ಪುಣೆ (ಮಹಾರಾಷ್ಟ್ರ):ಮಿಚೆಲ್ ಮಾರ್ಷ್ ಶತಕ, ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅರ್ಧಶತಕದ ನೆರವಿನಿಂದ ಬಾಂಗ್ಲಾ ನೀಡಿದ್ದ 307 ರನ್ಗಳ ಗುರಿಯನ್ನು 5.2 ಓವರ್ ಉಳಿಕೊಂಡು 8 ವಿಕೆಟ್ನಿಂದ ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಇದರಿಂದ ಎರಡನೇ ಸೆಮಿಫೈನಲ್ಸ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕೋಲ್ಕತ್ತಾದ ಮೈದಾನದಲ್ಲಿ ನವೆಂಬರ್ 16ರಂದು ಮುಖಾಮುಖಿ ಆಗಲಿದೆ ಎಂಬುದು ಖಚಿತವಾಗಿದೆ. ಸೋಲು ಕಂಡರೂ ಬಾಂಗ್ಲಾದ 2025ರ ಚಾಂಪಿಯನ್ಸ್ ಟ್ರೋಫಿ ಪ್ರವೇಶದ ಕನಸು ನನಸಾಗಿಯೇ ಇದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶ ತೌಹಿದ್ ಹೃದಯೊಯ್ ಅರ್ಧಶತಕ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಅವರ ಇನ್ನಿಂಗ್ಸ್ ಬಲದಿಂದ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 306 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಂಡು 8 ವಿಕೆಟ್ಗಳಿಂದ ಗೆದ್ದುಕೊಂಡಿತು.
ಟ್ರಾವಿಸ್ ಹೆಡ್ 10 ರನ್ಗೆ ವಿಕೆಟ್ ಕಳೆದುಕೊಂಡರು. ಇದರಿಂದ 12ಕ ರನ್ಗೆ ಮೊದಲ ವಿಕೆಟ್ ಜೊತೆಯಾಟ ಮುರಿಯಿತು. ಆದರೆ ಅನುಭವಿ ಆಟಗಾರ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಎರಡನೇ ವಿಕೆಟ್ಗೆ 120 ರನ್ಗಳ ಬೃಹತ್ ಜೊತೆಯಾಟವಾಡಿದರು. ಇದರಿಂದ ತಂಡ ಒತ್ತಡ ರಹಿತವಾಗಿ ಗುರಿ ಸಮೀಪಿಸಿತು. 33ನೇ ಏಕದಿನ ಅರ್ಧಶತಕ ಗಳಿಸಿದ ವಾರ್ನರ್ ವಿಕೆಟ್ ಒಪ್ಪಿಸಿದರು. ಇನ್ನಿಂಗ್ಸ್ನಲ್ಲಿ ವಾರ್ನರ್ 61 ಬಾಲ್ ಎದುರಿಸಿ 6 ಬೌಂಡರಿಯಿಂದ 53 ರನ್ ಕಲೆಹಾಕಿದರು.