ಪುಣೆ:ಪಂಜಾಬ್ ಕಿಂಗ್ಸ್ ವಿರುದ್ಧ 199 ರನ್ಗಳ ಚೇಸಿಂಗ್ ಮಾಡುತ್ತಿರುವ ಮುಂಬೈ ಇಂಡಿಯನ್ಸ್ ಆರಂಭಿಕರಿಬ್ಬರನ್ನು ಬೇಗ ಕಳೆದುಕೊಂಡು ಮೊದಲ 10 ಓವರ್ಗಳಿಗೆ 100 ರನ್ಗಳ ಗಡಿ ದಾಟುವ ಮೂಲಕ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಪಂಜಾಬ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಪಂಜಾಬ್ ಕಿಂಗ್ಸ್ ಕೂಡ ಅದ್ದೂರಿ ಬ್ಯಾಟಿಂಗ್ ಪ್ರದರ್ಶನ ತೋರಿತು. ಆರಂಭಿಕರಾದ ಶಿಖರ್ ಧವನ್ 70, ಮಯಾಂಕ್ 52 ಮತ್ತು ಜಿತೇಶ್ ಶರ್ಮಾ 30 ರನ್ಗಳಿಸಿ ಮುಂಬೈಗೆ 199ರನ್ಗಳ ಗುರಿ ನೀಡಲು ನೆರವಾದರು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಪವರ್ ಪ್ಲೆ ಮುಗಿಯುವುದರೊಳಗೆ ನಾಯಕ ರೋಹಿತ್ ಶರ್ಮಾ(28) ಮತ್ತು ಇಶಾನ್ ಕಿಶನ್(3) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ 3ನೇ ವಿಕೆಟ್ ಒಂದಾದ 18 ವರ್ಷದ ಬ್ರೇವಿಸ್ ಮತ್ತು 19 ವರ್ಷದ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ 10 ಓವರ್ಗಳಲ್ಲಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಅದರಲ್ಲೂ ಡೆವಾಲ್ಡ್ ಬ್ರೇವಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ದಕ್ಷಿಣ ಆಫ್ರಿಕಾದ ಯುವ ದಾಂಡಿಗ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 49 ರನ್ಗಳಿಸಿ ಔಟಾದರು. ಔಟಾಗುವ ಮುನ್ನ ರಾಹುಲ್ ಚಾಹರ್ ಎಸೆದ 9ನೇ ಓವರ್ನಲ್ಲಿ ಸತತ 4 ಸಿಕ್ಸರ್ ಸಹಿತ 28 ರನ್ ಚಚ್ಚಿ ಬೇಬಿ ಎಬಿಡಿ ಎಂಬದನ್ನು ನಿರೂಪಿಸಿದರು. ಅಲ್ಲದೆ ತಿಲಕ್ ಜೊತೆ ಸೇರಿ 41 ಎಸೆತಗಳಲ್ಲಿ 84 ರನ್ ಸೂರೆಗೈದರು.
ಇದನ್ನೂ ಓದಿ:ನಿವೃತ್ತಿಯಾದ್ರೂ ಕುಗ್ಗದ ಧೋನಿ ಬ್ರ್ಯಾಂಡ್ ಮೌಲ್ಯ: ಜಾಹೀರಾತು ಒಪ್ಪಂದಗಳಿಂದ್ಲೇ ₹150 ಕೋಟಿ ಆದಾಯ!