ನವದೆಹಲಿ: ಮಹೇಂದ್ರ ಸಿಂಗ್ ಧೋನಿ ವೈಟ್ ಬಾಲ್ ಕ್ರಿಕೆಟ್ನಲ್ಲಿ ಬೌಲರ್ಗಳ ನಾಯಕನಾಗಿದ್ದರು. ಹೀಗಾಗಿ ಟಿ-20 ಆವೃತ್ತಿಗೆ ಮೆಂಟರ್ ಆಗಿ ನೇಮಕವಾಗಿರುವುದು ಬೌಲರ್ ಜಸ್ಪ್ರೀತ್ ಬೂಮ್ರಾ ಸೇರಿ ಇತರರಿಗೂ ಸಹಾಯವಾಯಗಲಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಟಿ-20 ವಿಶ್ವಕಪ್ ತಂಡಕ್ಕೆ ಧೋನಿ ಮೆಂಟರ್ ಆಗಿ ನೇಮಕವಾಗಲು ಒಪ್ಪಿಕೊಂಡಿರುವುದಕ್ಕೆ ನನಗೆ ಸಂತಸವಾಗಿದೆ. ನನ್ನಂತೆ ಹಲವರು ಧೋನಿ ಮತ್ತೆ ಕ್ರಿಕೆಟ್ನ ಮುಖ್ಯವಾಹಿನಿಗೆ ಮರಳಬೇಕು ಎಂದು ಬಯಸುತ್ತಾರೆ. ಈ ನಡುವೆ ಮಾರ್ಗದರ್ಶಕರಾಗಿ ಆಯ್ಕೆಯಾಗಿರುವುದು ಉತ್ತಮ ಕೆಲಸ ಎಂದು ಸೆಹ್ವಾಗ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ನಾಯಕನಾಗಿ ಧೋನಿ ಬೌಲರ್ನ ಮೈಡ್ ಚೆನ್ನಾಗಿ ಅರಿತುಕೊಳ್ಳುತ್ತಿದ್ದರು. ಅದರಂತೆ ಫೀಲ್ಡಿಂಗ್ ನಿಲ್ಲಿಸುತ್ತಿದ್ದರು. ಇದು ಸಹ ವಿಶ್ವಕಪ್ ತಂಡಕ್ಕೆ ನೆರವಾಗಲಿದೆ. ಜೊತೆಗೆ ಎದುರಾಳಿ ಬ್ಯಾಟ್ಸ್ಮನ್ ಕುರಿತಂತೆಯೂ ಬೌಲರ್ಗಳಿಗೆ ಅವರು ಟಿಪ್ಸ್ ನೀಡುತ್ತಿದ್ದರು ಎಂದಿದ್ದಾರೆ.
ಇದಲ್ಲದೇ ಕೆಲ ಅಂತರ್ಮುಖಿ ಆಟಗಾರರಿಗೆ ಧೋನಿಗಿಂತಲೂ ಉತ್ತಮ ಮಾರ್ಗದರ್ಶಕ ಸಿಗಲು ಸಾಧ್ಯವಿಲ್ಲ. ಮೈದಾನದಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಲು ಪ್ರಯತ್ನಿಸುತ್ತಿರುವಾಗ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲು ಯಾರಾದರೂ ಬೇಕಾಗುತ್ತದೆ ಎಂದಿದ್ದಾರೆ.
ಯಾವುದೇ ಅಂತಾರಾಷ್ಟ್ರೀಯ ತಂಡದಲ್ಲಿ ಕೆಲ ನಾಚಿಕೆ ಸ್ವಭಾವದ ಆಟಗಾರರಿತ್ತಾರೆ, ಅವರು ಕ್ರಿಕೆಟ್ ಮೈದಾನಕ್ಕಿಳಿದಾಗ ಮಾತನಾಡಲು ಹಿಂಜರಿಯುತ್ತಾರೆ ಆದರೆ, ಎಂಎಸ್ ಜೊತೆ ಯಾವಾಗಲು ಮಾತನಾಡಬಹುದು. ಯುವ ಆಟಗಾರರಿಗೆ ಅವರು ಸೂಕ್ತ ಮಾರ್ಗದರ್ಶಕರಾಗುತ್ತಾರೆ ಎಂದಿದ್ದಾರೆ.