ಕರ್ನಾಟಕ

karnataka

By

Published : Apr 24, 2021, 4:54 PM IST

ETV Bharat / sports

ಹೃದಯಾಘಾತಕ್ಕೆ ಬಲಿಯಾದ 33 ವರ್ಷದ ಹೈದರಾಬಾದ್ ಮಾಜಿ ಕ್ರಿಕೆಟಿಗ

ಅಶ್ವಿನ್ 2009ರಲ್ಲಿ ಮುಂಬೈ ವಿರುದ್ಧ ತಮ್ಮ ಕೊನೆಯ ರಣಜಿ ಪಂದ್ಯವನ್ನಾಡಿದ್ದರು. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್​ ಪರ ಸ್ಥಳೀಯ ಲೀಗ್​ಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು. ಯಾದವ್​ 10 ಲಿಸ್ಟ್​ ಎ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಹೃದಯಾಘಾತಕ್ಕೆ ಬಲಿಯಾದ ಹೈದರಾಬಾದ್ ಮಾಜಿ ಕ್ರಿಕೆಟಿಗ
ಹೃದಯಾಘಾತಕ್ಕೆ ಬಲಿಯಾದ ಹೈದರಾಬಾದ್ ಮಾಜಿ ಕ್ರಿಕೆಟಿಗ

ಹೈದರಾಬಾದ್​ : ಹೈದರಾಬಾದ್​ನ ಮಾಜಿ ವೇಗದ ಬೌಲರ್​ ಅಶ್ವಿನ್ ಯಾದವ್​ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.

33 ವರ್ಷದ ಅಶ್ವಿನ್​, ಪತ್ನಿ ಮತ್ತು 3 ಗಂಡು ಮಕ್ಕಳನ್ನು ಅಗಲಿದ್ದಾರೆ. ಯಾದವ್ 2007ರಲ್ಲಿ ಪಂಜಾಬ್ ವಿರುದ್ಧ ರಣಜಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಅವರು ​ ಹೈದರಾಬಾದ್​ ಪರ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 34 ವಿಕೆಟ್​ ಪಡೆದಿದ್ದರು. 208-09ರಲ್ಲಿ ಡೆಲ್ಲಿ ವಿರುದ್ಧ ಉಪ್ಪಲ್​ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ 52 ರನ್​ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

ಅಶ್ವಿನ್ 2009ರಲ್ಲಿ ಮುಂಬೈ ವಿರುದ್ಧ ತಮ್ಮ ಕೊನೆಯ ರಣಜಿ ಪಂದ್ಯವನ್ನಾಡಿದ್ದರು. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್​ ಪರ ಸ್ಥಳೀಯ ಲೀಗ್​ಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು. ಯಾದವ್​ 10 ಲಿಸ್ಟ್​ ಎ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಯಾದವ್​ ನಿಧನಕ್ಕೆ ಭಾರತ ತಂಡದ ಫೀಲ್ಡಿಂಗ್ ಕೋಚ್​ ಆರ್​.ಶ್ರೀದರ್​ ಸಂತಾಪ ಸೂಚಿಸಿದ್ದಾರೆ." ಅಶ್ವಿನ ಯಾದವ್​ ಅವರ ಅಗಲಿಕೆಯ ಸುದ್ದಿ ಕೇಳಿ ದುಃಖವಾಗಿದೆ. ಅವರು ತುಂಬಾ ಖುಷಿಯ ಮತ್ತು ಮೋಜಿನ ವ್ಯಕ್ತಿ, ಅವರೊಬ್ಬ ತಂಡದ ಆಟಗಾರನಾಗಿ ಕೌಶಲ್ಯಕ್ಕಿಂತ ಹೆಚ್ಚಿನದನ್ನು ತೋರಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಸಾವಿನ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ"ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ಓದಿ: ಮಹಾಮಾರಿ ಕೊರೊನಾಗೆ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ತಾಯಿ ಬಲಿ

ABOUT THE AUTHOR

...view details