ಕರ್ನಾಟಕ

karnataka

ETV Bharat / sports

ಕೊಟ್ಟ ಮಾತು ಉಳಿಸಿಕೊಂಡ ಧೋನಿ: ದಾಖಲೆಯ 11ನೇ ಸಲ ಪ್ಲೇ-ಆಫ್​ ಪ್ರವೇಶಿಸಿದ ಸಿಎಸ್​ಕೆ

ಕಳೆದ ವರ್ಷದ ಐಪಿಎಲ್​ನಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಸೆಗೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಈ ಸಲ ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡಿದ್ದು ಅಧಿಕೃತವಾಗಿ ಪ್ಲೇ-ಆಫ್​ಗೆ ಪ್ರವೇಶ ಪಡೆಯಿತು.

CSK
CSK

By

Published : Oct 1, 2021, 3:04 PM IST

ಹೈದರಾಬಾದ್​:14ನೇ ಆವೃತ್ತಿಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಪ್ಲೇ-ಆಫ್​ಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಮೊದಲ ತಂಡವಾಗಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿ ಹೊಸ ದಾಖಲೆ ಬರೆಯಿತು.

ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ನಡೆದ ಪಂದ್ಯದಲ್ಲಿ 6 ವಿಕೆಟ್​ಗಳ ಜಯ ಸಾಧಿಸಿರುವ ಸಿಎಸ್​ಕೆ 18 ಪಾಯಿಂಟ್​​ ಪಡೆದುಕೊಂಡಿದೆ.

ಸುರೇಶ್ ರೈನಾ, ಡ್ವೇನ್ ಬ್ರಾವೋ

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಸಿಎಸ್​ಕೆ 2020ರ ಐಪಿಎಲ್​ನಲ್ಲಿ ಅತಿ ಕಳಪೆ ಪ್ರದರ್ಶನ ನೀಡಿ ಪ್ರಥಮ ತಂಡವಾಗಿ ಪ್ಲೇ-ಆಫ್​​​ ರೇಸ್​​ನಿಂದ ಹೊರಬಿದ್ದಿತ್ತು. ಈ ಸಲ ಅದ್ಭುತವಾಗಿ ಕಮ್​ಬ್ಯಾಕ್​ ಮಾಡಿದ್ದು, ಎಲ್ಲ ತಂಡಗಳಿಗಿಂತಲೂ ಮೊದಲೇ ಪ್ಲೇ-ಆಫ್​​ಗೆ ಪ್ರವೇಶ ಪಡೆದಿದೆ. ಜೊತೆಗೆ, ಮಹೇಂದ್ರ ಸಿಂಗ್​ ಧೋನಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಭುವಿ ಜೊತೆ ಧೋನಿ ಮಾತುಕತೆ

ಕಳೆದ ವರ್ಷ ಧೋನಿ ಹೇಳಿದ್ದೇನು?

ಕಳೆದ ವರ್ಷದ ಐಪಿಎಲ್​​ನಲ್ಲಿ ಪ್ಲೇ-ಆಫ್​ ಪ್ರವೇಶ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದ ವೇಳೆ ಧೋನಿ, ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದರು. ಇದೇ ಸಂದರ್ಭದಲ್ಲಿ ಮುಂದಿನ ವರ್ಷ ನಾವು ಮತ್ತಷ್ಟು ಬಲಿಷ್ಠವಾಗಿ ಕಮ್​ಬ್ಯಾಕ್​ ಮಾಡಲಿದ್ದೇವೆ (We will come back stronger) ಎಂದು ಭರವಸೆ ಕೊಟ್ಟಿದ್ದರು. ಅದೇ ರೀತಿ ಈ ಸಲದ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳ ಪೈಕಿ 9ರಲ್ಲಿ ಗೆದ್ದಿದೆ. ಬ್ಯಾಟ್ಸ್​ಮನ್​​ ಆಗಿ ರನ್​ಗಳಿಕೆ ಮಾಡುವಲ್ಲಿ ಧೋನಿ ವಿಫಲಗೊಂಡಿದ್ದರೂ, ಓರ್ವ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಎಂಎಸ್​ ಸಫಲರಾಗಿದ್ದಾರೆ.

ಸಿಕ್ಸರ್​ ಸಿಡಿಸಿ ಪಂದ್ಯ ಗೆಲ್ಲಿಸಿದ ಧೋನಿ

ಹೈದರಾಬಾದ್​ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಧೋನಿ, ಕಳೆದ ವರ್ಷವೇ ನಾನು ಈ ಮಾತು ಹೇಳಿದ್ದೆ. ಅದರಂತೆ ಇದೀಗ ಮತ್ತಷ್ಟು ಬಲಿಷ್ಠರಾಗಿ ಕಮ್​ಬ್ಯಾಕ್​ ಮಾಡಿದ್ದೇವೆ ಎಂದರು.

ಐಪಿಎಲ್​ನಲ್ಲಿ ಪ್ಲೇ-ಆಫ್​ ಪ್ರವೇಶಿಸಿದ ಸಿಎಸ್​ಕೆ

ಇದನ್ನೂ ಓದಿ:‘‘ಧೋನಿ ಮೆಂಟರ್ ಆಗಿ ​ಹಾಗೂ ರಾಹುಲ್ ಕೋಚ್ ಸ್ಥಾನದಲ್ಲಿ ನೋಡಲು ಬಯಸುತ್ತೇನೆ‘‘: ಹೀಗೆ ಹೇಳಿದ್ಯಾರು?

ದಾಖಲೆಯ 11ನೇ ಸಲ ಪ್ಲೇ-ಆಫ್​ಗೆ ಲಗ್ಗೆ:

ಇಂಡಿಯನ್​ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಸಿಎಸ್​ಕೆ ಹೊಸ ದಾಖಲೆ ಬರೆದಿದ್ದು, 12 ಆವೃತ್ತಿಗಳ ಪೈಕಿ ದಾಖಲೆಯ 11ನೇ ಸಲ ಪ್ಲೇ-ಆಫ್​ಗೆ ಪ್ರವೇಶ ಪಡೆದಿದೆ. ಕಳೆದ ವರ್ಷ ಮಾತ್ರ ತಂಡ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಇದರ ಜೊತೆಗೆ 2016 ಹಾಗೂ 2017ರಲ್ಲಿ ಚೆನ್ನೈ ನಿಷೇಧಕ್ಕೊಳಗಾಗಿತ್ತು. ಐಪಿಎಲ್​ನಲ್ಲಿ ಧೋನಿ ನೇತೃತ್ವದ ಸಿಎಸ್​ಕೆ ಮೂರು ಸಲ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ABOUT THE AUTHOR

...view details