ಸೌತಾಂಪ್ಟನ್: ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಹರಿಣಗಳ ವಿರುದ್ಧ 6 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ 2019ರ ವರ್ಲ್ಡ್ಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ದಕ್ಷಿಣ ಆಫ್ರಿಕಾ ನೀಡಿದ್ದ 228 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಶಾಕ್ ನೀಡಿದ ಕಗಿಸೋ ರಬಾಡಾ 5.1 ನೇ ಓವರ್ನಲ್ಲಿ ಶಿಖರ್ ಧವನ್ ವಿಕೆಟ್ ಕಬಳಿಸಿದ್ರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ ಕೂಡ ಬಹಳ ಹೊತ್ತು ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಕೇವಲ 18 ರನ್ ಗಳಿಸಿರುವಾಗ ಆಂಡೈಲ್ ಫೆಹ್ಲುಕ್ವಾಯೋ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದ್ರು.
ನಾಯಕ ಕೊಹ್ಲಿ ಔಟ್ ಆದ ನಂತರ ಕ್ರೀಸ್ಗಿಳಿದ ಕನ್ನಡಿಗ ರಾಹುಲ್ ಕೆಲ ಹೊತ್ತು ಉತ್ತಮವಾಗಿ ಬ್ಯಾಟ್ ಬೀಸಿ ತಂಡಕ್ಕೆ ಆಸೆರೆಯಾದ್ರು. ಆದರೆ, 26 ರನ್ಗಳಿಸಿರುವಾಗ ರಬಾಡಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ರು.
ಒಂದುಕಡೆ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯಿಂದ ಬ್ಯಾಟ್ ಬೀಸಿದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 23 ನೇ ಶತಕ ಸಿಡಿಸಿದ್ರು. ನಾಲ್ಕನೇ ವಿಕೆಟ್ಗೆ ಜೊತೆಯಾದ ಮಹೇಂದ್ರಸಿಂಗ್ ಧೋನಿ ಮತ್ತು ರೋಹಿತ್ ತಂಡವನ್ನ ಗೆಲುವಿನ ಹತ್ತಿರಕ್ಕೆ ತಂದು ನಿಲ್ಲಿಸಿದ್ರು. ಅಂತಿಮವಾಗಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ತಂಡವನ್ನ ಗೆಲುವಿನ ದಡ ಮುಟ್ಟಿಸಿದ್ರು.
ಭಾರತ ತಂಡ ಪರ ರೋಹಿತ್ ಶರ್ಮಾ 13 ಬೌಂಡರಿ 2 ಸಿಕ್ಸರ್ಗಳ ನೆರವಿನಿಂದ 122 ರನ್, ಮಹೇಂದ್ರ ಸಿಂಗ್ ಧೋನಿ 34, ಕೆ ಎಲ್ ರಾಹುಲ್ 26 ರನ್ಗಳಿಸಿದ್ರು. ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 2 ವಿಕೆಟ್, ಫೆಹ್ಲುಕ್ವಾಯೋ 1, ಕ್ರಿಸ್ ಮೋರಿಸ್ 1 ವಿಕೆಟ್ ಪಡೆದ್ರು.
ಇದಕ್ಕೂ ಮೊದಲು ಟಾಸ್ಗೆದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತೀಯ ಬೌಲರ್ಗಳು ಶಾಕ್ ಮೇಲೆ ಶಾಕ್ ನೀಡಿದ್ರು. ಲೆಗ್ ಸ್ಪಿನ್ನರ್ ಚಹಾಲ್ ಮತ್ತು ಬುಮ್ರಾ ದಾಳಿಗೆ ಹರಿಣ ಪಡೆ ಪೆವಿಲಿಯನ್ ಪರೇಡ್ ನಡೆಸಿದ್ರು. 89 ರನ್ಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಡೇವಿಡ್ ಮಿಲ್ಲರ್, ಆಂಡೈಲ್ ಫೆಹ್ಲುಕ್ವಾಯೋ ಸ್ವಲ್ಪ ಚೇತರಿಕೆ ನೀಡಿದ್ರು. ನಂತರ ಜೊತೆಯಾದ ಕ್ರಿಸ್ ಮೋರಿಸ್ ಮತ್ತು ಕಾಗಿಸೋ ರಬಾಡಾ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದ್ರು. ಅಂತಿಮವಾಗಿ 50 ಓವರ್ಗಳಿಗೆ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್ ಕಳೆದುಕೊಂಡು 227ರನ್ಗಳಿಸಿತ್ತು.
ದಕ್ಷಿಣ ಆಫ್ರಿಕಾ ಪರ ಕ್ರಿಸ್ ಮೋರಿಸ್ 42 ರನ್, ಫಾಫ್ ಡು ಪ್ಲೆಸಿಸ್ 38, ಆಂಡೈಲ್ ಫೆಹ್ಲುಕ್ವಾಯೋ 34, ಡೇವಿಡ್ ಮಿಲ್ಲರ್ 31 ರನ್ಗಳಿಸಿದ್ರು. ಇತ್ತ ಟೀಂ ಇಂಡಿಯಾ ಪರ ಯಜುವೇಂದ್ರ ಚಹಾಲ್ 4 ವಿಕೆಟ್, ಜಸ್ಪ್ರೀತ್ ಬುಮ್ರಾ 2, ಭುವನೇಶ್ವರ್ ಕುಮಾರ್ 2 ಮತ್ತು ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು.ಆಕರ್ಶಕ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ರೋಹಿತ್ ಶರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಅವರ್ಡ್ ಪಡೆದುಕೊಂಡ್ರು.