ದುಬೈ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾವನ್ನು ಮಣಿಸಿದೆ. ಐಸಿಸಿ ಬಿಡುಗಡೆ ಮಾಡಿರುವ ಪುರುಷರ ಟೆಸ್ಟ್ ಟೀಮ್ನ ಶ್ರೇಯಾಂಕದಲ್ಲಿ ಭಾರತ ಅಗ್ರಸ್ಥಾನಕ್ಕೆ ಏರಿದೆ. ಪುರುಷರ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಕಳೆದ 15 ತಿಂಗಳಿಂದ ಆಸ್ಟ್ರೇಲಿಯಾ ತನ್ನ ಸ್ಥಾನವನ್ನು ಉಳಿಸಿಕೊಂಡಿತ್ತು. ಈಗ ರೋಹಿತ್ ನಾಯಕತ್ವ ಪಡೆ 121 ರೇಟಿಂಗ್ನಿಂದ ಮೊದಲ ಸ್ಥಾನಕ್ಕೆ ಏರಿದೆ.
ಮುಂದಿನ ತಿಂಗಳು ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ಭಾರತವು ಆಸೀಸ್ ತಂಡವನ್ನು ಹಿಂದಿಕ್ಕಿದೆ. ಜೂನ್ 7 ರಿಂದ 11 ವರೆಗೆ ಟೆಸ್ಟ್ ಚಾಂಪಿಯನ್‌ಶಿಪ್ ಇಂಗ್ಲೆಂಡ್ನ ಓವೆಲ್ನಲ್ಲಿ ನಡೆಯಲಿದೆ. ನಂತರ ಆಸ್ಟ್ರೇಲಿಯಾ ಇಂಗ್ಲೆಂಡ್ ನೆಲದಲ್ಲೇ ಜೂನ್ 16 ರಿಂದ ಜುಲೈ 31 ವರೆಗೆ ಆಶಸ್ ಸರಣಿ ಆಡಲಿದೆ.
ವಾರ್ಷಿಕ ಶ್ರೇಯಾಂಕಗಳ ನವೀಕರಣದ ಮೊದಲು, ಆಸ್ಟ್ರೇಲಿಯಾವು 122 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿತ್ತು ಮತ್ತು ಭಾರತವು ಮೂರು ಅಂಕಗಳಿಂದ (119) ಹಿಂದುಳಿದಿತ್ತು. ವಾರ್ಷಿಕ ಶ್ರೇಯಾಂಕದಲ್ಲಿ ಮೇ 2020 ರಲ್ಲಿ ಪೂರ್ಣಗೊಂಡ ಎಲ್ಲಾ ಸರಣಿಗಳನ್ನು ಪರಿಗಣಿಸಲಾಗುತ್ತದೆ. ಮೇ 2022 ರ ಮೊದಲು ಪೂರ್ಣಗೊಂಡ ಸರಣಿಗಳನ್ನು ಶೇಕಡಾ 50 ರಷ್ಟು ಮತ್ತು ನಂತರದ ಎಲ್ಲಾ ಸರಣಿಗಳನ್ನು ಶೇಕಡಾ 100 ರಷ್ಟನ್ನು ಬಳಸಿ ಅಂಕ ನೀಡಲಾಗಿದೆ.
ಇದರ ಪರಿಣಾಮವಾಗಿ, 2019/20 ರಲ್ಲಿ ಪಾಕಿಸ್ತಾನ (2-0) ಮತ್ತು ನ್ಯೂಜಿಲ್ಯಾಂಡ್ (3-0) ವಿರುದ್ಧ ಆಸ್ಟ್ರೇಲಿಯಾದ ಸ್ವದೇಶಿ ಸರಣಿ ಗೆಲುವುಗಳು ಆಸ್ಟ್ರೇಲಿಯಾಕ್ಕೆ ಪರಿಗಣನೆಗೆ ತೆಗೆದುಕೊಂಡಿಲ್ಲ. ಆಸಿಸ್ 2021/22 ರಲ್ಲಿ ಇಂಗ್ಲೆಂಡ್ ವಿರುದ್ಧ ಆಶಸ್‌ನಲ್ಲಿ 4-0 ಗೆಲುವು ದಾಖಲಿಸಿದೆ ಆದರ ರೇಟಿಂಗ್‌ಗಳು 121 ರಿಂದ 116 ಕ್ಕೆ ಇಳಿದಿದೆ.