ನವದೆಹಲಿ: ಹೊಸದಾಗಿ ಭಾರತ ತಂಡದ ಮುಖ್ಯ ಕೋಚ್(head coach of the Indian team ) ಆಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್(Rahul Dravid) ತಮ್ಮ ಸುರಕ್ಷಿತ ಮತ್ತು ಸದೃಢ ಬ್ಯಾಟಿಂಗ್ನಂತೆಯೇ ತಮ್ಮ ಕೋಚ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್(Sunil Gavaskar) ಅಭಿಪ್ರಾಯಪಟ್ಟಿದ್ದಾರೆ.
ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ರವಿ ಶಾಸ್ತ್ರಿ(Ravi Shastri) ಅವರ ಕೋಚಿಂಗ್ ಅವಧಿ ಮುಕ್ತಾಯವಾಗಿದೆ. ಆ ಸ್ಥಾನಕ್ಕೆ ಕಳೆದ ತಿಂಗಳು ಕನ್ನಡಿಗ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದರು.
ರಾಹುಲ್ ದ್ರಾವಿಡ್ ಆಡುತ್ತಿದ್ದಾಗ, ನಾವೆಲ್ಲಾ ಆತ ಕ್ರೀಸ್ನಲ್ಲಿ ಇರುವವರೆಗೂ ಭಾರತದ ಬ್ಯಾಟಿಂಗ್ ಸುರಕ್ಷಿತ ಮತ್ತು ಬಲಿಷ್ಠವಾಗಿರಲಿದೆ ಎಂದು ಚಿಂತಿಸುತ್ತಿದ್ದೆವು.
ಇದೇ ಕಾರಣದಿಂದ ನಾನು ಅವರು ತಮ್ಮ ಹೊಸ ಮುಖ್ಯ ಕೋಚ್ ಜವಾಬ್ದಾರಿಯನ್ನು ತಮ್ಮ ಬ್ಯಾಟಿಂಗ್ ಮಾದರಿಯಲ್ಲೇ ನಿರ್ವಹಿಸಿಕೊಂಡು ಹೋಗಲಿದ್ದಾರೆ ಎಂದು ನಂಬಿದ್ದೇನೆ ಎಂದು ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ 10 ಸಾವಿರ ರನ್ಗಳಿಸಿದ ಬ್ಯಾಟರ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.