ನವದೆಹಲಿ:ಭಾರತದ ಮಾಜಿ ಕ್ರಿಕೆಟಿಗ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್, ಆರ್ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ನಡುವಿನ ವಾಗ್ಯುದ್ಧ ಮಾಸುವ ಮುನ್ನವೇ ಗಂಭೀರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೆಸರು ಸೂಚಿಸದೇ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ ಗಂಭೀರ್ ಅವರ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯ ಮಾಜಿ ಅಧ್ಯಕ್ಷ ಹಾಗೂ ಖಾಸಗಿ ಸುದ್ಧಿವಾಹಿನಿಯ ನಿರೂಪಕರೂ ಆಗಿರುವ ರಜತ್ ಶರ್ಮಾ ವಿರುದ್ಧವೇ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಲಕ್ನೋ-ಆರ್ಸಿಬಿ ಪಂದ್ಯದ ನಂತರ ಮೈದಾನದಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಬಗ್ಗೆ ಹಲವಾರು ಸುದ್ಧಿ ವಾಹಿನಿಗಳಲ್ಲಿ ವಿಷಯದ ಬಗ್ಗೆ ಸುದ್ಧಿ ಬಿತ್ತರಿಸಲಾಗಿತ್ತು. ನಿರೂಪಕ ರಜತ್ ಶರ್ಮಾ ಅವರು ತಮ್ಮ ಕಾರ್ಯಕ್ರಮದಲ್ಲಿ ಗಂಭೀರ್ ಅವರ ವರ್ತನೆಯನ್ನು ಕ್ರೀಡಾ ಸ್ಪೂರ್ತಿಗೆ ವಿರುದ್ಧ ಎಂದು ಟೀಕಿಸಿದ್ದರು. ಅಲ್ಲದೇ ಕೊಹ್ಲಿಗೆ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಅವರಿಗೆ ಸಮಸ್ಯೆ ಇದೆ. ಗಂಭೀರ್ ಅವರ ಈ ನಡವಳಿಕೆ ಕ್ರೀಡೆಗೆ ಹಾನಿಕಾರಕ ಮತ್ತು ಖಂಡಿಸಲು ಅರ್ಹ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಗಂಭೀರ್ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. "ದೆಹಲಿ ಕ್ರಿಕೆಟ್‌ನಿಂದ ಓಡಿಹೋದ ವ್ಯಕ್ತಿ ಈಗ ಒತ್ತಡ ಸೃಷ್ಟಿಸುತ್ತಿದ್ದಾರೆ. ಕ್ರಿಕೆಟ್ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಲೇ ಪೇಯ್ಡ್ ಪಿಆರ್ ಮಾಡುವುದರಲ್ಲಿ ನಿರತರಾಗಿದ್ದಾರಂತೆ. ಪಲಾಯನಗೈದವರು ನ್ಯಾಯ ನೀಡುವ ಕಲಿಯುಗ ಇದು" ಎಂದು ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಜತ್ ಶರ್ಮಾ ಜುಲೈ 2018ರಲ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷರಾಗಿ ಹುದ್ದೆಗೆ ನೇಮಕಗೊಂಡು 16 ತಿಂಗಳ ಕಾಲ ಅಧ್ಯಕ್ಷರಾಗಿ ಮುಂದುವರೆದಿದ್ದರು. ಬಳಿಕ ಸಂಸ್ಥೆಯೊಳಗಿನ ವಿವಿಧ ಒತ್ತಡಗಳೊಂದಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿ ಶರ್ಮಾ ಡಿಡಿಸಿಎ ಅಧ್ಯಕ್ಷಗಿರಿಗೆ ರಾಜೀನಾಮೆ ನೀಡಿದ್ದರು. ಶರ್ಮಾ ಅವರ ಒತ್ತಡದ ಹೇಳಿಕೆಯನ್ನೇ ಗಂಭೀರ್ ಅವರು ಟ್ವೀಟ್ ಮೂಲಕ ಟೀಕಿಸಿದ್ದಾರೆ ಎನ್ನಲಾಗುತ್ತಿದೆ.
ಘಟನೆಯ ಹಿನ್ನೆಲೆ:ಸೋಮವಾರ ಲಕ್ನೋ ಮತ್ತು ಆರ್ಸಿಬಿ ನಡುವೆ ನಡೆದಿದ್ದ ಪಂದ್ಯದಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಗಲಾಟೆಯಾಗಿತ್ತು. ಲಕ್ನೋ ಬೌಲರ್ ನವೀನ್ ಉಲ್ ಹಕ್ ಗಲಾಟೆಯ ಕೇಂದ್ರಬಿಂದುವಾಗಿದ್ದರು. ಈ ಗಲಾಟೆ ಕ್ರೀಡಾವಲಯ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಗಂಭೀರ್ ಮತ್ತು ಕೊಹ್ಲಿ ನಡುವೆ ನಡೆದಿದ್ದ ಸಂಭಾಷಣೆಯ ಆನ್ಫೀಲ್ಡ್ ವರದಿ ಕೂಡ ಲಭ್ಯವಾಗಿತ್ತು.
ವಿರಾಟ್-ಗಂಭೀರ್ ನಡುವಿನ ಸಂಭಾಷಣೆ ಹೀಗಿತ್ತು..: