ಕರ್ನಾಟಕ

karnataka

ETV Bharat / sports

ICC Test Ranking: 6 ವರ್ಷದ ಬಳಿಕ ಟಾಪ್​ 10 ರಿಂದ ಹೊರಬಿದ್ದ ವಿರಾಟ್​​; 5ನೇ ಸ್ಥಾನಕ್ಕೆ ಪಂತ್ ಲಗ್ಗೆ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ನೂತನ ಟೆಸ್ಟ್​ ಶ್ರೇಯಾಂಕ ರಿಲೀಸ್​ ಆಗಿದ್ದು,ಬರೋಬ್ಬರಿ ಆರು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಟಾಪ್​ 10ರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

Virat kohli
Virat kohli ICC Test Rank

By

Published : Jul 6, 2022, 3:36 PM IST

ಬರ್ಮಿಂಗ್​ಹ್ಯಾಮ್​​(ಎಡ್ಜಬಾಸ್ಟನ್​): ಇಂಗ್ಲೆಂಡ್​ - ಭಾರತ ತಂಡಗಳ ನಡುವಿನ 5ನೇ ಟೆಸ್ಟ್​​ ಪಂದ್ಯ ಮುಕ್ತಾಯಗೊಂಡ ಬೆನ್ನಲ್ಲೇ ಐಸಿಸಿ ಟೆಸ್ಟ್​ ಶ್ರೇಯಾಂಕ ರಿಲೀಸ್ ಮಾಡಿದೆ. ಹೊಸ ಪಟ್ಟಿ ಪ್ರಕಾರ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಬರೋಬ್ಬರಿ 6 ವರ್ಷಗಳ ಬಳಿಕ ಟಾಪ್​ 10ರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಕಳೆದ ಎರಡೂವರೆ ವರ್ಷಗಳಿಂದ ರನ್​​ ಬರ ಎದುರಿಸುತ್ತಿರುವ ವಿರಾಟ್​ ಕೊಹ್ಲಿ, ಸದ್ಯ ಇಂಗ್ಲೆಂಡ್​ ವಿರುದ್ಧ ಮುಕ್ತಾಯಗೊಂಡ ಅಂತಿಮ ಟೆಸ್ಟ್​ ಪಂದ್ಯದಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ, ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್​ 10 ರಿಂದ ಹೊರಬಿದ್ದಿದ್ದು, 13ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಎರಡು ಇನ್ನಿಂಗ್ಸ್​​ನಲ್ಲಿ ಶತಕ ಸಾಧನೆ ಮಾಡಿರುವ ಜಾನಿ ಬೈರ್​ಸ್ಟೋ 10ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.

5ನೇ ಸ್ಥಾನಕ್ಕೆ ಲಗ್ಗೆ ಹಾಕಿರುವ ರಿಷಭ್ ಪಂತ್

ಇದನ್ನೂ ಓದಿರಿ:ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬ.. 41 ಅಡಿ ಎತ್ತರದ ಕಟೌಟ್​ ನಿರ್ಮಿಸಿದ ಅಭಿಮಾನಿಗಳು

ಏರಿಕೆ ಕಂಡ ರಿಷಭ್ ಪಂತ್​: ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸಿರುವ ರಿಷಭ್ ಪಂತ್​ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಇಂಗ್ಲೆಂಡ್​ನ ಜೋ ರೂಟ್​ ನಂಬರ್​ 1 ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾರ್ನಸ್​ ಲ್ಯಾಬುಸೇನ್​ ಇದ್ದಾರೆ. ಕೋವಿಡ್ ಕಾರಣದಿಂದಾಗಿ ಟೆಸ್ಟ್​ನಿಂದ ಹೊರಗುಳಿದಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 9ನೇ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details