ಕರ್ನಾಟಕ

karnataka

ETV Bharat / sports

ಪ್ರೇಮ ಸ್ಮಾರಕ ತಾಜ್​ ಮಹಲ್​ಗೆ ಭೇಟಿ ನೀಡಿದ ವೆಸ್ಟ್​ ಇಂಡೀಸ್​ ಲೆಜೆಂಡ್​ ಬ್ರಿಯಾನ್ ಲಾರಾ - ಐಪಿಎಲ್ ಮೆಗಾ ಹರಾಜು

ಸೋಮವಾರ ಬೆಳಗ್ಗೆ 7 ಗಂಟೆಯ ಸಂದರ್ಭದಲ್ಲಿ ಸ್ಮಾರಕಕ್ಕೆ ಆಗಮಿಸಿದ ವಿಂಡೀಸ್ ಲೆಜೆಂಡ್, ಅರ್ಧಗಂಟೆಗೂ ಹೆಚ್ಚು ಸಮಯವನ್ನು ಅಲ್ಲಿ ಕಳೆದಿದ್ದಾರೆ. ಇವರಿಗೆ ಟೂರಿಸ್ಟ್​ ಗೈಡ್​ ರಿಜ್ವಾನ್​ ತಾಜ್​ಮಹಲ್​ ಇತಿಹಾಸ, ನಿರ್ಮಾಣ ಮತ್ತು ಸೌಂದರ್ಯದ ಬಗ್ಗೆ ಮಾಹಿತಿ ತಿಳಿಸಿಟ್ಟರು.

brian lara visited taj mahal
brian lara visited taj mahal

By

Published : Feb 21, 2022, 6:20 PM IST

ಆಗ್ರ: ವೆಸ್ಟ್​ ಇಂಡೀಸ್​ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ಸೋಮವಾರ ಭಾರತದ ಪ್ರಸಿದ್ಧ ಸ್ಮಾರಕ ತಾಜ್​ ಮಹಲ್​ಗೆ ಭೇಟಿ ನೀಡಿದ್ದಾರೆ. ಸೋಮವಾರ ಬೆಳಗ್ಗೆ 7 ಗಂಟೆಯ ಸಂದರ್ಭದಲ್ಲಿ ಸ್ಮಾರಕಕ್ಕೆ ಆಗಮಿಸಿದ ವಿಂಡೀಸ್ ಲೆಜೆಂಡ್, ಅರ್ಧಗಂಟೆಗೂ ಹೆಚ್ಚು ಸಮಯವನ್ನು ಅಲ್ಲಿ ಕಳೆದಿದ್ದಾರೆ. ಇವರಿಗೆ ಟೂರಿಸ್ಟ್​ ಗೈಡ್​ ರಿಜ್ವಾನ್​ ತಾಜ್​ಮಹಲ್​ ಇತಿಹಾಸ, ನಿರ್ಮಾಣ ಮತ್ತು ಸೌಂದರ್ಯದ ಬಗ್ಗೆ ಮಾಹಿತಿ ತಿಳಿಸಿಟ್ಟರು.

ವೆಸ್ಟ್​ ಇಂಡೀಸ್​ ತಂಡದ ಮಾಜಿ ನಾಯಕ ಲಾರಾ ಪ್ರಸ್ತುತ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಬ್ಯಾಟಿಂಗ್ ಕೋಚ್​ ಆಗಿರುವ​ ಬ್ರಿಯಾನ್ ಲಾರಾ ಈ ಹಿಂದೆ 1984ರಲ್ಲಿ ಪ್ರಸಿದ್ಧ ಸ್ಮಾರಕವನ್ನು ನೋಡಲು ಆಗಮಿಸಿದ್ದರು. ಇದೀಗ ಐಪಿಎಲ್ ಮೆಗಾ ಹರಾಜಿಗೆ ಆಗಮಿಸಿದ್ದ ಅವರನ್ನು ತಾಜ್​ ಮಹಲ್​ ಕ್ರೇಜ್​ ಮತ್ತೆ ತನ್ನತ್ತ ಕರೆಸಿಕೊಂಡಿದೆ ಎಂದು ಲಾರಾ ರಿಜ್ವಾನ್ ಬಳಿ ತಿಳಿಸಿದ್ದಾರೆ. ತಾಜ್​ ಮಹಲ್ ಸೌಂದರ್ಯಕ್ಕೆ ದಿಗ್ಬ್ರಮೆಗೊಂಡ ಲಾರಾ ಜೊತೆಗೆ ಬಂದಿದ್ದ ಸ್ನೇಹಿತರು ಮತ್ತೆ ಕುಟುಂಬದೊಂದಿಗೆ ಹಿಂತಿರುಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಬ್ರಿಯಾನ್ ಲಾರಾ

ಇನ್ನು ವೆಸ್ಟ್ ಇಂಡೀಸ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ನನ್ನು ನೋಡಿದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದಿದ್ದರು. ಆದರೆ ಭದ್ರತಾ ಸಿಬ್ಬಂದಿ ಅಭಿಮಾನಿಗಳನ್ನು ತಡೆದು ಬ್ರಿಯಾನ್ ಲಾರಾ ಅವರನ್ನು ಕಳುಹಿಸಿಕೊಟ್ಟಿದ್ದಾರೆ.

ಇದನ್ನೂ ಓದಿ:ವೃದ್ಧಿಮಾನ್​ ಸಹಾಗೆ ಪತ್ರಕರ್ತನಿಂದ ಬೆದರಿಕೆ, ಹೆಸರು ಬಹಿರಂಗಪಡಿಸುವಂತೆ ಬಿಸಿಸಿಐ ಸೂಚನೆ

ABOUT THE AUTHOR

...view details