ಕರ್ನಾಟಕ

karnataka

ETV Bharat / sports

ಲಾರ್ಡ್​​ ಶಾರ್ದೂಲ್​ ಠಾಕೂರ್​ಗೆ ಜಾಕ್​ಪಾಟ್​.. T20 ವಿಶ್ವಕಪ್​ನಲ್ಲಿ ಈ ಪ್ಲೇಯರ್​​ ಸ್ಥಾನಕ್ಕೆ ಆಲ್​ರೌಂಡರ್​ಗೆ ಮಣೆ

ಬಹುನಿರೀಕ್ಷಿತ ವಿಶ್ವಕಪ್​ ಟೂರ್ನಿಗಾಗಿ ಆಯ್ಕೆಯಾಗಿದ್ದ ಟೀಂ ಇಂಡಿಯಾದಲ್ಲಿ ಇದೀಗ ಹೊಸದೊಂದು ಬದಲಾವಣೆ ಮಾಡಲಾಗಿದ್ದು, ಆಲ್​ರೌಂಡರ್​ ಸ್ಥಾನಕ್ಕೆ ಶಾರ್ದೂಲ್ ಠಾಕೂರ್​ ಅವಕಾಶ ಪಡೆದುಕೊಂಡಿದ್ದಾರೆ.

Shardul Thakur
Shardul Thakur

By

Published : Oct 13, 2021, 5:58 PM IST

Updated : Oct 14, 2021, 7:23 AM IST

ಮುಂಬೈ:ಐಸಿಸಿ ಟಿ-20 ವಿಶ್ವಕಪ್​ಗಾಗಿ ಘೋಷಣೆಯಾಗಿರುವ ಟೀಂ ಇಂಡಿಯಾದಲ್ಲಿ ಇದೀಗ ಮಹತ್ವದ ಬದಲಾವಣೆಯಾಗಿದ್ದು, ಆಲ್​ರೌಂಡರ್​ ಅಕ್ಷರ್​ ಪಟೇಲ್​​ ಬದಲಿಗೆ ವೇಗಿ​ ಶಾರ್ದೂಲ್ ಠಾಕೂರ್​ಗೆ ಅವಕಾಶ ನೀಡಲಾಗಿದೆ. ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವುದು ಇನ್ನೂ ಖಾತ್ರಿಯಾಗಿಲ್ಲವಾದ್ದರಿಂದ ಆಯ್ಕೆ ಸಮಿತಿ ಈ ನಿರ್ಧಾರ ತೆಗೆದುಕೊಂಡಿದೆ.

ಟೀಂ ಇಂಡಿಯಾ ಟೆಸ್ಟ್​ ಹಾಗೂ ಏಕದಿನದಲ್ಲೂ ಮಿಂಚು ಹರಿಸಿರುವ ಈ ಪ್ಲೇಯರ್​ ಸದ್ಯ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿಂದೆ ವಿಶ್ವಕಪ್​ಗಾಗಿ ಘೋಷಣೆಯಾಗಿದ್ದ ತಂಡದಲ್ಲಿ ಅವರು ಮೀಸಲು ಆಟಗಾರರಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಅವರು, ಹೌದು, ನನಗೆ ನಿರಾಸೆಯಾಗಿದ್ದು ನಿಜ ಎಂದು ಹೇಳಿಕೊಂಡಿದ್ದರು. ದುಬೈನಲ್ಲಿ ನಡೆಯುತ್ತಿರುವ ಐಪಿಎಲ್​​ನಲ್ಲಿ ಸಿಎಸ್​ಕೆ ಪರ ಕಣಕ್ಕಿಳಿಯುತ್ತಿರುವ ಶಾರ್ದೂಲ್​ ಆಡಿರುವ 15 ಪಂದ್ಯಗಳಿಂದ 18 ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದು, ಪ್ರಮುಖ ಬ್ಯಾಟರ್​ಗಳ ವಿಕೆಟ್​ ಕಿತ್ತು ಮಿಂಚಿದ್ದಾರೆ.

ಇದನ್ನೂ ಓದಿರಿ:T20 World cup : ವಿಶ್ವಕಪ್​ಗಾಗಿ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ

ಟೀಂ ಇಂಡಿಯಾ ತಂಡ: ವಿರಾಟ್​ ಕೊಹ್ಲಿ(ಕ್ಯಾಪ್ಟನ್​​) ,ರೋಹಿತ್ ಶರ್ಮಾ(ಉಪನಾಯಕ), ಕೆ.ಎಲ್ ರಾಹುಲ್​, ಸೂರ್ಯಕುಮಾರ್ ಯಾದವ್​, ರಿಷಭ್ ಪಂತ್​(ವಿ.ಕೀ), ಇಶಾನ್ ಕಿಶನ್​, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ರಾಹುಲ್​ ಚಹರ್​, ಆರ್​.ಅಶ್ವಿನ್​, ಶಾರ್ದೂಲ್ ಠಾಕೂರ್​, ವರುಣ್​​ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

ಟೀಂ ಇಂಡಿಯಾ ಮೀಸಲು ಆಟಗಾರನಾದ ಅಕ್ಸರ್ ಪಟೇಲ್​​

ಮೀಸಲು ಆಟಗಾರರು:ಶ್ರೇಯಸ್ ಅಯ್ಯರ್​, ದೀಪಕ್​ ಚಹರ್​, ಅಕ್ಷರ್ ಪಟೇಲ್​

ಇದರ ಜೊತೆಗೆ ವೇಗದ ಬೌಲರ್​ಗಳಾದ ಆವೇಶ್ ಖಾನ್​, ಉಮ್ರಾನ್ ಮಲಿಕ್​, ಹರ್ಷಲ್ ಪಟೇಲ್​, ವೆಂಕಟೇಶ್​ ಅಯ್ಯರ್​, ಕರಣ್ ಶರ್ಮಾ, ಶಹ್ಬಾದ್​ ಅಹ್ಮದ್ ಹಾಗೂ ಕೆ. ಗೌತಮ್​​ ನೆಟ್​​ ಪ್ಲೇಯರ್​ಗಳಾಗಿ ಆಯ್ಕೆಯಾಗಿದ್ದಾರೆ.

ಟೀಂ ಇಂಡಿಯಾ ಅಕ್ಟೋಬರ್​ 24ರಂದು ಪಾಕ್​ ವಿರುದ್ಧ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದ್ದು, ಅದಕ್ಕೂ ಮುಂಚಿತವಾಗಿ ಎರಡು ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಲಿದ್ದಾರೆ.

Last Updated : Oct 14, 2021, 7:23 AM IST

ABOUT THE AUTHOR

...view details