ಕರ್ನಾಟಕ

karnataka

ETV Bharat / sports

VIDEO:​ ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್​ ಪದಾರ್ಪಣೆ.. ಕ್ಯಾಪ್​ ನೀಡಿದ ಸುನಿಲ್​ ಗವಾಸ್ಕರ್​ - Sunil Gavaskar

ನ್ಯೂಜಿಲ್ಯಾಂಡ್​​​ ವಿರುದ್ಧ ಆರಂಭಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

shreyas iyer
ಟೆಸ್ಟ್​ಗೆ ಶ್ರೇಯಸ್ ಅಯ್ಯರ್ ಪದಾರ್ಪಣೆ

By

Published : Nov 25, 2021, 10:18 AM IST

ಕಾನ್ಪುರ್​:A moment to cherish for@ShreyasIyer15... ನ್ಯೂಜಿಲ್ಯಾಂಡ್ ​ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಭಾರತ ತಂಡದ 11ರ ಬಳಗದಲ್ಲಿ ಸ್ಥಾನ ಪಡೆದಿರುವ ಮಧ್ಯಮ ಕ್ರಮಾಂಕದ ಬ್ಯಾಟರ್​ ಶ್ರೇಯಸ್​ ಅಯ್ಯರ್​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಟಾಸ್​​ ಗೆದ್ದ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್​ ಆಯ್ದುಕೊಂಡಿದ್ದಾರೆ. ಶ್ರೇಯಸ್​ ಪದಾರ್ಪಣೆ ಬಗ್ಗೆ ನಿನ್ನೆಯೇ ಮಾಧ್ಯಮಗೋಷ್ಠಿಯಲ್ಲಿ ರಹಾನೆ ತಿಳಿಸಿದ್ದರು. ಭಾರತೀಯ ಕ್ರಿಕೆಟ್​ನ ದಂತಕತೆ ಸುನಿಲ್​ ಗವಾಸ್ಕರ್​ ಅವರು ಶ್ರೇಯಸ್​ಗೆ ಟೆಸ್ಟ್​ ಕ್ಯಾಪ್​ ನೀಡಿ ಶುಭ ಕೋರಿದರು. ಈ ವೇಳೆ, ತಂಡದ ಇತರ ಆಟಗಾರರು ಅಯ್ಯರ್​ಗೆ ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಟೆಸ್ಟ್​ ಕ್ಯಾಪ್​ಗೆ ಮುತ್ತಿಕ್ಕುವ ಮೂಲಕ ಅದನ್ನು ಶ್ರೇಯಸ್​ ಮುಡಿಗೇರಿಸಿಕೊಂಡರು.

ಈಗಾಗಲೇ ಮುಂಬೈ ಬ್ಯಾಟರ್​ ಶ್ರೇಯಸ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ​ 81.54ರ ಸ್ಟ್ರೈಕ್ ರೇಟ್​​ನಲ್ಲಿ 52.18ರ ಸರಾಸರಿಯೊಂದಿಗೆ 4,592 ರನ್ ಗಳಿಸಿದ್ದಾರೆ. 2017ರ ಡಿ. 10ರಂದು ಶ್ರೀಲಂಕಾ ವಿರುದ್ಧ ಅವರು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಅವರು ದೀರ್ಘ ಮಾದರಿಯ ಕ್ರಿಕೆಟ್​ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ:IND vs NZ: ಕಿವೀಸ್​ ವಿರುದ್ಧ ಟಾಸ್​ ಗೆದ್ದ ಭಾರತ ಬ್ಯಾಟಿಂಗ್​ ಆಯ್ಕೆ

ABOUT THE AUTHOR

...view details