ನವದೆಹಲಿ : ಭಾರತ ತಂಡದ ಹಿರಿಯ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನಿಸಿದೆ. ಎರಡನೇ ಮಗು ಪಡೆದಿರುವ ಖುಷಿಯ ವಿಚಾರವನ್ನು ಹಿರಿಯ ಕ್ರಿಕೆಟಿಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
"ನಾವು ಗಂಡು ಮಗುವನ್ನು ಪಡೆದಿದ್ದೇವೆ. ನಮ್ಮ ಹೃದಯ ತುಂಬಿದ್ದು, ಜೀವನ ಸಂಪೂರ್ಣ ಗೊಂಡಿದೆ. ಆರೋಗ್ಯವಂತ ಗಂಡು ಮಗುವನ್ನು ಆಶೀರ್ವಾದ ಮಾಡಿದ್ದಕ್ಕಾಗಿ ನಾವು ಸರ್ವಶಕ್ತನಿಗೆ ಧನ್ಯವಾದ ತಿಳಿಸುತ್ತೇನೆ. ಗೀತಾ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ" ಎಂದು ಟ್ವಿಟರ್ನಲ್ಲಿ ಭಜ್ಜಿ ತಮ್ಮ ಅಭಿಮಾನಿಗಳೊಂದಿಗೆ ಈ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.