ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ನಲ್ಲಿ ಭಾರತ ಆಡುತ್ತದೋ ಇಲ್ಲವೂ ಎಂಬುದು ಗೊತ್ತಾಗಲು ಬಾರ್ಡರ್ ಗವಾಸ್ಕರ್ ಟ್ರೋಫಿ ನಾಲ್ಕನೇ ಪಂದ್ಯ ನಿರ್ಣಾಯಕ ಆಗಲಿದೆ. ಗುಜರಾತ್ನಲ್ಲಿ ನಡೆಯುವ ಪಂದ್ಯದಲ್ಲಿ ಗೆದ್ದರೆ ಫೈನಲ್ ಪ್ರವೇಶ ಪಕ್ಕಾ ಆಗಲಿದೆ. ಇಲ್ಲದಿದ್ದಲ್ಲಿ ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯ ಫಲಿತಾಂಶದ ಆಧಾರದಲ್ಲಿ ಭಾರತದ ಫೈನಲ್ ಆಟ ಗೊತ್ತಾಗಲಿದೆ. ನ್ಯೂಜಿಲ್ಯಾಂಡ್ 2019-2021 ಮೊದಲ ವಿಶ್ವ ಟೆಸ್ಟ್ ಚಾಂಪಿಹಯನ್ಶಿಪ್ನ ವಿಜೇತವಾಗಿತ್ತು.
ಡಬ್ಲ್ಯುಟಿಸಿ 2021-23ರಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದಾರೆ. WTC ರನ್ ಸ್ಕೋರಿಂಗ್ ಚಾರ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ರೂಟ್ ಮೊದಲ ಸ್ಥಾನ ಗಳಿಸಿದ್ದಾರೆ. 22 ಪಂದ್ಯಗಳನ್ನು ಆಡಿರುವ ಅವರು 1915 ರನ್ ಗಳಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಸೀರೀಸ್ನಲ್ಲಿ ಅವರ ಗರಿಷ್ಠ ಸ್ಕೋರ್ 180 ಆಗಿದೆ. ರೂಟ್ ನಂತರ ಪಾಕಿಸ್ತಾನದ ಬಾಬರ್ ಅಜಮ್ 14 ಪಂದ್ಯಗಳಲ್ಲಿ 1527 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಬೌಲಿಂಗ್ ಗಳಿಕೆಯ ಪಟ್ಟಿಯಲ್ಲಿ ನಾಥನ್ ಲಿಯಾನ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ನಾಥನ್ ಲಿಯಾನ್ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 80 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಅವರ ನಂತರ ಕಗಿಸೊ ರಬಾಡ 63 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಬೌಲರ್ ಆರ್ ಅಶ್ವಿನ್ 54 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ದಾರೆ.