ಕರ್ನಾಟಕ

karnataka

ETV Bharat / sports

Cricket World Cup 2023: ಏಕದಿನ ವಿಶ್ವಕಪ್ ಕ್ರಿಕೆಟ್‌​ನಲ್ಲಿ ಭಾರಿ ಕುತೂಹಲದ ಪಂದ್ಯಗಳು ಯಾವುವು ಗೊತ್ತೇ? ನೋಡಲು ಮಿಸ್​ ಮಾಡದಿರಿ!

2023ರ ಏಕದಿನ ಕ್ರಿಕೆಟ್ ವಿಶ್ವಕಪ್ ಮುಂಬರುವ ಅಕ್ಟೋಬರ್ 5ರಿಂದ ಭಾರತದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿಗದಿಯಾಗಿದೆ.

Cricket World Cup 2023: Five key matches to look out for
ವಿಶ್ವಕಪ್​ನಲ್ಲಿ ಅತಿ ಹೆಚ್ಚು ಕುತೂಹಲಕಾರಿ ಪಂದ್ಯಗಳಿವು

By

Published : Jun 27, 2023, 4:20 PM IST

ಭಾರತ ಆತಿಥ್ಯ ವಹಿಸಲಿರುವ ಬಹುನಿರೀಕ್ಷಿತ 2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಂಗಳವಾರ ಪ್ರಕಟಿಸಿದೆ. ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್​ ನಡುವಿನ ಮುಖಾಮುಖಿಯೊಂದಿಗೆ ವಿಶ್ವಕಪ್ ಆರಂಭವಾಗಲಿದೆ. ನವೆಂಬರ್ 19ರಂದು ನರೇಂದ್ರ ಮೋದಿ ಕ್ರೀಡಾಂಗಣವು ಫೈನಲ್‌ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಪ್ರತಿಷ್ಠಿತ ಟೂರ್ನಿಯ ಕೊನೆಯ ನಾಲ್ಕು ಪಂದ್ಯಗಳು ನಡೆಯಲಿವೆ. ಐದು ಗಮನಾರ್ಹ ಮುಖಾಮುಖಿಗಳನ್ನು ಹೇಳುವುದಾದರೆ,

ಭಾರತ vs ಪಾಕಿಸ್ತಾನ - ಅಹಮದಾಬಾದ್ - ಅಕ್ಟೋಬರ್ 15: ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹಣಾಹಣಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕ್ರೀಡಾಂಗಣವು 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿದೆ ಮತ್ತು ಅಕ್ಟೋಬರ್ 15ರಂದು 'ಮೆನ್ ಇನ್ ಬ್ಲೂ' ತಂಡ ಬಾಬರ್ ಅಜಮ್ ನೇತೃತ್ವದ ತಂಡವನ್ನು ಎದುರಿಸಲಿದೆ. ಭಾರತ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಎಂದಿಗೂ ಸೋತಿಲ್ಲ. ಹಿಂದಿನ ಎಲ್ಲ ಏಕದಿನ ವಿಶ್ವಕಪ್​ನ ಏಳು ಮುಖಾಮುಖಿಯನ್ನೂ ಜಯಿಸಿದೆ. ಏಕದಿನ ಕ್ರಿಕೆಟ್ ವಿಶ್ವಕಪ್‌ನ ಕೊನೆಯ ಆವೃತ್ತಿಯಲ್ಲಿ, ಪ್ರಸ್ತುತ ನಾಯಕ ರೋಹಿತ್ ಶರ್ಮಾ ಅವರ 140 ರನ್‌ಗಳ ಸಹಾಯದಿಂದ ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತವು 89 ರನ್‌ಗಳಿಂದ (DLS ವಿಧಾನದಲ್ಲಿ) ಪಾಕಿಸ್ತಾನವನ್ನು ಮಣಿಸಿತ್ತು. ಪಾಕಿಸ್ತಾನ ನಾಯಕ ಹಾಗು ಪ್ರಸ್ತುತ ವಿಶ್ವದ ನಂಬರ್ ಒನ್ ಏಕದಿನ ಬ್ಯಾಟರ್ ಬಾಬರ್ ಅಜಮ್ ಮುಂದಾಳತ್ವದಲ್ಲಿ ಪಾಕ್ ಈ ಬಾರಿ ಸೇಡಿಗೆ ಸಜ್ಜಾಗಿದೆ.

ಇಂಗ್ಲೆಂಡ್ vs ನ್ಯೂಜಿಲೆಂಡ್ - ಅಹಮದಾಬಾದ್ - ಅಕ್ಟೋಬರ್ 5: ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ 2019ರ ಕ್ರಿಕೆಟ್ ವಿಶ್ವಕಪ್ ಫೈನಲ್- 2023ರ ಉದ್ಘಾಟನಾ ಪಂದ್ಯ ಅತ್ಯಂತ ಮಹತ್ವ ಪಡೆದಿದೆ. ಇದಕ್ಕೆ ಕಾರಣ 2019ರ ವಿಶ್ವಕಪ್​ನ ಫೈನಲ್​ನಲ್ಲಿ ಎದುರಾಳಿಗಳಾದ ​ಇಂಗ್ಲೆಂಡ್ - ನ್ಯೂಜಿಲೆಂಡ್​​ ಮುಖಾಮುಖಿ. ತವರಿನ ಮೈದಾನದಲ್ಲಿ ನ್ಯೂಜಿಲೆಂಡ್​ ಮಣಿಸಿದ ಇಂಗ್ಲೆಂಡ್​ ವಿಶ್ವಕಪ್​ ಮುಡಿಗೇರಿಸಿಕೊಂಡಿತ್ತು. ಹೀಗಾಗಿ ಕಿವೀಸ್​ ಪಡೆ ಚಾಂಪಿಯನ್​ ತಂಡವನ್ನು ಮೊದಲ ಪಂದ್ಯದಲ್ಲೇ ಮಣಿಸಲು ಸಜ್ಜಾಗುತ್ತಿದೆ. ಐಪಿಎಲ್​ ವೇಳೆ ಗಾಯಗೊಂಡಿದ್ದ ಕೇನ್ ವಿಲಿಯಮ್ಸನ್ ವಿಶ್ವಕಪ್‌ಗೆ ಫಿಟ್ ಆಗುತ್ತಾರೆ ಎಂದು ಬ್ಲ್ಯಾಕ್ ಕ್ಯಾಪ್ಸ್ ಆಶಿಸುತ್ತಿದ್ದಾರೆ. 2019ರ ವಿಶ್ವಕಪ್​, 2022ರ ಟಿ20 ವಿಶ್ವಕಪ್​ ಗೆದ್ದು ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಪಾರಮ್ಯ ಮೆರೆಯುತ್ತಿರುವ ಬಲಿಷ್ಠ ಇಂಗ್ಲೆಂಡ್​ ತಂಡವನ್ನು ಸೋಲಿಸುವುದು ಕಿವೀಸ್​ಗೆ ಸುಲಭದ ಹಾದಿಯಲ್ಲ.

ಭಾರತ vs ಆಸ್ಟ್ರೇಲಿಯಾ - ಚೆನ್ನೈ - ಅಕ್ಟೋಬರ್ 8: ಆತಿಥೇಯ ಭಾರತವು ಅಕ್ಟೋಬರ್ 8ರಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದೆ. ಇದು 2023ರ ಕ್ರಿಕೆಟ್ ವಿಶ್ವಕಪ್ ಭಾರತದ ಮೊದಲ ಪಂದ್ಯವಾಗಿದ್ದು, ಇದನ್ನು ಗೆಲ್ಲುವ ಮೂಲಕ ಶುಭಾರಂಭ ಮಾಡುವ ಗುರಿ ಹೊಂದಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸುವುದು ಸುಲಭದ ಮಾತಲ್ಲ. ಉಭಯ ತಂಡಗಳು ಪರಸ್ಪರ ಬಲಾಬಲ ಮತ್ತು ನ್ಯೂನತೆಗಳನ್ನು ಅರಿತಿದ್ದು, ಈ ಪಂದ್ಯ ಇನ್ನಷ್ಟು ಕುತೂಹಲ ಮೂಡಿಸಲಿದೆ. ಭಾರತವು ಇತ್ತೀಚೆಗೆ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಆದ್ದರಿಂದ 'ಮೆನ್ ಇನ್ ಬ್ಲೂ' ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ಹೆಚ್ಚು ಉತ್ಸುಕರಾಗಿದ್ದರು. ಕುತೂಹಲಕಾರಿ ಅಂಶವೆಂದರೆ, ಆಸ್ಟ್ರೇಲಿಯಾ ತನ್ನ ಮೊದಲ ವಿಶ್ವಕಪ್ ಅನ್ನು 1987ರಲ್ಲಿ ಗೆದ್ದುಕೊಂಡಿತ್ತು. ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲಾಗಿತ್ತು. ಈ ವರ್ಷ ಮತ್ತೆ ಇತಿಹಾಸ ಮರುಕಳಿಸುವಂತೆ ಮಾಡಲು ಕಾಂಗರೂ ಪಡೆ ಉತ್ಸುಕವಾಗಿದೆ.

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ - ಲಕ್ನೋ - ಅಕ್ಟೋಬರ್ 13: ಏಕದಿನ ಕ್ರಿಕೆಟ್ ವಿಶ್ವಕಪ್ 2019 ರಲ್ಲಿ ದಕ್ಷಿಣ ಆಫ್ರಿಕಾ ಕೇವಲ ಮೂರು ಪಂದ್ಯಗಳನ್ನು ಗೆದ್ದಿತ್ತು. ಆ ವಿಜಯಗಳಲ್ಲಿ ಒಂದು ಪಂದ್ಯದ ಅಂತಿಮ ಗುಂಪಿನ ಪಂದ್ಯದಲ್ಲಿ ಅವರು ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಅವರ ಅಮೋಘ ಶತಕದ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರು. ದಕ್ಷಿಣ ಆಫ್ರಿಕಾ ತನ್ನ ಮೊದಲ ಮುಖಾಮುಖಿಯಲ್ಲಿ ಅರ್ಹತಾ ಸುತ್ತಿನಲ್ಲಿ ಜಯಿಸಿ ಶ್ರೀಲಂಕಾ ಎದುರಾಗುವ ನಿರೀಕ್ಷೆ ಇದೆ. ಇದಾದ ನಂತರ ಆಸ್ಟೇಲಿಯಾದ ಎದುರು ದಕ್ಷಿಣ ಆಫ್ರಿಕಾ ಆಡಲಿದೆ. ದಕ್ಷಿಣ ಆಫ್ರಿಕಾದ ವೇಗಿಗಳಾದ ಕಗಿಸೊ ರಬಾಡ, ಅನ್ರಿಚ್ ನೋರ್ಟ್ಜೆ ಮತ್ತು ಲುಂಗಿ ಎನ್‌ಗಿಡಿ ಅವರನ್ನು ಎದುರಿಸುವುದು ಆಸ್ಟ್ರೇಲಿಯಾಕ್ಕೆ ಸುಲಭದ ಕೆಲಸವಲ್ಲ.

ಬಾಂಗ್ಲಾದೇಶ vs ಅಫ್ಘಾನಿಸ್ತಾನ - ಧರ್ಮಶಾಲಾ - ಅಕ್ಟೋಬರ್ 7: ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನದ ವಿರುದ್ಧ 2023ರ ಏಕದಿನ ಕ್ರಿಕೆಟ್ ವಿಶ್ವಕಪ್​ನ ಮೊದಲ ಪಂದ್ಯವನ್ನು ಬಾಂಗ್ಲಾದೇಶ ಆಡಲಿದೆ. ಅಫ್ಘಾನಿಸ್ತಾನದ ಶಕ್ತಿ ಬೌಲಿಂಗ್. ಇದು ಬಾಂಗ್ಲಾದೇಶಕ್ಕೆ ಸವಾಲಾಗುತ್ತದೆ. ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ನೇತೃತ್ವದಲ್ಲಿ ಮುಜೀಬ್ ಉರ್ ರೆಹಮಾನ್ ಮತ್ತು ಇನ್-ಫಾರ್ಮ್ ಸೀಮರ್ ಫಜಲ್ಹಕ್ ಫಾರೂಕಿ ಒಳಗೊಂಡ ಅಫ್ಘಾನಿಸ್ತಾನ ಬೌಲಿಂಗ್ ದಾಳಿಯು ಬಾಂಗ್ಲಾದೇಶ ಬ್ಯಾಟರ್‌ಗಳಿಗೆ ಸವಾಲಾಗಬಹುದು. ಬಾಂಗ್ಲಾದೇಶಕ್ಕೆ ಏಕದಿನ ಪಂದ್ಯಗಳನ್ನು ಆಡಿರುವ ಅನುಭವ ಇದೆ. ಅಗ್ರ ಕ್ರಮಾಂಕದ ಬ್ಯಾಟರ್ ಲಿಟ್ಟನ್ ದಾಸ್ ಮತ್ತು ಆಲ್ ರೌಂಡರ್ ಶಕೀಬ್ ಅಲ್ ಹಸನ್ ಎದುರಾಳಿಗಳಿಗೆ ಕಾಡುವ ಆಟಗಾರರಾಗಿದ್ದಾರೆ.

ಇದನ್ನೂ ಓದಿ:World Cup 2023: ಮೋದಿ ಸ್ಟೇಡಿಯಂನಲ್ಲಿ ಸಾಂಪ್ರಾಯಿಕ ಎದುರಾಳಿಗಳ ಕದನ.. ಈ ಹಿಂದಿನ ಮುಖಾಮುಖಿ ಹೀಗಿದೆ..

ABOUT THE AUTHOR

...view details