ಕರ್ನಾಟಕ

karnataka

ETV Bharat / sports

'ಪಾಕಿಸ್ತಾನ ವಿಶ್ವಕಪ್​ ಸೆಮಿಫೈನಲ್​ಗೆ ಬರಲಿ': ಭಾರತದ ಮಾಜಿ ನಾಯಕನ ವಿಚಿತ್ರ ಕೋರಿಕೆ - Ganguly wants Pakistan in semis

ಪಾಕಿಸ್ತಾನಕ್ಕೆ ವಿಶ್ವಕಪ್​ ಸೆಮಿಫೈನಲ್​ ಹಾದಿ ತುಂಬಾ ಕಠಿಣವಾಗಿದೆ. ಆದಾಗ್ಯೂ ಭಾರತದ ಮಾಜಿ ನಾಯಕ ಸೌರವ್​ ಗಂಗೂಲಿ ಮಾತ್ರ ಆ ತಂಡ ಸೆಮೀಸ್​ಗೆ ಬರಬೇಕು ಎಂದು ಹೇಳಿದ್ದಾರೆ.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

By ETV Bharat Karnataka Team

Published : Nov 9, 2023, 9:35 PM IST

ಕೋಲ್ಕತ್ತಾ:ಪಾಕಿಸ್ತಾನ ಮತ್ತು ಭಾರತ ಪಂದ್ಯ ಅಂದ್ರೆ ಅಲ್ಲೊಂದು ರೋಚಕತೆ, ಕಾದಾಟ. ಮನರಂಜನೆ ಇದ್ದೇ ಇರುತ್ತದೆ. ಇದನ್ನು ಭಾರತೀಯರು ಮಾತ್ರವಲ್ಲ, ಕ್ರಿಕೆಟ್​ ರಂಜಿಸುವ ಎಲ್ಲ ಪ್ರೇಕ್ಷಕರು ಕಾತರದಿಂದ ಕಾಯುತ್ತಾರೆ. ಇಂತಿಪ್ಪ, ಭಾರತದ ಮಾಜಿ ನಾಯಕರೊಬ್ಬರು 'ವಿಶ್ವಕಪ್​ನಲ್ಲಿ ಪಾಕಿಸ್ತಾನ ಸೆಮಿಫೈನಲ್​ಗೆ ಬರಬೇಕು' ಎಂದು ಆಶಿಸಿದ್ದಾರೆ.

ಅಚ್ಚರಿಯಾದ್ರೂ ಸತ್ಯ. ಪಾಕಿಸ್ತಾನ ಸೋತು ವಿಶ್ವಕಪ್​ನಿಂದ ಹೊರಬೀಳಲಿ ಎಂದು ಅಂದುಕೊಳ್ಳುವವರೇ ಹೆಚ್ಚಿರಬೇಕಾದರೆ, ಇದ್ಯಾರಪ್ಪ ಸೆಮೀಸ್​ಗೆ ಬರಬೇಕು ಅಂತ ಕೇಳಿದ್ದು ಅಂತೀರಾ. ಅವರು ಮತ್ಯಾರೂ ಅಲ್ಲ ಭಾರತ ತಂಡದ ಮಾಜಿ ನಾಯಕ, ಬೆಂಗಾಲ್​ ಟೈಗರ್​ ಖ್ಯಾತಿಯ ಸೌರವ್​ ಗಂಗೂಲಿ..!

ಇಲ್ಲಿ ನಡೆಯುತ್ತಿರುವ ಐಪಿಎಲ್​ ಫ್ರಾಂಚೈಸಿ ದೆಹಲಿ ಕ್ಯಾಪಿಟಲ್ಸ್​ನ ಶಿಬಿರದಲ್ಲಿ ಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಆಡಬೇಕು ಎಂದು ಕೋರುವೆ. ಇದರಿಂದ ಪ್ರೇಕ್ಷಕರಿಗೆ ರಂಜನೆಯ ಪಂದ್ಯವನ್ನು ವೀಕ್ಷಿಸಲು ಅವಕಾಶ ಸಿಗುತ್ತದೆ. ಭಾರತ ಸತತ ಎಂಟು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಉಳಿದಿದೆ. ಸೆಮೀಸ್​ನಲ್ಲಿ ಇತ್ತಂಡಗಳು ಎದುರಾದರೆ, ಮತ್ತೊಮ್ಮೆ ಕ್ರಿಕೆಟ್​ ರಸದೌತಣ ಸವಿಯಬಹುದು ಎಂದು ಅಭಿಪ್ರಾಯಪಟ್ಟರು.

ಶಮಿ ವಿಶ್ವಕಪ್‌ನ ಶ್ರೇಷ್ಠ ಬೌಲರ್:ಮೊಹಮ್ಮದ್ ಶಮಿ ಬೌಲಿಂಗ್​ ಹಾಡಿ ಹೊಗಳಿದ ಗಂಗೂಲಿ, ಶಮಿ ವಿಶ್ವಕಪ್‌ನ ಅತ್ಯುತ್ತಮ ಬೌಲರ್. ಅವರ ಕರಾರುವಾಕ್​ ದಾಳಿ ಎಂತಹ ತಂಡವು ಭಯಪಡುವಂತೆ ಮಾಡಿದೆ. ಫೈನಲ್​ವರೆಗೂ ಅವರು ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಸಲಹೆ ನೀಡಿದರು.

ನಾಯಕ ರೋಹಿತ್ ಶರ್ಮಾ ಬಳಗ ಸತತ ಗೆಲುವು ಸಾಧಿಸುತ್ತಿರುವುದರ ಬಗ್ಗೆ ಮಾತನಾಡಿದ ಅವರು, ಲೀಗ್​ನಲ್ಲಿ ಎಲ್ಲ ಪಂದ್ಯ ಗೆದ್ದ ಮಾತ್ರಕ್ಕೆ ತಂಡದ ಕೆಲಸ ಮುಗಿದಿಲ್ಲ. ಮುಖ್ಯ ಘಟ್ಟ ಈಗಷ್ಟೇ ಆರಂಭವಾಗಿದೆ. 2003 ರಲ್ಲಿ ನನ್ನ ನೇತೃತ್ವದಲ್ಲಿ ತಂಡ ಫೈನಲ್​ ತಲುಪಿ ಸೋಲು ಕಂಡಿತು. 2019 ರಲ್ಲಿ ಸೆಮೀಸ್​ನಲ್ಲಿ ಸೋತಿತು. ಅದು ಮತ್ತೆ ಮರುಕಳಿಸಬಾರದು. ಹೀಗಾಗಿ ತಂಡ ಸೆಮೀಸ್​, ಫೈನಲ್​ಗಳನ್ನೂ ಗೆದ್ದು ಕಪ್​ ಎತ್ತುವುದುನ್ನು ನೋಡಲು ಬಯಸುವೆ ಎಂದರು.

ಮ್ಯಾಕ್ಸ್​ವೆಲ್​ ಆಟ ಅದ್ಭುತ, ಶ್ರೇಷ್ಠವಲ್ಲ:ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾದ ಗ್ಲೆನ್​ ಮ್ಯಾಕ್ಸ್​ವೆಲ್ ಅದ್ಭುತವಾಗಿ ಆಡಿದರು. ಆದರೆ, ಅದು ಏಕದಿನ ಇತಿಹಾಸದ ಶ್ರೇಷ್ಠ ಪ್ರದರ್ಶನವಲ್ಲ. ಅವರು ಆಡಿದ್ದು, ಆದರೆ ಅತ್ಯುತ್ತಮ ಬೌಲಿಂಗ್ ಲೈನ್ ಅಪ್ ಇರುವ ತಂಡವ ವಿರುದ್ಧವಲ್ಲ. ಅತ್ಯುತ್ತಮ ನಾಯಕತ್ವವೂ ಅಲ್ಲಿರಲಿಲ್ಲ. ಇದಕ್ಕಿಂತಲೂ ಉತ್ತಮವಾದ ಇನಿಂಗ್ಸ್​ಗಳನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಆಡಿದ್ದನ್ನು ನಾವು ನೋಡಿದ್ದೇವೆ. ಆದರೆ, ತಂಡ ಸೋಲಿನ ಸುಳಿಯಲ್ಲಿದ್ದಾಗ, ಗಾಯಗೊಂಡ ಮ್ಯಾಕ್ಸಿ ಅಂತಹ ಇನಿಂಗ್ಸ್​ ಕಟ್ಟಿದ್ದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ಸೆಮೀಸ್​ಗೆ ಬರುತ್ತಾ ಪಾಕಿಸ್ತಾನ?:ಗುರುವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ ಗೆಲುವು ಸಾಧಿಸಿದ್ದು, ಸೆಮೀಸ್​ಗೆ ಇನ್ನಷ್ಟು ಹತ್ತಿರವಾಗಿದೆ. ಪಾಕಿಸ್ತಾನ ನವೆಂಬರ್​ 11 ರಂದು ಇಂಗ್ಲೆಂಡ್​ ವಿರುದ್ಧ ಕೊನೆಯ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಪಾಕ್​ 287 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿದಲ್ಲಿ ನೆಟ್​ ರನ್​ರೇಟ್​ ಮೂಲಕ ಸೆಮೀಸ್​ ಪ್ರವೇಶಿಸಲಿದೆ. ಸೋತಲ್ಲಿ ತವರಿನ ಹಾದಿ ಹಿಡಿಯಲಿದೆ.

ಇದನ್ನೂ ಓದಿ:ಕಿವೀಸ್​ ಗೆಲ್ಲಬೇಕು, ಭಾರತದ ಎದುರು ಸೆಮೀಸ್​ ಆಡಬೇಕು: ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಆಶಯ

ABOUT THE AUTHOR

...view details