ಅಹಮದಾಬಾದ್: ಭಾರತ ವಿರುದ್ಧದ ಮೂರನೇ ಟಿ -20 ಪಂದ್ಯದಲ್ಲಿ ಇಂಗ್ಲೆಂಡ್ ಪಡೆ ಎಂಟು ವಿಕೆಟ್‌ಗಳ ಜಯ ದಾಖಲಿಸಿತು. ಈ ಜಯದ ಮೂಲಕ ಇಂಗ್ಲೆಂಡ್ ತಂಡ 5 ಪಂದ್ಯಗಳ ಟಿ-20 ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ.
3ನೇ ಟಿ-20 ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೋಸ್ ಬಟ್ಲರ್, 52 ಎಸೆತಗಳಲ್ಲಿ ಅಜೇಯ 83 ರನ್ ಗಳಿಸುವ ಮೂಲಕ ಭಾರತದ ಬೌಲರ್ಗಳನ್ನ ಚಂಡಾಡಿದ್ದರು. ಈ ಪಂದ್ಯದಲ್ಲಿ ಸ್ಪಿನ್ನರ್ಗಳನ್ನ ಟಾರ್ಗೆಟ್ ಮಾಡಿದ್ದ ಬಟ್ಲರ್ ಮನ ಬಂದಂತೆ ತಳಿಸಿದ್ದರು.
"ನಾನು ಇನ್ನಿಂಗ್ಸ್ ಆರಂಭದಿಂದಲೇ ಆಕ್ರಮಣ ಮಾಡಲು ಉತ್ತಮ ಸಮಯ ಎಂದು ಭಾವಿಸಿದ್ದೆವು, ನಾನು ಸ್ಪಿನ್ನರ್‌ಗಳ ಮೇಲೆ ಆಕ್ರಮಣ ಮಾಡುತ್ತೇನೆ ಎಂದು ಯಾರು ನಿರೀಕ್ಷಿಸುವುದಿಲ್ಲ. ಆದ್ದರಿಂದ ನಾನು ಅವರನ್ನ ಟಾರ್ಗೆಟ್ ಮಾಡಲು ಪ್ರಯತ್ನಿಸಿದೆ. ಚಹಲ್ ವಿರುದ್ಧ ಇಂದು ನಾನು ಆಡಿದ ರೀತಿ ಸಂತೋಷವಾಗಿದೆ. ಚಹಲ್ ಎಸೆದ ಮೊದಲ ಬಾಲ್ನಲ್ಲಿ, ಮೊದಲ ಸಿಕ್ಸರ್ ಸಿಡಿಸಿದ ನಂತರ ನನ್ನ ಆತಂಕ ದೂರ ಆಗಿತ್ತು"ಎಂದು ಪಂದ್ಯದ ನಂತರ ಬಟ್ಲರ್ ಹೇಳಿದರು.
ಓದಿ : ರಾಹುಲ್ ಟಿ-20 ಫಾರ್ಮೆಟ್ನಲ್ಲಿ ನಮ್ಮ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್: ಕನ್ನಡಿಗನ ಪರ ನಿಂತ ಬ್ಯಾಟಿಂಗ್ ಕೋಚ್
ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ಚಹಲ್ ಅವರನ್ನ ಬೌಲಿಂಗ್ಗೆ ಇಳಿಸಿತ್ತು. ಚಹಲ್ ಎಸೆದ ಮೊದಲ ಬಾಲ್ನ್ನು ಬಟ್ಲರ್ ಸಿಕ್ಸರ್ಗೆ ಅಟ್ಟಿದ್ದರು. ನಂತರ 4 ನೇ ಬಾಲ್ನಲ್ಲಿ ಜೇಸನ್ ರಾಯ್ ವಿಕೆಟ್ ಪಡೆದು ಚಹಲ್ ಸೇಡು ತಿರಿಸಿಕೊಂಡಿದ್ದರು. ಆದರೆ ಈ ಪಂದ್ಯದಲ್ಲಿ ಚಹಲ್ ದುಬಾರಿ ಬಾಲರ್ ಎನಿಸಿಕೊಂಡರು.