ಇಸ್ಲಾಮಾಬಾದ್: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಗಾಗಿ ಈಗಾಗಲೇ ಘೋಷಣೆಯಾಗಿರುವ ಪಾಕಿಸ್ತಾನದ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ನಿನ್ನೆಯಷ್ಟೇ ಮಾಜಿ ನಾಯಕ ಸರ್ಫರಾಜ್ ಸೇರಿದಂತೆ ಮೂವರು ಆಟಗಾರರಿಗೆ ಮಣೆ ಹಾಕಿದ್ದ ಪಾಕ್, ಇಂದು ಮತ್ತೊಂದು ಮಹತ್ವದ ಬದಲಾವಣೆ ಮಾಡಿಕೊಂಡಿದೆ.
ಗಾಯಗೊಂಡಿರುವ ಶೋಹಿಬ್ ಮಸೂದ್ ಸ್ಥಾನಕ್ಕೆ ಇದೀಗ ಆಲ್ರೌಂಡರ್ ಶೋಯೆಬ್ ಮಲಿಕ್ಗೆ ಬುಲಾವ್ ನೋಡಿದೆ. 39 ವರ್ಷದ ಮಲಿಕ್, 2009ರಲ್ಲಿ ಪಾಕ್ ಟಿ-20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಇಲ್ಲಿಯವರೆಗೆ 116 ಪಂದ್ಯಗಳನ್ನಾಡಿರುವ ಈ ಪ್ಲೇಯರ್ 2335 ರನ್ಗಳಿಕೆ ಮಾಡಿದ್ದು, 28 ವಿಕೆಟ್ ಪಡೆದುಕೊಂಡಿದ್ದಾರೆ. ಈ ಸಲದ ವಿಶ್ವಕಪ್ ದುಬೈನಲ್ಲಿ ಆಯೋಜನೆಗೊಂಡಿದ್ದು, ಪಾಕ್-ಭಾರತ ಅಕ್ಟೋಬರ್ 24ರಂದು ಮುಖಾಮುಖಿಯಾಗುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ.