ಕರ್ನಾಟಕ

karnataka

ETV Bharat / sports

ಪಾಕಿಸ್ತಾನ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ.. ಸ್ಟಾರ್ ಆಟಗಾರರಿಗೆ ಕೊಕ್!!

ಐಸಿಸಿ ಏಕದಿನ ಸೂಪರ್ ಲೀಗ್​ನ ಭಾಗವಾಗಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಜುಲೈ 8, 10 ಮತ್ತು 13ರಂದು ಕಾರ್ಡಿಫ್‌ನಲ್ಲಿ ಏಕದಿನ ಸರಣಿ ನಡೆಯಲಿದೆ. ಸೂಪರ್​ ಲೀಗ್​ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ನಂಬರ್ 1 ಸ್ಥಾನದಲ್ಲಿದ್ದರೆ, ಪಾಕಿಸ್ತಾನ 3ನೇ ಸ್ಥಾನದಲ್ಲಿದೆ..

ಪಾಕಿಸ್ತಾನ vs ಇಂಗ್ಲೆಂಡ್ ODI ಸರಣಿ
ಪಾಕಿಸ್ತಾನ vs ಇಂಗ್ಲೆಂಡ್ ODI ಸರಣಿ

By

Published : Jul 3, 2021, 10:25 PM IST

ಲಂಡನ್ ​:ಪಾಕಿಸ್ತಾನ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ, ಸ್ಟಾರ್​ ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ ಮತ್ತು ಜೋಶ್ ಬಟ್ಲರ್​​ಗೆ ವಿಶ್ರಾಂತಿ ನೀಡಿದೆ. ಶ್ರೀಲಂಕಾ ವಿರುದ್ಧದ ಸರಣಿಗೂ ಕೂಡ ಇದೇ ತಂಡವನ್ನು ಪ್ರಕಟಿಸಿತ್ತು.

ಆದರೆ, ಟಾಮ್​ ಬಾಂಟನ್ ​ಮಾತ್ರ ಈ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅವಕಾಶ ಪಡೆದಿರುವ ಹೊಸಮುಖವಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಗಾಯಗೊಂಡಿದ್ದ ಉಪನಾಯಕ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮೆನ್ ಜೋಸ್ ಬಟ್ಲರ್‌ಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ತಾವಾಗಿಯೇ ಹಿಂದೆ ಸರಿದಿರುವ ಎಡಗೈ ಬ್ಯಾಟ್ಸ್‌ಮನ್ ಡೇವಿಡ್ ಮಲನ್ ಜಾಗಕ್ಕೆ ಬ್ಯಾಂಟನ್ ಆಯ್ಕೆಯಾಗಿದ್ದಾರೆ.

ಗಾಯದಿಂದ ಒಂದು ತಿಂಗಳಿನಿಂದ ಹೊರಗುಳಿದಿದ್ದ ಸ್ಟೋಕ್ಸ್​ಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಕ್ಕಿಲ್ಲ. ಆದರೆ, ಪಾಕಿಸ್ತಾನ ವಿರುದ್ಧದ ಟಿ 20 ಸರಣಿಯಿಂದ ಮರಳುವ ಸಾಧ್ಯತೆಯಿದೆ. ಜಾರ್ಜ್​ ಗಾರ್ಟನ್​ ತಂಡದಲ್ಲಿ ಅವಕಾಶ ಪಡೆದಿರುವ ಏಕೈಕ ಅನ್​ಕ್ಯಾಪ್ಡ್​ ಪ್ಲೇಯರ್​ ಆಗಿದ್ದಾರೆ.

ಐಸಿಸಿ ಏಕದಿನ ಸೂಪರ್ ಲೀಗ್​ನ ಭಾಗವಾಗಿರುವ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಜುಲೈ 8, 10 ಮತ್ತು 13ರಂದು ಕಾರ್ಡಿಫ್‌ನಲ್ಲಿ ಏಕದಿನ ಸರಣಿ ನಡೆಯಲಿದೆ. ಸೂಪರ್​ ಲೀಗ್​ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ನಂಬರ್ 1 ಸ್ಥಾನದಲ್ಲಿದ್ದರೆ, ಪಾಕಿಸ್ತಾನ 3ನೇ ಸ್ಥಾನದಲ್ಲಿದೆ.

ಏಕದಿನ ಸರಣಿಗೆ ಇಂಗ್ಲೆಂಡ್ ತಂಡ :

ಇಯಾನ್ ಮಾರ್ಗನ್ (ನಾಯಕ), ಜಾನಿ ಬೈರ್‌ಸ್ಟೋವ್, ಜೇಸನ್ ರಾಯ್, ಜೋ ರೂಟ್, ಸ್ಯಾಮ್ ಬಿಲ್ಲಿಂಗ್ಸ್, ಮೊಯೀನ್ ಅಲಿ, ಸ್ಯಾಮ್ ಕರ್ರನ್, ಡೇವಿಡ್ ವಿಲ್ಲಿ, ಟಾಮ್ ಕರ್ರನ್, ಆದಿಲ್ ರಶೀದ್, ಮಾರ್ಕ್ ವುಡ್, ಲಿಯಾಮ್ ಲಿವಿಂಗ್​ಸ್ಟೋನ್, ಕ್ರಿಸ್ ವೋಕ್ಸ್, ಲಿಯಾಮ್ ಡಾಸನ್, ಜಾರ್ಜ್ ಗಾರ್ಟನ್, ಟಾಮ್ ಬಾಂಟನ್

ಇದನ್ನು ಓದಿ:ಕ್ರಿಕೆಟ್ ಬಗ್ಗೆ ಎಳ್ಳಷ್ಟು ಜ್ಞಾನ ಇಲ್ಲದವರು ಕೊಹ್ಲಿ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೆ..

ABOUT THE AUTHOR

...view details