ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಟಗಾರರು ಲಾಲಾರಸವನ್ನು ಬಳಸುವುದಕ್ಕೆ ಐಸಿಸಿ ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸಿದೆ. ಅಕ್ಟೋಬರ್ 1ರಿಂದ ಈ ಬದಲಾವಣೆ ನಿಯಮ ಜಾರಿಗೊಳ್ಳಲಿದೆ. ಇದರ ಜೊತೆಗೆ ಇತರೆ ಕೆಲವೊಂದು ಬದಲಾವಣೆಗಳೂ ಅನುಷ್ಠಾನಕ್ಕೆ ಬರಲಿವೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ಪುರುಷರ ಕ್ರಿಕೆಟ್ ಸಮಿತಿ ಈ ಬದಲಾವಣೆಯ ಶಿಫಾರಸು ಮಾಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹಸಿರು ನಿಶಾನೆ ತೋರಿದೆ.
ಅಕ್ಟೋಬರ್ 1ರಿಂದ ಈ ಬದಲಾವಣೆ:1. ಬ್ಯಾಟಿಂಗ್ ಮಾಡ್ತಿರುವ ಪ್ಲೇಯರ್ ಕ್ಯಾಚ್ ಔಟ್ ಆದಾಗ ಕ್ಯಾಚ್ ತೆಗೆದುಕೊಳ್ಳುವ ಮೊದಲು ಇನ್ನೊಂದು ತುದಿಯಲ್ಲಿರುವ ಆಟಗಾರ ಕ್ರೀಸ್ ಕ್ರಾಸ್ ಮಾಡಿದ್ರೂ ಕೂಡ ಹೊಸ ಸ್ಟ್ರೈಕರ್ ಬ್ಯಾಟ್ ಮಾಡ್ಬೇಕು.
2. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಲಾಲಾರಸ ಬಳಕೆ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಕೋವಿಡ್ನಿಂದಾಗಿ ಕಳೆದ ಎರಡು ವರ್ಷಗಳಿಂದ ಈ ನಿಯಮ ಜಾರಿಯಲ್ಲಿದ್ದು, ಇದೀಗ ಶಾಶ್ವತವಾಗಿ ನಿಷೇಧಿಸಲಾಗಿದೆ.
3. ಓರ್ವ ಬ್ಯಾಟರ್ ಔಟಾಗುತ್ತಿದ್ದಂತೆ ಬ್ಯಾಟಿಂಗ್ ಮಾಡಲು ಬರುವ ಪ್ಲೇಯರ್ ಕೇವಲ ಎರಡು ನಿಮಿಷಗಳಲ್ಲಿ ಸ್ಟ್ರೈಕ್ ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಇದು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗೆ ಮಾತ್ರ ಅನ್ವಯ. ಟಿ20ಯಲ್ಲಿ 90 ಸೆಕೆಂಡ್ಗಳ ಕಾಲ ಮಿತಿ ನೀಡಲಾಗಿದೆ.
ಇದನ್ನೂ ಓದಿ:ಲಾಲಾರಸ ಬಳಕೆ ನಿಷೇಧ ವಿಚಾರ; ಕ್ರಿಕೆಟ್ ಆಟವನ್ನು ನೀರಸ ಸ್ಥಿತಿಗೆ ತಲುಪಿಸಲಿದೆ: ಮಿಚೆಲ್ ಸ್ಟಾರ್ಕ್ ಎಚ್ಚರಿಕೆ
4.ಬ್ಯಾಟರ್ಗೆ ವಿಶೇಷ ಹಕ್ಕು: ಪಿಚ್ನಲ್ಲಿ ಬ್ಯಾಟ್ ಮಾಡುವಾಗ ಬೌಲರ್ಗಳು ಅತಿರೇಕವಾಗಿ ವರ್ತಿಸುವುದು ಸರ್ವೇ ಸಾಮಾನ್ಯ. ಇದೀಗ ಅದು ಹೆಚ್ಚಾದರೆ, ಅಂಪೈರ್ಗಳು ಡೆಡ್ಬಾಲ್ ಅಥವಾ ನೋ ಬಾಲ್ ಎಂದು ಘೋಷಣೆ ಮಾಡುವ ನಿರ್ಧಾರ ಕೈಗೊಳ್ಳಬಹುದು.
5. ಬೌಲರ್ ಬೌಲಿಂಗ್ ಮಾಡ್ತಿದ್ದಾಗ ಕ್ಷೇತ್ರ ರಕ್ಷಣೆ ಮಾಡುವ ಪ್ಲೇಯರ್ಗಳ ಚಲನೆಯಲ್ಲಿ ವ್ಯತ್ಯಾಸ ಕಂಡು ಬಂದರೆ ಅದು ಡೆಡ್ ಬೌಲ್ ಅಥವಾ ಪೆನಾಲ್ಟ್ ರನ್ ನೀಡಬಹುದು.
6. ಈಗಾಗಲೇ ಟಿ20ಯಲ್ಲಿ ನಿಗದಿತ ಸಮಯದಲ್ಲಿ ಎಸೆತ ಮುಗಿಸಲು ತಂಡ ವಿಫಲವಾದರೆ ಹೆಚ್ಚುವರಿ ಫೀಲ್ಡರ್ಗಳನ್ನು 30 ಯಾರ್ಡ್ ವೃತ್ತದೊಳಗೆ ನಿಲ್ಲಿಸಬೇಕಾಗುತ್ತದೆ.