ಬರ್ಮಿಂಗ್ಹ್ಯಾಮ್:ಬರೋಬ್ಬರಿ 15 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿದ್ದ ಭಾರತದ ಆಸೆ ಭಗ್ನಗೊಂಡಿದೆ. ಮರುನಿಗದಿಯಾಗಿದ್ದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಬಳಗ ಸೋಲು ಕಾಣುವ ಮೂಲಕ ಐದು ಟೆಸ್ಟ್ ಪಂದ್ಯಗಳ ಸರಣಿ 2-2 ಅಂತರದಲ್ಲಿ ಮುಕ್ತಾಯಗೊಂಡಿದೆ.
ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಮೊದಲ ಮೂರು ದಿನ ಭಾರತ ಮೆಲುಗೈ ಸಾಧಿಸಿದ್ರೂ, ಕೊನೆಯ ಎರಡು ದಿನ ಪಂದ್ಯವನ್ನ ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಆತಿಥೇಯ ಇಂಗ್ಲೆಂಡ್ 7 ವಿಕೆಟ್ಗಳ ಅಂತರದ ಗೆಲುವಿನ ನಗೆ ಬೀರಿದೆ. ಈ ಮೂಲಕ ಸರಣಿ ಸೋಲಿನಿಂದ ಪಾರಾಗಿದೆ.
ಇಂಗ್ಲೆಂಡ್ ವಿರುದ್ಧ ಟಾಸ್ ಸೋತು ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ್ದ ಟೀಂ ಇಂಡಿಯಾ ರಿಷಭ್ ಪಂತ್(146) ಹಾಗೂ ರವೀಂದ್ರ ಜಡೇಜಾ(104)ರನ್ಗಳ ನೆರವಿನಿಂದ ತನ್ನೆಲ್ಲ ವಿಕೆಟ್ ಕಳೆದುಕೊಂಡು 416ರನ್ಗಳಿಕೆ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಬೈರ್ ಸ್ಟೋ(106)ರನ್ಗಳ ನೆರವಿನಿಂದ 284ರನ್ಗಳಿಕೆ ಮಾಡಿತ್ತು. ಹೀಗಾಗಿ, ಟೀಂ ಇಂಡಿಯಾ 132ರನ್ಗಳ ಮುನ್ನಡೆ ಪಡೆದುಕೊಂಡಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಕಳಪೆ ಬ್ಯಾಟಿಂಗ್: ಇಂಗ್ಲೆಂಡ್ ಮಾರಕ ಬೌಲಿಂಗ್ ದಾಳಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಸಂಪೂರ್ಣವಾಗಿ ತತ್ತರಿಸಿದ ಭಾರತ ತಂಡ 10ವಿಕೆಟ್ ನಷ್ಟಕ್ಕೆ 245ರನ್ಗಳಿಕೆ ಮಾಡಿ, ಆಲೌಟ್ ಆಯಿತು. ತಂಡದ ಪರ ಪೂಜಾರಾ(66) ಹಾಗೂ ಪಂತ್(57)ರನ್ಗಳಿಕೆ ಮಾಡಿದರು.
ಇಂಗ್ಲೆಂಡ್ ತಂಡದ ಪರ ಎರಡನೇ ಇನ್ನಿಂಗ್ಸ್ನಲ್ಲಿ ಬೆನ್ ಸ್ಟೋಕ್ಸ್ 4 ವಿಕೆಟ್ ಪಡೆದುಕೊಂಡಿದ್ದು, ಬ್ರಾಡ್, ಪ್ಯಾಟ್ಸ್ ತಲಾ 2 ವಿಕೆಟ್ ಹಾಗೂ ಆ್ಯಂಡರ್ಸನ್ ಮತ್ತು ಲೆಂಚ್ 1 ವಿಕೆಟ್ ಕಬಳಿಸಿದ್ದಾರೆ.