಲಿ ಘೋಷಿಸಿತು. ಎರಡು ವರ್ಷಗಳ ಕಾಲ ಟೆಸ್ಟ್ ಆಡಿ ಅದರಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಟಾಪ್ ಎರಡು ತಂಡಗಳು ಫೈನಲ್ ಆಡಲಿದೆ. ಅದರಂತೆ ಇದು ಎರಡನೇ ಚಾಂಪಿಯನ್ಸ್ ಟ್ರೋಫಿ ಫೈನಲ್ ಆಗಿದೆ. 2021 ರಲ್ಲಿ ನಡೆದ ಫೈನಲ್ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಸೆಣಸಿದ್ದವು. ಕಿವೀಸ್ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ನ್ನು ಗೆದ್ದುಕೊಂಡಿತ್ತು.
ಕ್ರಿಕೆಟ್ನ ಮೂಲ ಸ್ವರೂಪ ಎಂದು ಟೆಸ್ಟ್ ಕ್ರಿಕೆಟ್ನ್ನು ಪರಿಗಣಿಸಲಾಗುತ್ತದೆ. ನಂತರ ಕ್ರಿಕೆಟ್ ಬದಲಾವಣೆ ಆಗಿ ಏಕದಿನ, ಟಿ -20 ಮತ್ತು ಈಗ ಟಿ10 ಪಂದ್ಯಗಳೂ ನಡೆಯುತ್ತಿವೆ. ಅತಿ ಹೆಚ್ಚು ಕೌಶಲ ಭರಿತ ಕ್ರಿಕೆಟ್ ಇಲ್ಲಿ ಕಾಣ ಸಿಗುತ್ತದೆ. ದಿನ ಇಡೀ ಕ್ರೀಸ್ನಲ್ಲಿ ನಿಂತು ಆಡುವ ಫೀಟ್ನೆಸ್, ಬಾಲ್ಗಳನ್ನು ಬೌಂಡರಿಗಟ್ಟುವಷ್ಟೇ ಸ್ಕಿಲ್ನಲ್ಲಿ ಚೆಂಡುಗಳನ್ನು ಡ್ರಾಪ್ ಮಾಡಲೂ ಇರಬೇಕಾಗುತ್ತದೆ. ಹೆಚ್ಚು ಸಮಯ ಪಿಚ್ನಲ್ಲಿ ನಿಂತು ಬೌಲಿಂಗ್ನ್ನು ಅರ್ಥೈಸಿಕೊಂಡು ಬ್ಯಾಟಿಂಗ್ ಮಾಡುವುದೇ ಟೆಸ್ಟ್ ಕ್ರಿಕೆಟ್ನ ಸ್ವಾರಸ್ಯ.
ಬಲಿಷ್ಠವಾಗಿದೆ ಆಸಿಸ್: ಕಾಂಗರೂ ಪಡೆ ಮೇಲ್ನೋಟಕ್ಕೆ ಬಲಿಷ್ಠವಾಗಿದೆ. ಮಾರ್ನಸ್ ಲಬುಶೇನ್, ಉಸ್ಮಾನ್ ಖವಾಜಾ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಆಸಿಸ್ ಪಡೆಯ ಅನುಭವಿ ಫಾರ್ಮ್ ಬ್ಯಾಟರ್ಗಳು. ಕಾಂಗರೂ ಪಡೆಗೆ ಇಂಗ್ಲೆಂಡ್ನ ಪಿಚ್ ಮತ್ತು ಹವಾಮಾನ ಹೊಸತಲ್ಲ. ವರ್ಷಕ್ಕೊಮ್ಮೆ ಆಶಸ್ ಆಡಲು ಆಸಿಸ್ ತಂಡ ಇಂಗ್ಲೆಂಡ್ ಪ್ರವಾಸ ಬೆಳೆಸುವುದರಿಂದ ಪಿಚ್ಗಳ ಬಗ್ಗೆ ಅವರಿಗೆ ಹೆಚ್ಚಿನ ಜ್ಞಾನ ಇದೆ.
ಆಸಿಸ್ ಮೇಲೆ ಭಾರತದ ಪ್ರಾಬಲ್ಯ: ಆಸಿಸ್ ವಿರುದ್ಧ ಭಾರತ ಸತತ ಮೂರು ಸರಣಿಗಳನ್ನು ಗೆದ್ದಿದೆ. ಫೆಬ್ರವರಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಭಾರತ ತನ್ನ ಮೇಲುಗೈ ಸಾಧಿಸಿದೆ. ಇದರ ಜೊತೆಗೆ ಭಾರತ ತಂಡದಲ್ಲಿ ಅನುಭವಿಗಳು ಮತ್ತು ಯುವಕರು ಫಾರ್ಮ್ನಲ್ಲಿದ್ದಾರೆ. ಆರಂಭಿಕ ಶುಭಮನ್ ಗಿಲ್ ಈ ವರ್ಷ ಗೋಲ್ಡನ್ ಫಾರ್ಮ್ನಲ್ಲಿದ್ದಾರೆ. ಅಲ್ಲದೇ ಎರಡು ವರ್ಷಗಳಿಂದ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಮತ್ತೆ ತಮ್ಮ ಲಯಕ್ಕೆ ಮರಳಿದ್ದು, ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಶತಕ ಗಳಿಸಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇದಲ್ಲದೇ ವಿರಾಟ್ ಆಸಿಸ್ ವಿರುದ್ಧ ಬೆಸ್ಟ್ ಅಂಕಿ - ಅಂಶವನ್ನು ಹೊಂದಿದ್ದಾರೆ.
ಇಂಗ್ಲೆಂಡ್ನ ಪಿಚ್ನಲ್ಲಿ ಕಳೆದ ತಿಂಗಳುಗಳಿಂದ ಕೌಂಟಿ ಕ್ರಿಕೆಟ್ ಆಡುತ್ತಿರುವ ಚೇತೇಶ್ವರ ಪೂಜಾರ ಸಹ ಭಾರತಕ್ಕೆ ಭರವಸೆ ಆಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಸಹ ಬ್ಯಾಟಿಂಗ್ ಸಾಥ್ ನೀಡಲಿದ್ದಾರೆ. ಎಡಗೈ ಬ್ಯಾಟರ್ಗಳಿಂಗ ದುಸ್ವಪ್ನವಾಗಿರುವ ಅಶ್ವಿನ್ ಮತ್ತು ಸಿರಾಜ್ ತಂಡದಲ್ಲಿ ಇದ್ದು ಆಸಿಸ್ ತಂಡವನ್ನು ಕಟ್ಟಿಹಾಕಲಿದ್ದಾರೆ.