ಕರ್ನಾಟಕ

karnataka

ದಿನೇಶ್ ಕಾರ್ತಿಕ್ - ದೀಪಿಕಾ ಪಳ್ಳಿಕಲ್​ ದಂಪತಿಗೆ ಅವಳಿ ಗಂಡು ಮಕ್ಕಳ ಜನನ

By

Published : Oct 28, 2021, 8:01 PM IST

ಟ್ವಿಟರ್​ನಲ್ಲಿ ಈ ಇಬ್ಬರು ಕ್ರೀಡಾ ದಂಪತಿಗಳು ತಮ್ಮ ಇಬ್ಬರು ಗಂಡು ಮಕ್ಕಳೊಂದಿಗಿನ ಫೋಟೋವನ್ನು ಶೇರ್​ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ.

Dinesh Karthik and Deepika Pallikal become parents to twin boys
ದಿನೇಶ್ ಕಾರ್ತಿಕ್ -ದೀಪಿಕಾ ಪಳ್ಳಿಕಲ್

ಚೆನ್ನೈ: ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ಪತ್ನಿ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಗುರುವಾರ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಟ್ವಿಟರ್​ನಲ್ಲಿ ಈ ಇಬ್ಬರು ಕ್ರೀಡಾ ದಂಪತಿಗಳು ತಮ್ಮ ಇಬ್ಬರು ಗಂಡು ಮಕ್ಕಳೊಂದಗಿನ ಫೋಟೋ ಶೇರ್​ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿಯನ್ನು ನೀಡಿದ್ದಾರೆ.

ದೀಪಿಕಾ ಪಳ್ಳಿಕಲ್ ಮತ್ತು ನಾನು ಇಬ್ಬರು ಸುಂದರ ಗಂಡುಮಕ್ಕಳನ್ನು ಪಡೆದುಕೊಂಡಿದ್ದೇವೆ ಎಂದು ಕಾರ್ತಿಕ್ ಮತ್ತು ದೀಪಿಕಾ ತಮ್ಮ ಅಧಿಕೃತ ಟ್ವಿಟರ್ ಖಾತೆಗಳಲ್ಲಿ ತಿಳಿಸಿದ್ದಾರೆ. ಅಲ್ಲದೇ ಆ ಮಕ್ಕಳಿಗೆ ಕಬೀರ್​ ಪಳ್ಳಿಕಲ್​ ಕಾರ್ತಿಕ್​ ಮತ್ತು ಜಿಯಾನ್ ಪಳ್ಳಿಕಲ್ ಕಾರ್ತಿಕ್ ಎಂದು ನಾಮಕರಣ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಆಗಸ್ಟ್​ 18 2015ರಲ್ಲಿ ದಿನೇಶ್ ಕಾರ್ತಿಕ್ ಮತ್ತು ದೀಪಿಕಾ ಪಳ್ಳಿಕಲ್​ ಇಬ್ಬರು ವಿವಾಹವಾಗಿದ್ದರು.

ಇದನ್ನು ಓದಿ:ಪಾಂಡ್ಯ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ: ಮುಂಬೈ ಲಿಸ್ಟ್​ನಲ್ಲಿದ್ದಾರೆ ಈ 3 ಆಟಗಾರು!

ABOUT THE AUTHOR

...view details