ಮುಂಬೈ:ಕ್ರಿಕೆಟ್ ದೇವರೆಂದೇ ಹೆಸರಾದ ಸಚಿನ್ ತೆಂಡೂಲ್ಕರ್ ಜಗತ್ತಿನಾದ್ಯಂತ ಅಭಿಮಾನಿಗಳು ಹೊಂದಿದ್ದಾರೆ. ಅವರು ಕ್ರಿಕೆಟ್ ಆಡುತ್ತಿದ್ದಾಗ ಮೈದಾನಕ್ಕೆ ನುಗ್ಗಿ ಬಂದು ಅಭಿಮಾನಿಗಳು ಅವರ ಕಾಲಿಗೆ ನಮಸ್ಕರಿಸಿದ್ದನ್ನು ನೋಡಿದ್ದೇವೆ. ಆದರೆ, ಐಪಿಎಲ್ನ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಖ್ಯಾತ ಮಾಜಿ ಕ್ರಿಕೆಟಿಗರೊಬ್ಬರು ಸಚಿನ್ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.
ಹೌದು, ಜಗತ್ತಿನ ಅತ್ಯದ್ಭುತ ಫೀಲ್ಡರ್, ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಜಾಂಟಿ ರೋಡ್ಸ್(52) ಅವರೇ ಸಚಿನ್(48) ಕಾಲಿಗೆ ಎರಗಿದವರು. ಪಂಜಾಬ್- ಮುಂಬೈ ಮಧ್ಯೆ ನಡೆದ ಪಂದ್ಯದ ಬಳಿಕ ಆಟಗಾರರು ಪರಸ್ಪರ ಹಸ್ತಲಾಘವ ಮಾಡುತ್ತಿದ್ದಾಗ ಎದುರಾದ ಸಚಿನ್ ಕಾಲಿಗೆ ಜಾಂಟಿ ರೋಡ್ಸ್ ಎರಗಲು ಮುಂದಾಗಿದ್ದಾರೆ. ಈ ವೇಳೆ ಅವರ ಕೈ ಹಿಡಿದ ಸಚಿನ್ ತಡೆಯಲು ಮುಂದಾದರು. ಆದರೂ ಜಾಂಟಿ ರೋಡ್ಸ್ ಬಾಗಿ ಸಚಿನ್ ಕಾಲು ಮುಟ್ಟಿದರು.