ಕರ್ನಾಟಕ

karnataka

ETV Bharat / sports

8 ಎಸೆತಗಳಲ್ಲಿ 3 ವಿಕೆಟ್‌ ಕಳೆದುಕೊಂಡಿದ್ದು ನಮ್ಮ ಹಿನ್ನಡೆಗೆ ಕಾರಣ : ಮಾರ್ಗನ್

ಈ ವರ್ಷದ ಕೊನೆಯಲ್ಲಿ ಟಿ-20 ವಿಶ್ವಕಪ್ ಆಡುವ ಮೊದಲು ಈ ಸರಣಿ ಆಡುತ್ತಿರುವುದು ನಮ್ಮ ಕಲಿಕೆಗೆ ಸ್ಪೂರ್ತಿದಾಯಕವಾಗಿದೆ ಎಂದು ಇಂಗ್ಲೆಂಡ್​ ತಂಡದ ನಾಯಕ ಇಯಾನ್​ ಮಾರ್ಗನ್ ಹೇಳಿದ್ದಾರೆ.

Eoin Morgan
ಇಯಾನ್​ ಮಾರ್ಗನ್

By

Published : Mar 19, 2021, 9:17 AM IST

ಅಹಮದಾಬಾದ್:ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 4 ನೇ ಟಿ - 20 ಪಂದ್ಯದಲ್ಲಿ ಸೂರ್ಯಕುಮಾರ್​ ಭರ್ಜರಿ ಅರ್ಧಶತಕ ಮತ್ತು ಶಾರ್ದುಲ್ ಠಾಕೂರ್ ಬೌಲಿಂಗ್​ ನೆರವಿನಿಂದ 8 ರನ್​ಗಳಿಂದ ಗೆದ್ದ ಭಾರತ ತಂಡ ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿದೆ.

ಈ ವರ್ಷದ ಕೊನೆಯಲ್ಲಿ ಟಿ-20 ವಿಶ್ವಕಪ್ ಆಡುವ ಮೊದಲು ಈ ಸರಣಿ ಆಡುತ್ತಿರುವುದು ನಮ್ಮ ಕಲಿಕೆಗೆ ಸ್ಪೂರ್ತಿದಾಯಕವಾಗಿದೆ ಎಂದು ಇಂಗ್ಲೆಂಡ್​ ತಂಡದ ನಾಯಕ ಇಯಾನ್​ ಮಾರ್ಗನ್ ಹೇಳಿದ್ದಾರೆ.

"ಇದು ಖಂಡಿತವಾಗಿಯೂ ಒಳ್ಳೆಯ ಪಂದ್ಯವಾಗಿತ್ತು. ಇದು ಎರಡು ತಂಡಗಳ ಗೆಲುವಿನ ಹತ್ತಿರದ ಆಟವಾಗಿತ್ತು. ಭಾರತ ತಂಡವು ಉತ್ತಮವಾಗಿ ಆಡಿದ್ದು, ಈ ಗೆಲುವಿಗೆ ಸಂಪೂರ್ಣ ಅರ್ಹವಾಗಿದೆ. ಪಂದ್ಯದ ವೇಳೆ ಹೆಚ್ಚು ಇಬ್ಬನಿ ಇದ್ದ ಪರಿಣಾಮ ಎರಡು ತಂಡಗಳಿಗೆ ಕಷ್ಟಕರವಾಗಿತ್ತು. ಕೊನೆಯ ಓವರ್ ಬಹಳ ರೋಚಕತೆಯಿಂದ ಕೂಡಿದ್ದು, ಭಾರತ ಈ ಓವರ್​ನಲ್ಲಿ ಕಮ್​ಬ್ಯಾಕ್​ ಮಾಡಿತು. ಈ ಸರಣಿಯಲ್ಲಿ ನಾವು ಎಷ್ಟು ಸಾಧ್ಯವೋ ಅಷ್ಟು ಕಲಿಯಲು ಪ್ರಯತ್ನಿಸುತ್ತಿದ್ದೇವೆ. ಇದು ಟಿ-20 ವಿಶ್ವಕಪ್‌ ಪ್ರಗತಿ ಮುಖ್ಯವಾಗಿದೆ "ಎಂದು ಪಂದ್ಯದ ನಂತರ ಮಾರ್ಗನ್​ ಹೇಳಿದರು.

ಓದಿ : ಕೊನೆ ಓವರ್​ನಲ್ಲಿ ರೋಹಿತ್​ ನೀಡಿದ ಸಲಹೆ ವರ್ಕೌಟ್​ ಆಯ್ತು: ಶಾರ್ದುಲ್ ಠಾಕೂರ್

"ಅರ್ಧದಷ್ಟು ಹಂತದಲ್ಲಿ ಇಬ್ಬನಿ ಇದೆ ಎಂದು ತಿಳಿದು ನಾವು ತುಂಬಾ ಸಂತೋಷಪಟ್ಟಿದ್ದೇವೆ. ಚೆಂಡು ಹೆಚ್ಚು ಸ್ವಿಂಗ್​​​ ಆಗದ ಕಾರಣ ನಾವು ಭಾರತದ ಮೇಲೆ ಹಿಡಿತ ಸಾಧಿಸಿದ್ದೆವು. 16 ಮತ್ತು 17 ಓವರ್‌ಗಳಲ್ಲಿ ನಾವು ಎಂಟು ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡೆವು, ಅದು ನಮ್ಮ ಹಿನ್ನಡೆಗೆ ಕಾರಣವಾಯಿತು. ಉನ್ನತ-ಗುಣಮಟ್ಟದ ಬೌಲಿಂಗ್​ ನಡುವೆಯು ಬೈರ್‌ಸ್ಟೋವ್ ಮತ್ತು ಸ್ಟೋಕ್ಸ್ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಮುಂದಿನ ಪಂದ್ಯವನ್ನು ಗೆಲ್ಲಲು ನಾವು ಆಡುತ್ತೇವೆ "ಎಂದು ಅವರು ಹೇಳಿದರು.

ABOUT THE AUTHOR

...view details