ಕರ್ನಾಟಕ

karnataka

ETV Bharat / sports

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಂಗ್ಲೆಂಡ್ ಮಹಿಳಾ ಕ್ರಿಕೆಟ್​ನ ಈ ಇಬ್ಬರು ಆಟಗಾರ್ತಿಯರು!

ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಸ್ಟಾರ್‌ಗಳಾದ ಕ್ಯಾಥರೀನ್‌ ಬ್ರಂಟ್ ಮತ್ತು ನಥಾಲಿ ಸ್ಕಿವರ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2017ರ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬಳಿಕ ತಮ್ಮಿಬ್ಬರ ಮಧ್ಯೆ ಪ್ರೀತಿ ಬೆಳೆಯಿತು ಎಂದು ನಿಶ್ಚಿತಾರ್ಥ ಸಂದರ್ಭದಲ್ಲಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಮೊಟ್ಟ ಮೊದಲ ಸಲಿಂಗಿ ಜೋಡಿ ಹೇಳಿಕೊಂಡಿತ್ತು..

England Women Cricketers Get Married, Katherine Brunt And Nat Sciver Get Married, England Women Cricketers news, ವಿವಾಹವಾದ ಇಂಗ್ಲೆಂಡ್ ಮಹಿಳಾ ಕ್ರಿಕೆಟಿಗರು, ಕ್ಯಾಥರೀನ್ ಬ್ರಂಟ್ ಮತ್ತು ನ್ಯಾಟ್ ಸ್ಕಿವರ್ ವಿವಾಹ, ಇಂಗ್ಲೆಂಡ್ ಮಹಿಳಾ ಕ್ರಿಕೆಟಿಗರ ಸುದ್ದಿ,
ಕೃಪೆ: Twitter

By

Published : May 30, 2022, 2:19 PM IST

ಇಂಗ್ಲೆಂಡ್ ​:2017ರ ವಿಶ್ವಕಪ್ ವಿಜೇತ ಕ್ರಿಕೆಟಿಗರಾದ ಕ್ಯಾಥರೀನ್ ಬ್ರಂಟ್ ಮತ್ತು ನ್ಯಾಟ್ ಸ್ಕಿವರ್ ವಾರಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಇಂಗ್ಲೆಂಡ್ ವೇಗಿ ಇಸಾ ಗುಹಾ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಇವರ ಮದುವೆ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬರ್ನ್ಟ್​ ಮತ್ತು ಸ್ಕಿವರ್​ ಮದುವೆ ಫೋಟೋವನ್ನು ಹಂಚಿಕೊಂಡಿರುವ ಇಂಗ್ಲೆಂಡ್​ ವೇಗಿ ಇಸಾ ಗುಹಾ, ‘ಹೆಮ್ಮೆ.. ನಿಮ್ಮಿಬ್ಬರನ್ನೂ ಪ್ರೀತಿಸುತ್ತೇನೆ’ ಅಂತಾ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಇಂಗ್ಲೆಂಡ್ ಕ್ರಿಕೆಟ್‌ ಕೂಡ ಈ ನವದಂಪತಿಗೆ ಶುಭಹಾರೈಸಿದೆ. ‘ವಾರಾಂತ್ಯದಲ್ಲಿ ವಿವಾಹವಾದ ಕ್ಯಾಥರೀನ್ ಬ್ರಂಟ್ ಮತ್ತು ನ್ಯಾಟ್ ಸ್ಕಿವರ್ ಅವರಿಗೆ ನಮ್ಮ ಆತ್ಮೀಯ ಅಭಿನಂದನೆಗಳು’ ಎಂದು ಇಂಗ್ಲೆಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ.

ದಕ್ಷಿಣ ಆಫ್ರಿಕಾದ ಮಾರಿಜಾನ್ನೆ ಕಪ್ ಮತ್ತು ಡೇನ್ ವ್ಯಾನ್ ನಿಕೆರ್ಕ್, ನ್ಯೂಜಿಲೆಂಡ್‌ನ ಆಮಿ ಸ್ಯಾಟರ್ಥ್‌ವೈಟ್ ಮತ್ತು ಲಿಯಾ ತಹುಹು ನಂತರ ಸ್ಕಿವರ್ ಮತ್ತು ಬ್ರಂಟ್ ಈಗ ಮತ್ತೊಂದು ಕ್ರಿಕೆಟ್ ಜೋಡಿಯಾಗಿದ್ದಾರೆ. 2017ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ತಂಡ ಭಾರತ ವಿರುದ್ಧ ಜಯ ದಾಖಲಿಸಿ ಟ್ರೋಫಿ ಎತ್ತಿ ಹಿಡಿದಿತ್ತು.

ಇದಾದ ಕೆಲವೇ ಗಂಟೆಗಳ ಬಳಿಕ 34 ವರ್ಷದ ಕ್ಯಾಥರೀನ್‌ ಬ್ರಂಟ್ ಇಂಗ್ಲೆಂಡ್‌ನ ವೇಗದ ಬೌಲರ್‌ ಕ್ಯಾಥರೀನ್‌ ಬ್ರಂಟ್​ ತಮ್ಮ ಜೊತೆಗಾರ್ತಿ ನಥಾಲಿ ಸ್ಕಿವರ್​ಗೆ ಪ್ರಪೋಸ್​ ಮಾಡಿದ್ದರು. ಬಳಿಕ ಅವರ ಜೊತೆಗಿನ ಸಂಬಂಧವನ್ನು ಬಹಿರಂಗ ಪಡಿಸಿದರು.

ಓದಿ:ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿದ ಐಪಿಎಲ್​ನ 15ನೇ ಸೀಸನ್​!

ನಮ್ಮಿಬ್ಬರ ನಡುವಣ ಬಾಂಧವ್ಯವನ್ನು ಕುಟುಂಬ ಸದಸ್ಯರು ಒಂದೇ ರೀತಿಯಲ್ಲಿ ಸ್ವೀಕರಿಸಲಿಲ್ಲ. ನಥಾಲಿಗೆ ಕೊಂಚ ಸುಲಭವಾದರೂ, ನನ್ನ ಕುಟುಂಬದವರು ಇದಕ್ಕೆ ಸಮ್ಮತಿಸಿರಲಿಲ್ಲ. ಹೀಗಾಗಿ, ಇಷ್ಟು ದಿನ ಈ ವಿಚಾರವನ್ನು ಗುಪ್ತವಾಗಿ ಇಡಲಾಗಿತ್ತು. ನಾನು ನನ್ನ ಬಾಳ ಸಂಗಾತಿಯನ್ನು ಈ ರೀತಿ ಆಯ್ಕೆ ಮಾಡಿಕೊಂಡಿರುವುದನ್ನು ಕುಟುಂಬಸ್ಥರು ನಂಬಲಿಲ್ಲ.

ಕುಟುಂಬಸ್ಥರ ಮೇಲೆ ಅಪಾರ ಪ್ರೀತಿಯಿದ್ದು, ಅವರಿಗೆ ನನ್ನ ಭಾವನೆ ಅರ್ಥ ಮಾಡಿಸುವುದು ಬಹಳ ಕಷ್ಟವಾಯಿತು. ಇದಕ್ಕೆ ಸುದೀರ್ಘಾವಧಿ ಬೇಕಾಯಿತು ಎಂದು ನಿಶ್ಚಿತಾರ್ಥ ವೇಳೆ ಕ್ಯಾಥರೀನ್‌ ಬ್ರಂಟ್ ಹೇಳಿಕೊಂಡಿದ್ದರು. ನನ್ನ ಜೀವನ ಹೇಗಿರಬೇಕು ಎಂಬುದನ್ನು ನಿರ್ಧರಿಸುವುದು ನನಗೆ ಸೇರಿದ್ದು.

ಹೀಗಾಗಿ, ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿತ್ತು. ಯಾವುದಾದರು ಒಂದನ್ನು ತ್ಯಾಗ ಮಾಡಲೇಬೇಕಾಯಿತು. ಆದರೆ, ಅವರು ಈಗಲೂ ನನ್ನ ಪೋಷಕರೇ.. ನನ್ನ ಮೇಲೆ ಪ್ರೀತಿ ಇದ್ದೇ ಇರುತ್ತದೆ. ನನಗೆ ಅಗತ್ಯವಿದ್ದಾಗ ಅವರು ಇರುತ್ತಾರೆ ಎಂಬ ವಿಶ್ವಾಸವಿದೆ ಅಂತಾ ಕ್ಯಾಥರೀನ್‌ ಬ್ರಂಟ್ ಹೇಳಿದ್ದಾರೆ.

ABOUT THE AUTHOR

...view details