ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಹೊಸ ಪ್ರತಿಭೆ ಉಮ್ರಾನ್ ಮಲಿಕ್ ಇದೀಗ ಭಾರೀ ಸದ್ದು ಮಾಡ್ತಿದ್ದು, ದಾಖಲೆಯ 153 ಕಿ.ಮೀ ವೇಗದಲ್ಲಿ ಬೌಲ್ ಮಾಡಿ ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಪ್ರತಿಭೆಗೆ ಇದೀಗ ಟೀಂ ಇಂಡಿಯಾ ಮಣೆ ಹಾಕಿದೆ.
ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ. ನಟರಾಜನ್ ಕೊರೊನಾ ಸೋಂಕಿಗೊಳಗಾಗುತ್ತಿದ್ದಂತೆ ಬದಲಿ ಆಟಗಾರನಿಗೆ ಮಣೆ ಹಾಕಿದ್ದ SRH ಅನ್ಕ್ಯಾಪ್ಡ್, ಮಧ್ಯಮ ವೇಗಿ ಉಮ್ರಾನ್ ಮಲಿಕ್ಗೆ ಮಣೆ ಹಾಕಿತ್ತು. 21 ವರ್ಷದ ಮಲಿಕ್ ಈಗಾಗಲೇ ಲಿಸ್ಟ್ A ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಪರ ಏಕೈಕ ಟಿ - 20 ಪಂದ್ಯವನ್ನಾಡಿ 4 ವಿಕೆಟ್ ಪಡೆದಿದ್ದಾರೆ. ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ನೆಟ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ಇವರು, ಆಡಿರುವ 3 ಪಂದ್ಯಗಳಿಂದ 2 ವಿಕೆಟ್ ಪಡೆದುಕೊಂಡಿದ್ದಾರೆ.